ಸೋಮವಾರ, ಏಪ್ರಿಲ್ 28, 2025
HomeSportsCricketVinod Kambli : ಸಚಿನ್ ಆತ್ಮೀಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುರ್ಗತಿ ? ಕೆಲಸ ಹುಡುಕುತ್ತಿದ್ದಾರೆ...

Vinod Kambli : ಸಚಿನ್ ಆತ್ಮೀಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುರ್ಗತಿ ? ಕೆಲಸ ಹುಡುಕುತ್ತಿದ್ದಾರೆ ಮಾಜಿ ಕ್ರಿಕೆಟರ್

- Advertisement -

ಮುಂಬೈ: ಆತ ಒಂದು ಕಾಲದಲ್ಲಿ ಕ್ರಿಕೆಟ್ ಮೈದಾನದಲ್ಲಿ ಧೂಳೆಬ್ಬಿಸಿದ್ದ ಕ್ರಿಕೆಟರ್. ಸಚಿನ್ ತೆಂಡೂಲ್ಕರ್ ಆವರ ಆತ್ಮೀಯ ಸ್ನೇಹಿತ. ಬಾಲ್ಯದಲ್ಲೇ ಸಚಿನ್ ಜೊತೆ ವಿಶ್ವದಾಖಲೆಯ ಜೊತೆಯಾಟವಾಡಿದ್ದ ಪ್ರತಿಭಾವಂತ. ಆಡಿದ ಮೊದಲ ಆರು ಟೆಸ್ಟ್ ಪಂದ್ಯಗಳಲ್ಲಿ ಎರಡು ದ್ವಿಶತಕ ಮತ್ತು ಎರಡು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ಟ್ಯಾಲೆಂಟೆಡ್ ಕ್ರಿಕೆಟರ್. ಆದ್ರೆ ಅದೇ ಕ್ರಿಕೆಟಿಗನೀಗ ಜೀವನ ನಿರ್ವಹಣೆಗಾಗಿ ಕೆಲಸದ ಹುಡುಕಾಟದಲ್ಲಿದ್ದಾನೆ. ಇದು ಮುಂಬೈನ ದಿಗ್ಗಜ ಕ್ರಿಕೆಟಿಗ ವಿನೋದ್ ಕಾಂಬ್ಳಿಯವರ ಕಥೆ (Vinod Kambli).

50 ವರ್ಷದ ವಿನೋದ್ ಕಾಂಬ್ಳಿ ಈಗ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಕಾಂಬ್ಳಿಯವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. “ನಾನೊಬ್ಬ ಜೀವನ ನಿರ್ವಹಣೆಗಾಗಿ ಬಿಸಿಸಿಐ ಪೆನ್ಶನ್ ಮೇಲೆಯೇ ಅವಲಂಬಿತನಾಗಿರುವ ರಿಟೈರ್ಡ್ ಕ್ರಿಕೆಟರ್. ನನ್ನ ಏಕೈಕ ಆರ್ಥಿಕ ಮೂಲವೆಂದರೆ ಬಿಸಿಸಿಐ ಪೆನ್ಶನ್ ಮಾತ್ರ. ಇದಕ್ಕಾಗಿ ಬಿಸಿಸಿಐಗೆ ನಾನು ಆಭಾರಿಯಾಗಿದ್ದೇನೆ. ಏಕೆಂದರೆ ಬಿಸಿಸಿಐ ನೀಡುತ್ತಿರುವ ಪೆನ್ಶನ್ ನನ್ನ ಕುಟುಂಬದವನ್ನು ಸಾಕುತ್ತಿದೆ”.

