ನವದೆಹಲಿ : ಭಾರತಕ್ಕೆ U-19 ವಿಶ್ವಕಪ್ ಗೆಲ್ಲಿಸಿಕೊಟ್ಟ ವಿಜೇತ ನಾಯಕ ಉನ್ಮುಕ್ತ್ ಚಾಂದ್ 28 ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚಾಂದ್, ಭಾರವಾದ ಹೃದಯದಿಂದ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ.

ದೆಹಲಿ ಮೂಲದ ಉನ್ಮುಕ್ತ್ ಚಾಂದ್ 2012ರಲ್ಲಿ ಭಾರತದ ಕಿರಿಯರ ತಂಡಕ್ಕೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದುಕೊಟ್ಟ ನಾಯಕ. ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸುವಲ್ಲಿ ವಿಫಲರಾಗಿದ್ದರು. U-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 110 ರನ್ ಗಳಿಸಿ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ವಿದಾಯದ ಹೊತ್ತಲ್ಲೂ ವಿಶ್ವಕಪ್ ಎತ್ತಿ ಹಿಡಿದ ವಿಡಿಯೋ ಪೋಸ್ಟ್ ಮಾಡಿದ್ದಾರೆ.
2011ರಲ್ಲಿ ಮೊದಲ ಬಾರಿಗೆ ಐಪಿಎಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದ ಚಾಂದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಸುಮಾರು ನಾಲ್ಕು ವರ್ಷಗಳ ಕಾಲ ಸುಮಾರು 21 ಪಂದ್ಯಗಳಲ್ಲಿಆಟವಾಡಿದ್ದೂ ಕೂಡ ಗಳಿಸಿದ್ದು ಕೇವಲ 300 ರನ್ ಮಾತ್ರ.

ಉನ್ಮುಕ್ತ್ ಚಾಂದ್ ಕಿರಿಯ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಯುವರಾಜ್, ಸಿಂಗ್, ಮೊಹಮ್ಮದ್ ಕೈಪ್, ವಿರಾಟ್ ಕೊಯ್ಲಿ ಅವರಂತಹ ಆಟಗಾರರು ಕೂಡU-19 ವಿಶ್ವಕಪ್ ಆಡಿ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರು. ಅಂತೆಯೇ ಉನ್ಮುಕ್ ಚಾಂದ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗ್ತಾರೆ ಅನ್ನೋ ನಿರೀಕ್ಷೆಯನು ಇಟ್ಟುಕೊಳ್ಳಲಾಗಿತ್ತು. ಆದರೆ ಸ್ಥಿರ ಪ್ರದರ್ಶನ ತೋರುವಲ್ಲಿ ಚಾಂದ್ ವಿಫಲರಾಗಿದ್ದರು.
ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರೂ ಕೂಡ ಉನ್ಮುಕ್ತ್ ಚಾಂದ್ ಅಮೇರಿಕಾ ಪರ ಬ್ಯಾಟ್ ಬೀಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆದರೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಣ್ಣ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿರೋದು ಚಾಂದ್ ಮುಂದಿನ ದಿನಗಳಲ್ಲಿ ಅಮೇರಿಕಾ ತಂಡ ಸೇರುವ ಸಾಧ್ಯತೆ ದಟ್ಟವಾಗಿದೆ.