Teja Nidamunuru : ವಿಶ್ವಕಪ್‌ನಲ್ಲಿ ವಿಂಡೀಸ್‌ಗೆ ಶಾಕ್ ನೀಡಿದ ನೆದರ್ಲೆಂಡ್ಸ್ ಆಟಗಾರ ನಮ್ಮ ಭಾರತೀಯ.. ಯಾರು ಈ ತೇಜ ನಿಡಮನುರು?

ಬೆಂಗಳೂರು : (Teja Nidamunuru) ಮೊನ್ನೆಯಷ್ಟೇ ಜಿಂಬಾಬ್ವೆಯ ಬುಲವಾಯೊ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ (ICC Cricket World Cup Qualifier) ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ 2 ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಆಘಾತಕಾರಿ ಸೋಲು ಕಂಡಿತ್ತು.

ಜೂನ್ 26ರಂದು ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 374 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಡಚ್ ತಂಡ ಕೂಡ 374 ರನ್ ಗಳಿಸುವ ಮೂಲಕ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು. ನಂತರ ಸೂಪರ್ ಓವರ್’ನಲ್ಲಿ ಡಚ್ ಆಟಗಾರ ಲೋಗನ್ ವ್ಯಾನ್ ಬೀಕ್ 30 ರನ್ ಸಿಡಿಸಿ ವಿಂಡೀಸ್ ಸೋಲಿಗೆ ಕಾರಣರಾಗಿದ್ದರು.

374 ರನ್’ಗಳ ಟಾರ್ಗೆಟ್ ಬೆನ್ನಟ್ಟುವ ವೇಳೆ ನೆದರ್ಲೆಂಡ್ಸ್ ಪರ ತೇಜ ನಿಡಮನುರು (Teja Nidamanuru) ಸಿಡಿಲಬ್ಬರದ ಶತಕ ಸಿಡಿಸಿದ್ದರು. 76 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳಿಂದ 111 ರನ್ ಚಚ್ಚಿದ್ದ ತೇಜ, ಸ್ಫೋಟಕ ಶತಕದೊಂದಿಗೆ ಗಮನ ಸೆಳೆದಿದ್ದರು. ಅಂದ ಹಾಗೆ ತೇಜ ನಿಡಮನುರು ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ನೆದರ್ಲೆಂಡ್ಸ್ ಪರ ಆಡುವ ತೇಜ ಭಾರತೀಯ ಮೂಲದವರು.

ತೇಜ ನಿಡಮನುರು ಹುಟ್ಟಿದ್ದು ವಿಜಯವಾಡದಲ್ಲಿ!
ತೇಜ ನಿಡಮನುರು ಅವರ ಹುಟ್ಟೂರು ಆಂಧ್ರಪ್ರದೇಶದ ವಿಜಯವಾಡ. ಆಗಸ್ಟ್ 22, 1994ರಂದು ಜನಿಸಿದ ತೇಜ ನಿಡಮನುರು ಚಿಕ್ಕವರಾಗಿದ್ದಾಗಲೇ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ತೆರಳಿ ಅಲ್ಲೇ ನೆಲೆಸಿದ್ದರು. ಚಿಕ್ಕದಿಂದಲೇ ಕ್ರಿಕೆಟ್’ನತ್ತ ಆಸಕ್ತಿ ಬೆಳೆಸಿಕೊಂಡಿದ್ದ ತೇಜ, ದೇಶೀಯ ಮಟ್ಟದಲ್ಲಿ ನ್ಯೂಜಿಲೆಂಡ್’ನ ಆಕ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಪರ ಆಡುವ ಕನಸು ನನಸಾಗಲಿಲ್ಲ. ಹೀಗಾಗಿ ನ್ಯೂಜಿಲೆಂಡನ್ನು ತೊರೆದು ಕ್ರಿಕೆಟ್ ಭವಿಷ್ಯ ಅರಸಿ ಬಂದದ್ದು ಡಚ್ಚರ ನಾಡಿಗೆ, ಅಂದ್ರೆ ನೆದರ್ಲೆಂಡ್ಸ್’ಗೆ.

ಇದನ್ನೂ ಓದಿ : ICC World Cup 2023 : ದೇಶಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ದಿಗ್ಗಜ ನಾಯಕ ಧೋನಿ ನಾಡಿನಲ್ಲಿ ಈ ಬಾರಿ ವಿಶ್ವಕಪ್ ಪಂದ್ಯಗಳೇ ಇಲ್ಲ!

ಇದನ್ನೂ ಓದಿ : Hardik Pandya : ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಪಟ್ಟಕ್ಕೆ ಕುತ್ತು, ಹಾರ್ದಿಕ್ ಪಾಂಡ್ಯಗೆ ನಾಯಕ ಪಟ್ಟ

ಉದ್ಯೋಗಕ್ಕಾಗಿ ನೆದರ್ಲೆಂಡ್ಸ್’ಗೆ ಬಂದ ತೇಜ ನಿಡಮನುರು, ಅಲ್ಲೇ ಕ್ರಿಕೆಟ್ ಭವಿಷ್ಯ ಕಂಡುಕೊಂಡರು. ಉಟ್ರೆಕ್ಟ್‌ನಲ್ಲಿರುವ ಕ್ಯಾಂಪಾಂಗ್ ಕ್ಲಬ್‌ ಸೇರಿ ಉದ್ಯೋಗದ ಜೊತೆ ಕ್ರಿಕೆಟ್ ಆಡಲಾರಂಭಿಸಿದ ತೇಜ, ತಮ್ಮ ಅಮೋಘ ಆಟದ ಮೂಲಕ ನೆದರ್ಲೆಂಡ್ಸ್ ರಾಷ್ಟೀರಯ ತಂಡಕ್ಕೂ ಆಯ್ಕೆಯಾದರು. ಕಳೆದ ವರ್ಷದ ಮೇ 31ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ತೇಜ, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ (51 ಎಸೆತಗಳಲ್ಲಿಅಜೇಯ 58 ರನ್) ಸಿಡಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧವೇ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.

Teja Nidamunuru : Our Indian player from Netherlands who shocked Windies in the World Cup.. Who is this Teja Nidamunuru?

Comments are closed.