Karnataka BJP MLAs : ಸಚಿವ ಸ್ಥಾನ ಸಿಗದಕ್ಕೆ ಬೇಸರ : ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡ ಶಾಸಕರು

ಬೆಂಗಳೂರು: (Karnataka BJP MLAs) ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರೋ ಕನಸಿನಲ್ಲಿರೋ ಬಿಜೆಪಿಗೆ ಸದ್ಯ ಮೂಲ‌ಮತ್ತು ವಲಸಿಗರ ಫೈಟ್ ಹಾಗೂ ಸಚಿವ ಸ್ಥಾನಾಕಾಂಕ್ಷಿಗಳ ಮುನಿಸು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಒಂದು ವರ್ಷದಿಂದ ಸಚಿವ ಸಂಪುಟ ವಿಸ್ತರಣೆಗಾಗಿ ಕಾದಿದ್ದ ಸಚಿವ ಸ್ಥಾನಾಕಾಂಕ್ಷಿ‌ಶಾಸಕರು ಸದ್ಯ ಮೌನ ಕ್ಕೆ ಜಾರಿದ್ದು, ಪಕ್ಷದ ಚಟುವಟಿಕೆಗಳಿಂದ ದೂರವುಳಿದು ಮುನಿಸು ತೋರುತ್ತಿರೋದು ಬಿಜೆಪಿ ವರಿಷ್ಠರ ಆತಂಕಕ್ಕೆ ಕಾರಣವಾಗಿದೆ.

ಬಸವರಾಜ್ ಬೊಮ್ಮಾಯಿ‌ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಸಂಪುಟ ವಿಸ್ತರಣೆ ಹಾಗೂ ಸಂಪುಟ ಪುನಾರಚನೆಯ ಸಂಗತಿ ಚರ್ಚೆಗೆ ಬರುತ್ತಲೇ ಇದೆ. ಶ್ರಾವಣಕ್ಕೆ, ಸಂಕ್ರಾಂತಿಗೆ, ಯುಗಾದಿ ಎಂದು ಸಂಪುಟ ಪುನಾರಚನೆಯ ಮುಹೂರ್ತ ವಿಸ್ತರಣೆಯಾಗುತ್ತಲೇ ಇದೆ‌. ಆದರೆ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವಾಗಲೂ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ‌ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಬಿಜೆಪಿಯ ಹಲವು ಶಾಸಕರು ಹಾಗೂ ಮಾಜಿ ಸಚಿವರುಗಳು ಬಿಜೆಪಿಯ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಾರೆ. ಹಾಗಿದ್ದರೇ ಪ್ರಮುಖವಾಗಿ ಸಂಪುಟ ವಿಸ್ತರಣೆಗಾಗದ ಹಾಗೂ ಸ್ಥಾನ ಸಿಗದ ಕಾರಣಕ್ಕೆ ತಟಸ್ಥ ನಿಲುವು ತಳೆದಿರುವ ಶಾಸಕರು ಯಾರು ಅನ್ನೋದನ್ನು‌ ಗಮನಿಸೋದಾದರೇ,

1 .‌ರಮೇಶ್ ಜಾರಕಿಹೊಳಿ- ಸಚಿವರಾಗಿದ್ದಲೇ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಗೆ ದುಂಬಾಲು ಬಿದ್ದಿದ್ದರು.‌ ಆದರೆ ಇದುವರೆಗೂ ಸ್ಥಾನ ಸಿಕ್ಕಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಪಕ್ಷದ ಚಟುವಟಿಕೆ ಹಾಗೂ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.

2 ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ತುಂಬುವ ಹೊಣೆ ಹೊತ್ತಿದ್ದ ಸಿ.ಪಿ.ಯೊಗೇಶ್ವರ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೂ ಸ್ಥಾನಮಾನ ಲಭ್ಯವಾಗಿಲ್ಲ. ಹೀಗಾಗಿ ಸಿಪಿವೈ ಕೂಡ ಬಿಜೆಪಿಯ ಕಾರ್ಯಕ್ರಮಗಳಿಗೆ ಗೈರಾಗಲಾರಂಭಿಸಿದ್ದಾರೆ. ಆರ್‌.ಶಂಕರ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಅಪ್ಪಚ್ಚು ರಂಜನ್, ಆನಂದ ಮಾಮನಿ ಸೇರಿದಂತೆ ಹಲವು ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ.

ಇನ್ನೇನು ಕೆಲ ದಿನಗಳಲ್ಲಿ ಬಿಜೆಪಿ ಪಕ್ಷ ಸಂಘಟಿಸಲಿರುವ ಜಿಲ್ಲಾವಾರು ಹಿರಿಯ ನಾಯಕರ ಪ್ರವಾಸದ ವೇಳೆಯಲ್ಲೂ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದಿರಲು ತೀರ್ಮಾನ ಮಾಡಿದ್ದಾರಂತೆ. ಇದರಿಂದ ಈಗಾಗಲೇ ನಾಲ್ಕು ಹಂತಗಳಲ್ಲಿ‌ ನಳಿನ್ ಕುಮಾರ್ ಕಟೀಲ್, ಬಿಎಸ್ವೈ, ಬೊಮ್ಮಾಯಿ‌ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ನಡೆಯೋ ಜಿಲ್ಲಾ ಪ್ರವಾಸದ ಕಾರ್ಯಕ್ರಮಕ್ಕೆ ಹಿನ್ನೆಡೆಯಾಗಲಿದೆ ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಕೇಳಿಬಂದಿದೆ.

ಇದನ್ನೂ ಓದಿ : BS Yeddyurappa : ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ: ರಾಜಾಹುಲಿ ಮನವೊಲಿಕೆಗೆ ಹೈಕಮಾಂಡ್ ಹೊಸ ತಂತ್ರ

ಇದನ್ನೂ ಓದಿ : Next Chief Minister Murugesh Nirani : ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ: ಏನಿದು ವೈರಲ್ ಪೋಸ್ಟರ್ ನ ಅಸಲಿಯತ್ತು?

Frustrated with not getting a ministerial position, Karnataka BJP MLAs kept distance from party activities

Comments are closed.