ಬೆಂಗಳೂರು: (Two Champions for Ranji Trophy ) ರಣಜಿ ಟ್ರೋಫಿ ದೇಶದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ. ರಣಜಿ ಟ್ರೋಫಿಗೆ ಅದರದ್ದೇ ಮಹತ್ವವಿದೆ. ರಣಜಿ ಟ್ರೋಫಿ ಗೆಲ್ಲಲು ತಂಡಗಳು ಹರಸಾಹಸವನ್ನೇ ಮಾಡುವುದನ್ನು ಕಂಡಿದ್ದೇವೆ. ರಣಜಿ ಟ್ರೋಫಿಯಲ್ಲಿ ಮುಂಬೈ ಅತ್ಯಂತ ಯಶಸ್ವೀ ತಂಡ. ದೇಶೀಯ ಕ್ರಿಕೆಟ್”ನ ದೈತ್ಯ ತಂಡವೆಂದು ಹೆಸರು ಮಾಡಿದ್ದ ಮುಂಬೈ ಇಲ್ಲಿಯವರೆಗೆ 41 ಬಾರಿ ರಣಜಿ ಟ್ರೋಫಿ ಗೆದ್ದಿದೆ. ಕರ್ನಾಟಕ ತಂಡ 8 ಬಾರಿ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
“ವರ್ಷಕ್ಕೊಬ್ಬನೇ ರಣಜಿ ಚಾಂಪಿಯನ್.. ಇದು ಇಲ್ಲಿಯವರೆಗಿನ ಲೆಕ್ಕ.. ಮುಂದಿನದ್ದು ಬೇರೆಯೇ ಲೆಕ್ಕ..” ಹೌದು. ಇನ್ನು ಮುಂದೆ ರಣಜಿ ಟ್ರೋಫಿಗೆ ಇಬ್ಬರು ಚಾಂಪಿಯನ್ಸ್. ಇಂತಹ ಒಂದು ವಿನೂತನ ಯೋಚನೆ ಬಿಸಿಸಿಐಗೆ ಬಂದಿದ್ದು, ಈ ವರ್ಷದಿಂದಲೇ ಜಾರಿಗೆ ಬರಲಿದೆ. ಹಾಗಾದ್ರೆ ಒಂದೇ ರಣಜಿ ಟ್ರೋಫಿಗೆ ಇಬ್ಬರು ಚಾಂಪಿಯನ್ಸ್ ಅಂದ್ರೆ ಹೇಗೆ..? ಬಿಸಿಸಿಐ ಪ್ಲಾನ್ ತುಂಬಾನೇ ಸಿಂಪಲ್.
ರಣಜಿ ಟ್ರೋಫಿ ಲೀಗ್ ಪಂದ್ಯಗಳನ್ನು ಎಲೈಟ್ ಹಾಗೂ ಪ್ಲೇಟ್ ಹಂತಗಳಲ್ಲಿ ಆಡಿಸಲಾಗುತ್ತದೆ. ಒಟ್ಟು 38 ತಂಡಗಳು ರಣಜಿ ಟ್ರೋಫಿಯಲ್ಲಿ ಆಡುತ್ತವೆ. ಎಲೈಟ್ ಹಂತದಲ್ಲಿ ಆಡುವ ತಂಡಗಳ ಸಂಖ್ಯೆ 32. ಈ ವರ್ಷದ ರಣಜಿ ಟ್ರೋಫಿ ಟೂರ್ನಿಯಿಂದ ಈ 32 ತಂಡಗಳನ್ನು ನಾಲ್ಕು ಗ್ರೂಪ್’ಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತೀ ಗುಂಪಿನಲ್ಲಿ 8 ತಂಡಗಳಿರಲಿದ್ದು, ತಲಾ ಏಳು ಲೀಗ್ ಪಂದ್ಯಗಳನ್ನು ಆಡಲಿವೆ. ಪ್ರತೀ ಗ್ರೂಪ್”ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ತಲುಪಲಿವೆ. ನಂತರ ಸೆಮಿಫೈನಲ್, ಬಳಿಕ ಫೈನಲ್.
