Mayank Agarwal : ಕರಾವಳಿಯ ದೈವೀಶಕ್ತಿ, ಪ್ರಕೃತಿ ಸೌಂದರ್ಯಕ್ಕೆ ಮನಸೋತ ಟೀಮ್ ಇಂಡಿಯಾ ಕ್ರಿಕೆಟರ್

Mayank Agarwal : ರಾವಳಿಯ ದೈವೀಶಕ್ತಿ ಮತ್ತು ಸೌಂದರ್ಯಕ್ಕೆ ಮನ ಸೋತಿರುವ ಮಯಾಂಕ್ ಅಗರ್ವಾಲ್ ವಿಶೇಷ ವೀಡಿಯೊವೊಂದನ್ನು ಮಾಡಿ ತಮ್ಮ ಇನ್‘ಸ್ಟಾಗ್ರಾಂ ಖಾತೆಯಲ್ಲಿ ಆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 33 ವರ್ಷದ ಮಯಾಂಕ್ ಅಗರ್ವಾಲ್ ಮಂಗಳವಾರ ಪುರಾಣ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು.

Mayank Agarwal  ಬೆಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ದೇಗುಲಗಳ ನಾಡು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. ಹೀಗಾಗಿ ಪ್ರತೀ ದಿನ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಾರೆ. ಟೀಮ್ ಇಂಡಿಯಾದ ( Team India) ಕ್ರಿಕೆಟಿಗ ಮಯಾಂಕ್ ಅಗರ್ವಾಲ್ (Mayank Agarwal) ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು.

Team India cricketer Mayank Agarwal who lost his mind to the divine power of the coast, the beauty of nature
Image Credit to Original Source

ಈ ವೇಳೆ ಕರಾವಳಿಯ ದೈವೀಶಕ್ತಿ ಮತ್ತು ಸೌಂದರ್ಯಕ್ಕೆ ಮನ ಸೋತಿರುವ ಮಯಾಂಕ್ ಅಗರ್ವಾಲ್ ವಿಶೇಷ ವೀಡಿಯೊವೊಂದನ್ನು ಮಾಡಿ ತಮ್ಮ ಇನ್‘ಸ್ಟಾಗ್ರಾಂ ಖಾತೆಯಲ್ಲಿ ಆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 33 ವರ್ಷದ ಮಯಾಂಕ್ ಅಗರ್ವಾಲ್ ಮಂಗಳವಾರ ಪುರಾಣ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು. ಪತ್ನಿ ಆಶಿತಾ ಸೂದ್ ಅಗರ್ವಾಲ್, ಪುತ್ರ, ತಾಯಿ ಹಾಗೂ ಕುಟುಂಬದ ಇತರ ಸದಸ್ಯರ ಜೊತೆ ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸಿದ್ದ ಮಯಾಂಕ್ ಸುಬ್ರಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ : T20 World Cup Super-8: ಸೂಪರ್-8ನಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಇವರೇ !

https://www.instagram.com/reel/C8KVeDqqnBH/?utm_source=ig_web_copy_link&igsh=MzRlODBiNWFlZA%3D%3D

ಅಲ್ಲದೆ, ಆಶ್ಲೇಷ ಬಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರಗಳನ್ನು ಮಯಾಂಕ್ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಕುಕ್ಕೆ ಸುಬ್ರಮಣ್ಯ ಭೇಟಿಯ ನಂತರ ಮಯಾಂಕ್ ಅಗರ್ವಾಲ್ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಪ್ರಸಿದ್ಧ ದೇವಾಲಯ ಪೊಳಲಿ ರಾಜರಾಜೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿ ಅಲ್ಲೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Team India cricketer Mayank Agarwal who lost his mind to the divine power of the coast, the beauty of nature
Image Credit to Original Source

https://x.com/mayankcricket/status/1801282718711615939

ಇತ್ತೀಚೆಗೆ ಮಯಾಂಕ್ ಅಗರ್ವಾಲ್ ಕುಟುಂಬ ಸದಸ್ಯರು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದರು. ಐಪಿಎಲ್ ನಂತರ ಕ್ರಿಕೆಟ್’ನಿಂದ ವಿರಾಮ ಪಡೆದಿರುವ ಮಯಾಂಕ್ ಅಗರ್ವಾಲ್, ವಿಶ್ರಾಂತಿಯ ಸಮಯದಲ್ಲಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. 33 ವರ್ಷ ವಯಸ್ಸಿನ ಮಯಾಂಕ್ ಅಗರ್ವಾಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ದಯನೀಯ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ : ಟಿ20 ವಿಶ್ವಕಪ್‌ಗಾಗಿ 106 ದಿನಗಳಲ್ಲಿ ರೆಡಿಯಾಗಿದ್ದ ನ್ಯೂ ಯಾರ್ಕ್ ಮೈದಾನ ಸದ್ಯದಲ್ಲೇ ನೆಲಸಮ !

4 ಪಂದ್ಯಗಳಲ್ಲಷ್ಟೇ ಆಡುವ ಅವಕಾಶ ಪಡೆದಿದ್ದ ಮಯಾಂಕ್ ಅಗರ್ವಾಲ್ 16ರ ಸರಾಸರಿಯಲ್ಲಿ ಕೇವಲ 64 ರನ್ ಗಳಿಸಿದ್ದರು. ಕರ್ನಾಟಕ ತಂಡದ ನಾಯಕರಾಗಿರುವ ಮಯಾಂಕ್ ಅಗರ್ವಾಲ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಭಾರತ ಪರ ಒಟ್ಟು 21 ಟೆಸ್ಟ್ ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್ವಾಲ್ 41.33ರ ಸರಾಸರಿಯಲ್ಲಿ 4 ಶತಕ ಹಾಗೂ 6 ಅರ್ಧಶತಕಗಳ ಸಹಿತ 1488 ರನ್ ಕಲೆ ಹಾಕಿದ್ದಾರೆ. ಬಲಗೈ ಬ್ಯಾಟ್ಸ್’ಮನ್ ಮಯಾಂಕ್ ಭಾರತ ಪರ 5 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

Team India cricketer Mayank Agarwal who lost his mind to the divine power of the coast, the beauty of nature
Image Credit to Original Source

ಕರ್ನಾಟಕ ತಂಡದ ನಾಯಕನಾಗಿರುವ ಮಯಾಂಕ್ ಅಗರ್ವಾಲ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ, ಕಂಬ್ಯಾಕ್ ಪ್ರಯತ್ನದಲ್ಲಿದ್ದಾರೆ. 2022ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡ ನಂತರ ಮಯಾಂಕ್ ಅಗರ್ವಾಲ್ ಅವರಿಗೆ ಮತ್ತೆ ಭಾರತ ಪರ ಆಡುವ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ : ಟಿ20 ವಿಶ್ವಕಪ್‌ಗಾಗಿ 106 ದಿನಗಳಲ್ಲಿ ರೆಡಿಯಾಗಿದ್ದ ನ್ಯೂ ಯಾರ್ಕ್ ಮೈದಾನ ಸದ್ಯದಲ್ಲೇ ನೆಲಸಮ !

Team India cricketer Mayank Agarwal who lost his mind to the divine power of the coast, the beauty of nature

Comments are closed.