Tilak Varma: ತಿಲಕ್ ವರ್ಮಾ “50” ಸೆಲೆಬ್ರೇಷನ್ ಸೀಕ್ರೆಟ್, ಇದು ರೋಹಿತ್ ಶರ್ಮಾ ಪುತ್ರಿಗಾಗಿ ಎಂಬ ಟೀಮ್ ಇಂಡಿಯಾ ಬ್ಯಾಟರ್

ಗಯಾನ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ 2 ವಿಕೆಟ್’ಗಳ ಸೋಲು ಕಂಡಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ (India Vs West Indies T20 series) ಆತಿಥೇಯ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. 2ನೇ ಟಿ20 ಪಂದ್ಯದಲ್ಲಿ ಭಾರತದ ಸೋಲಿನ ಮಧ್ಯೆಯೂ ಯುವ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ (Tilak Varma) ಅಮೋಘ ಅರ್ಧಶತಕದೊಂದಿಗೆ ಮಿಂಚಿದ್ದರು.

ಮೊದಲ ಟಿ20 ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 21 ವರ್ಷದ ತಿಲಕ್ ವರ್ಮಾ, ಚೊಚ್ಚಲ ಪಂದ್ಯದಲ್ಲೇ ಸ್ಫೋಟಕ 39 ರನ್ ಬಾರಿಸಿದ್ದರು. 2ನೇ ಪಂದ್ಯದಲ್ಲಿ ಮತ್ತೆ ಅಬ್ಬರಿಸಿದ್ದ ಎಡಗೈ ಬ್ಯಾಟರ್, 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿ, ಅಂತರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ಅರ್ಧಶತಕದ ಸಂಭ್ರಮವನ್ನು ವಿಚಿತ್ರ ಸೆಲೆಬ್ರೇಷನ್’ನೊಂದಿಗೆ ಆಚರಿಸಿದ್ದರು.

ತಿಲಕ್ ವರ್ಮಾ ಅವರ ಸೆಲೆಬ್ರೇಷನ್ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ತಮ್ಮ ಸೆಲೆಬ್ರೇಷನ್ ಗುಟ್ಟನ್ನು ಸ್ವತಃ ತಿಲಕ್ ವರ್ಮಾ ಅವರೇ ರಟ್ಟು ಮಾಡಿದ್ದಾರೆ. ಈ ಸೆಲೆಬ್ರೇಷನ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪುತ್ರಿ ಸಮೈರಾಗಾಗಿ (Rohit Sharma’s daughter Samaira) ಎಂದಿದ್ದಾರೆ.

“ನನ್ನ ಈ ಸೆಲೆಬ್ರೇಷನ್ ರೋಹಿತ್ ಶರ್ಮಾ ಭೈಯಾ ಅವರ ಪುತ್ರಿಗೆ ಸಮೈರಾಗಾಗಿ. ನಾನು ಮತ್ತು ಸಮೈರಾ ಭೇಟಿಯಾದಾಗಲೆಲ್ಲಾ ಈ ರೀತಿ ಆಟವಾಡುತ್ತೇವೆ. ಹೀಗಾಗಿ ನಾನು ಫಿಫ್ಟಿ ಅಥವಾ ಸೆಂಚುರಿ ಬಾರಿಸಿದಾಗ ಇದೇ ರೀತಿ ಸೆಲೆಬ್ರೇಷನ್ ಮಾಡುವುದಾಗಿ ಹೇಳಿದ್ದೆ” ಎಂದು ತಮ್ಮ ಸೆಲೆಬ್ರೇಷನ್ ಸೀಕ್ರೆಟನ್ನು ತಿಲಕ್ ವರ್ಮಾ ಬಹಿರಂಗಗೊಳಿಸಿದ್ದಾರೆ.

ಇದನ್ನೂ ಓದಿ : Bike racer Shreyas Hareesh : ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸರ್ ಶ್ರೇಯಸ್ ಹರೀಶ್ ಇನ್ನಿಲ್ಲ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 ಪಂದ್ಯ ಮಂಗಳವಾರ (ಆಗಸ್ಟ್ 8) ಗಯಾನದ ಪ್ರೊವಿಡೆನ್ಸ್ ಮೈದಾನದಲ್ಲಿ ನಡೆಯಲಿದೆ.

Tilak Varma “50” Celebration Secret, Team India Batter For Rohit Sharma’s Daughter

Comments are closed.