  • ವಿನೋದ್ ಕಾಂಬ್ಳಿ, ಮಾಜಿ ಕ್ರಿಟಿಗ

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿನೋದ್ ಕಾಂಬ್ಳಿ ಕ್ರಿಕೆಟ್ ಕೋಚಿಂಗ್’ನಂತಹ ಕೆಲಸದ ಹುಡುಕಾಟದಲ್ಲಿದ್ದಾರೆ. “ನನಗೀಗ ಕ್ರಿಕೆಟ್ ಕೋಚಿಂಗ್’ನಂತಹ ಕೆಲಸ ಬೇಕಾಗಿದೆ. ಮುಂಬೈ ಕ್ರಿಕೆಟ್ ಸಂಸ್ಥೆ ಮುಂಬೈ ತಂಡದ ಕೋಚ್ ಆಗಿ ಅಮೋಲ್ ಮಜುಮ್ದಾರ್ ಅವರನ್ನು ಉಳಿಸಿಕೊಂಡಿದೆ. ಆದರೆ ಎಲ್ಲಾದರೂ ಮುಂಬೈ ತಂಡಕ್ಕೆ ನನ್ನ ಅಗತ್ಯವಿದ್ದರೆ ನಾನು ಸದಾ ಸಿದ್ಧನಿದ್ದೇನೆ. ಅಮೋಲ್ ಜೊತೆ ನಾನು ಸಾಕಷ್ಟು ಪಂದ್ಯಗಳನ್ನಾಡಿದ್ದು, ಅವರ ಜೊತೆ ಕೆಲಸ ಮಾಡಲು ಯಾವುದೇ ಅಭ್ಯಂತರವಿಲ್ಲ. ಮುಂಬೈ ಕ್ರಿಕೆಟ್ ಸಂಸ್ಥೆಯಿಂದ (Mumbai Cricket Association) ನಾನು ಈ ಸಹಾಯವನ್ನು ನಿರೀಕ್ಷಿಸುತ್ತಿದ್ದೇನೆ”.

  • ವಿನೋದ್ ಕಾಂಬ್ಳಿ, ಮಾಜಿ ಕ್ರಿಟಿಗ

ವಿನೋದ್ ಕಾಂಬ್ಳಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಬಾಲ್ಯ ಸ್ನೇಹಿತ. ಇಬ್ಬರೂ ಒಟ್ಟಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಇವರಿಬ್ಬರ ಜೋಡಿ ಕ್ರಿಕೆಟ್ ಜಗತ್ತಿನಲ್ಲಿ ತುಂಬಾನೇ ಫೇಮಸ್. ಆದರೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರ ಹೊರತಾಗಿಯೂ ಸಚಿನ್ ಅವರಿಂದ ಯಾವುದೇ ಸಹಾಯ ನಿರೀಕ್ಷೆ ಮಾಡುತ್ತಿಲ್ಲ ಎಂದು ಕಾಂಬ್ಳಿ ಹೇಳಿದ್ದಾರೆ. “ನನ್ನ ಪರಿಸ್ಥಿತಿಯ ಬಗ್ಗೆ ಸಚಿನ್’ಗೆ ಎಲ್ಲವೂ ಗೊತ್ತಿದೆ. ಆದರೆ ನಾನು ಆತನಿಂದ ಯಾವುದೇ ಸಹಾಯದ ನಿರೀಕ್ಷೆಯಲ್ಲಿಲ್ಲ. ಸಚಿನ್ ನನಗೆ Tendulkar Middlesex Global Academy ಯಲ್ಲಿ ಕೆಲಸ ಕೊಟ್ಟಿದ್ದ. ಸಚಿನ್ ಬಗ್ಗೆ ನನಗೆ ಖುಷಿಯಿದೆ. ಆತ ನನ್ನ ಒಳ್ಳೆಯ ಸ್ನೇಹಿತ” ಎಂದು ಕಾಂಬ್ಳೆ ಹೇಳಿದ್ದಾರೆ.

ತೀರಾ ಬಡ ಕುಟುಂಬದಿಂದ ಬಂದಿದ್ದ ವಿನೋದ್ ಕಾಂಬ್ಳಿ, ತಮ್ಮ ಅದ್ಭುತ ಆಟದಿಂದಲೇ ಹಂತ ಹಂತವಾಗಿ ಮೇಲಕ್ಕೇರುತ್ತಾ ಬಂದವರು. ಭಾರತ ಪರ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನಾಡಿರುವ ಕಾಂಬ್ಳಿ, ಪ್ರಥಮದರ್ಜೆ ಕ್ರಿಕೆಟ್’ನಲ್ಲಿ 35 ಶತಕಗಳ ಸಹಿತ 9,965 ರನ್ ಗಳಿಸಿದ್ದಾರೆ. ಆದರೆ ಅಶಿಸ್ತಿನ ನಡವಳಿಕೆಯಿಂದಲೇ ಕಾಂಬ್ಳಿ ತಮ್ಮ ಕ್ರಿಕೆಟ್ ಜೀವನವನ್ನು ಹಾಳು ಮಾಡಿಕೊಂಡಿದ್ದರು.

ಇದನ್ನೂ ಓದಿ : KL Rahul : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಜಿಂಬಾಬ್ವೆ ಯಾಕೆ ಸ್ಪೆಷಲ್ ಗೊತ್ತಾ ?

ಇದನ್ನೂ ಓದಿ : KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್

Vinod Kambli best friend of Sacin Tendulkar Need of Work Amid Financial Condition Worsens

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular