ಸೋಮವಾರ, ಏಪ್ರಿಲ್ 28, 2025
HomeSportsCricketಬಾಳೆಹಣ್ಣಿಗೆ ₹35 ಲಕ್ಷ ಬಿಲ್, ₹1.74 ಕೋಟಿ ಅಡುಗೆ ಬಿಲ್‌, ಸುಲಿಗೆ ಕೊಲೆ ಬೆದರಿಕೆ...

ಬಾಳೆಹಣ್ಣಿಗೆ ₹35 ಲಕ್ಷ ಬಿಲ್, ₹1.74 ಕೋಟಿ ಅಡುಗೆ ಬಿಲ್‌, ಸುಲಿಗೆ ಕೊಲೆ ಬೆದರಿಕೆ : ಇದು ಕ್ರಿಕೆಟ್ ಸಂಸ್ಥೆಯ ಕರ್ಮಕಾಂಡ

- Advertisement -

ಡೆಹ್ರಾಡೂನ್: ಬಾಳೆಹಣ್ಣುಗಳಿಗೆ ರೂ 35 ಲಕ್ಷ ಬಿಲ್. ಆಹಾರ ಮತ್ತು ಅಡುಗೆಗಾಗಿಯೇ ರೂ 1.74 ಕೋಟಿಗೂ ಹೆಚ್ಚು ಬಿಲ್; ದೈನಂದಿನ ಭತ್ಯೆಗಾಗಿ ರೂ 49.5 ಲಕ್ಷ; ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 11 ಕೋಟಿ ರೂ. ಆಟಗಾರರ ಬಾಕಿ ಪಾವತಿಸದಿರುವುದು. ರಾಜ್ಯ ರಣಜಿ ತಂಡಕ್ಕೆ ಆಟಗಾರರ ಆಯ್ಕೆಯಲ್ಲಿ ಮೋಸ ಮತ್ತು ಅನ್ಯಾಯ, ಆಯ್ಕೆಯಾಗಿ ವಸೂಲಿ, ನಂತರ ಆಟಗಾರರು ಮತ್ತು ಅವರ ಪೋಷಕರಿಗೆ ಕೊಲೆ ಬೆದರಿಕೆ. ಇದು ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆಯ (Uttarakhand Cricket Association big scam) ಕರ್ಮಕಾಂಡ.

ಹಣಕಾಸಿನ ಅವ್ಯವಹಾರದಿಂದ ಹಿಡಿದು ಆಟಗಾರರಿಗೆ ಬೆದರಿಕೆಯವರೆಗಿನ ಆರೋಪಗಳನ್ನು ಉತ್ತರಾಖಂಡದ ಕ್ರಿಕೆಟ್ ಸಂಸ್ಥೆ (The Cricket Association of Uttarakhand) ಎದುರಿಸುತ್ತಿದೆ. ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹೀಮ್ ವರ್ಮಾ (CAU secretary Mahim Verma), ತಂಡದ ಮುಖ್ಯ ಕೋಚ್ ಮನೀಶ್ ಝಾ ( team’s head coach Manish Jha) ಮತ್ತು ಸಂಸ್ಥೆಯ ವಕ್ತಾರ ಗುಸೈನ್ (CAU spokesperson Sanjay Gusain) ವಿರುದ್ಧ ಅಂಡರ್-19 ಕ್ರಿಕೆಟ್’ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರನೊಬ್ಬನ ತಂದೆ ಉತ್ತರಾಖಂಡ್ ಪೊಲೀಸರಿಗೆ ದೂರು ನೀಡಿದ್ದರು. ಈ ಮೂವರ ವಿರುದ್ಧ ಡೆಹ್ರಾಡೂನ್”ನ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ವಸೂಲಿ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ FIR ದಾಖಲಾಗಿದ್ದು, ಮೂವರನ್ನೂ ವಿಚಾರಣೆ ನಡೆಸಲಾಗಿದೆ.

ಭಾರತ ಅಂಡರ್-19 ತಂಡದ ಮಾಜಿ ಆಟಗಾರ ಆರ್ಯ ಸೇಥಿ (Former India Under-19 player Arya Sethi) ಅವರ ತಂದೆ ವೀರೇಂದ್ರ ಸೇಥಿ (Virendra Sethi), ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ, ವಕ್ತಾರ ಮತ್ತು ತಂಡದ ಕೋಚ್ ವಿರುದ್ಧ ದೂರು ದಾಖಲಿಸಿದ್ದರು. ಕಳೆದ ವರ್ಷ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ತಮ್ಮ ಮಗನಿಗೆ ತಂಡ ಕೋಚ್ ಮನೀಶ್ ಝಾ, ಟೀಮ್ ಮ್ಯಾನೇಜರ್ ನವನೀತ್ ಮಿಶ್ರಾ ಹಾಗೂ ವೀಡಿಯೋ ವಿಶ್ಲೇಷಕ ಪಿಯೂಷ್ ರಘುವಂಶಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ವೀರೇಂದ್ರ ಸೇಥಿ ದೂರು ಕೊಟ್ಟಿದ್ದರು.

ಉತ್ತರಾಖಂಡ್ ಪ್ರದೇಶದ ಕ್ರಿಕೆಟಿಗರು ಹೇಳುವ ಪ್ರಕಾರ ಕ್ರಿಕೆಟ್ ಟೂರ್ನಿಗಳು ಮತ್ತು ಟ್ರೈನಿಂಗ್ ಕ್ಯಾಂಪ್ ಸಂದರ್ಭದಲ್ಲಿ ಆಟಗಾರರಿಗೆ ಅಲ್ಲಿನ ಕ್ರಿಕೆಟ್ ಸಂಸ್ಥೆ ಊಟವನ್ನೂ ಪೂರೈಸಿಲ್ಲ, ವೇತನ ನೀಡಿಲ್ಲ. ದೇಶೀಯ ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಆಟಗಾರರಿಗೆ ದೈನಂದಿನ ಭತ್ಯೆಯ ರೂಪದಲ್ಲಿ ಕೇವಲ 100 ರೂ. ಪಾವತಿಸಲಾಗಿದೆ. ಬಿಸಿಸಿಐ ನಿಯಮಗಳ ಪ್ರಕಾರ ದೈನಂದಿನ ಭತ್ಯೆಯ ರೂಪದಲ್ಲಿ ಆಟಗಾರರಿಗೆ ಪ್ರತೀ ದಿನ 1,500 ರೂ. ಪಾವತಿಸಲೇಬೇಕು. ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆಯ ಆಡಿಟ್ ರಿಪೋರ್ಟ್ (2020 ಮಾರ್ಚ್ 31) ಪ್ರಕಾರ 1,74,07,346 ರೂ.ಗಳನ್ನು ಆಹಾರಕ್ಕಾಗಿ, 49,58,750 ರೂ.ಗಳನ್ನು ದೈನಂದಿನ ಭತ್ಯೆಗಾಗಿ, 35 ಲಕ್ಷ ರೂ.ಗಳನ್ನು ಬರೀ ಬಾಳೆಹಣ್ಣಿಗಾಗಿ ಮತ್ತು 22 ಲಕ್ಷ ರೂ.ಗಳನ್ನು ವಾಟರ್ ಬಾಟಲ್’ಗಳಿಗಾಗಿ ಖರ್ಚು ಮಾಡಲಾಗಿದೆ.

ಉತ್ತರಾಖಂಡ್ ಕ್ರಿಕೆಟ್ ಸಂಸ್ಧೆಯ ವಿರುದ್ಧ ವೀರೇಂದ್ರ ಸೇಥಿ ಮಾಡಿರುವ ಆರೋಪಗಳನ್ನು, ಉತ್ತರಾಖಂಡ್ ಪರ ಆಡುವ ರಾಜಸ್ಥಾನ ಆಟಗಾರ ರಾಬಿನ್ ಬಿಷ್ಟ್ ದೃಢೀಕರಿಸಿದ್ದಾರೆ. “ಸ್ವಿಮ್ಮಿಂಗ್ ಸೆಷನ್ ಬಳಿಕ ನಾವು ಹೋಟೆಲ್”ಗೆ ಮರಳಿ ಮಧ್ಯಾಹ್ನ ಊಟಕ್ಕೆಂದು ಹೋದಾಗ ನಮಗೆ ನಿಜಕ್ಕೂ ಶಾಕ್ ಎದುರಾಯಿತು. ಆಟಗಾರರಿಗೆ ಊಟ ಪೂರೈಸದಂತೆ ಕ್ರಿಕೆಟ್ ಸಂಸ್ಥೆಯಿಂದ ಸೂಚನೆ ನೀಡಲಾಗಿದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದರು. ನಾವು ಟೀಮ್ ಮ್ಯಾನೇಜರ್ ಸಂಪರ್ಕ ಮಾಡಿದಾಗ ‘ಸ್ವಿಗ್ಗಿ ಅಥವಾ ಝೊಮೇಟೋದಿಂದ ಏನಾದರೂ ಆರ್ಡರ್ ಮಾಡಿ, ಇಲ್ಲವೇ ಉಪವಾಸವಿರಿ. ಒಂದು ದಿನ ಉಪವಾಸವಿದ್ದರೆ ನೀವೇನು ಸಾಯುವುದಿಲ್ಲ’ ಎಂದರು”.

  • ರಾಬಿನ್ ಬಿಷ್ಟ್, ಉತ್ತರಾಖಂಡ್ ಪರ ಆಡಿದ್ದ ಆಟಗಾರ.

ಇದನ್ನೂ ಓದಿ : Rohith Sharma sixer injures : ಸಿಕ್ಸರ್ ಬಡಿದು ಗಾಯಗೊಂಡಿದ್ದ ಹುಡುಗಿಯನ್ನು ಸಂತೈಸಿದ ರೋಹಿತ್ ಶರ್ಮಾ

ಇದನ್ನೂ ಓದಿ : Team India has got New Spinner : ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸ್ಪಿನ್ ಬೌಲಿಂಗ್ ಮಾಡಿದ್ದನ್ನು ನೋಡಿದ್ದೀರಾ ?

Uttarakhand Cricket Association big scam, 35 lakh bill for banana, 1.74 crore cooking bill extortion and death threats

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular