ನವದೆಹಲಿ : ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ತೆರಳಿರೋದ ಪೋಟೋ ವೈರಲ್ ಆಗಿದೆ.
ಕೊರೊನಾ ನಡುವಲ್ಲೇ ಭಾರತೀಯ ಕ್ರಿಕೆಟಿಗರು ಪತ್ನಿ ಯೊಂದಿಗೆ ಆಗಮಿಸಲು ಇಂಗ್ಲೆಂಡ್ ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಗೆ ತೆರಳಿದ್ದಾರೆ. ವಿರುಷ್ಕಾ ಜೊತೆ ಪುತ್ರಿ ವಮಿಕಾ ಕೂಡ ಕಾಣಿಸಿಕೊಂಡಿದ್ದಾಳೆ. ಟೀಮ್ ಇಂಡಿಯಾ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಿದೆ. ಆಟಗಾರರು ಮೊದಲು ಲಂಡನ್ ತಲುಪಲಿದ್ದಾರೆ.
ಟೀ ಇಂಡಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಂತರ ಇಂಗ್ಲೆಂಡ್ ವಿರುದ್ದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಇದೀಗ ವಿರುಷ್ಕಾ ದಂಪತಿಗಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.