ಈ ಹಿಂದಿನ ರಣಜಿ ಫಾರ್ಮ್ಯಾಟ್ ಹೇಗಿತ್ತು ಅಂದ್ರೆ, ಪ್ಲೇಟ್ ಹಂತದಲ್ಲಿ ಆಡುವ 6 ತಂಡಗಳ ಪೈಕಿ ಅಗ್ರಸ್ಥಾನ ಪಡೆಯುವ ತಂಡ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಅಲ್ಲಿ ಎಲೈಟ್ ಹಂತದ ತಂಡವನ್ನು ಎದುರಿಸುತ್ತಿತ್ತು. ರಣಜಿ ನಾಕೌಟ್ ಹಂತದಲ್ಲಿ ಎಲೈಟ್ ತಂಡಗಳಿಗೆ ದುರ್ಬಲ ಪ್ಲೇಟ್ ತಂಡ ಎದುರಾಗುವುದನ್ನು ತಪ್ಪಿಸಲು ಬಿಸಿಸಿಐ ಹೊಸ ಫಾರ್ಮ್ಯಾಟ್’ನಲ್ಲಿ ರಣಜಿ ಟ್ರೋಫಿಯನ್ನು ಆಡಿಸಲು ಮುಂದಾಗಿದೆ.
ಅದರ ಪ್ರಕಾರ ಇನ್ನು ಮುಂದೆ ಪ್ಲೇಟ್ ಹಂತದ ಟಾಪ್ ತಂಡಕ್ಕೆ ರಣಜಿ ನಾಕೌಟ್ ಹಂತಕ್ಕೆ ಪ್ರವೇಶವಿಲ್ಲ. ಪ್ಲೇಟ್ ಗ್ರೂಪ್’ನ ಆರು ತಂಡಗಳು ಪರಸ್ಪರ ತಲಾ ಐದು ಲೀಗ್ ಪಂದ್ಯಗಳನ್ನಾಡಲಿದ್ದು, ಟಾಪ್-4 ತಂಡಗಳಿಗೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ನಂತರ ಫೈನಲ್. ಅಲ್ಲೇ ಒಬ್ಬ ಚಾಂಪಿಯನ್. ಈ ವರ್ಷ ಅಂದ್ರೆ, 2022-23ನೇ ಸಾಲಿನಲ್ಲಿ ಪ್ಲೇಟ್ ಹಂತದಲ್ಲಿ ಫೈನಲ್ ಪ್ರವೇಶಿಸಿದ ಎರಡು ತಂಡಗಳು 2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಎಲೈಟ್ ಹಂತಕ್ಕೆ ಬಡ್ತಿ ಪಡೆಯಲಿವೆ. ಎಲೈಟ್ ಹಂತದಲ್ಲಿ ಆಡುವ 32 ತಂಡಗಳ ಪೈಕಿ ಕೊನೆಯ ಎರಡು ಸ್ಥಾನಗಳನ್ನು ಪಡೆದ ತಂಡ, ಮುಂದಿನ ವರ್ಷ ಪ್ಲೇಟ್ ಹಂತಕ್ಕೆ ಹಿಂಬಡ್ತಿ ಪಡೆಯಲಿದೆ.
ಇದನ್ನೂ ಓದಿ : Two Champions for Ranji Trophy : ಇನ್ನು ಮುಂದೆ ರಣಜಿ ಟ್ರೋಫಿಗೆ ಇಬ್ಬರು ಚಾಂಪಿಯನ್ಸ್, ಏನಿದು ಬಿಸಿಸಿಐನ ಹೊಸ ಪ್ಲಾನ್ ?
ಇದನ್ನೂ ಓದಿ : Mukesh Ambani Ravi Shastri : ರವಿಶಾಸ್ತ್ರಿ ಜೊತೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಮುಕೇಶ್ ಅಂಬಾನಿ, ಏನಿದರ ಗುಟ್ಟು?
Two Champions for Ranji Trophy what is BCCI’s new plan