ಕನ್ನಡ ಕೊಳಕು ಭಾಷೆ ಎಂದ ಗೂಗಲ್ : ಸ್ವಾಭಿಮಾನ ಕೆಣಕಿದ್ರೆ ಹುಷಾರ್ ಎಂದ ಕನ್ನಡಿಗರು

ಬೆಂಗಳೂರು : ಗೂಗಲ್ ಕನ್ನಡಿಗರ ಸ್ವಾಭಿಮಾನ ಕೆಣಕಿದೆ. ಐತಿಹಾಸಿಕ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಯನ್ನು ಗೂಗಲ್ ಕೊಳಕು ಭಾಷೆ ಎನ್ನುವ ಮೂಲಕ ಅಪಮಾನ ಮಾಡಿದೆ. ಇದರಿಂದಾಗಿ ಕನ್ನಡಿಗರು ಸಿಡಿದೆದ್ದಿದ್ದಾರೆ.

ಗೂಗಲ್ ಸರ್ಚ್ ಇಂಜಿನ್ ನಲ್ಲಿ ಕನ್ನಡ ಎಂದು  ಸರ್ಚ್ ಮಾಡಿದ್ರೇ ಕೊಳಕು ಭಾಷೆ  ತೋರಿಸುವ ಮೂಲಕ ಕನ್ನಡವನ್ನು ಅಪಮಾನಿಸಿದೆ. ಕನ್ನಡಿಗರು ಗೂಗಲ್ ವಿರುದ್ಧ ಆಕ್ರೋಶ ಕೂಡ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ‌ ಕುರಿತು ಆಕ್ರೋಸ ವ್ಯಕ್ತವಾಗುತ್ತಿದೆ.

ಇದು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಕನ್ನಡ ಭಾಷೆಯ ಬಗ್ಗೆ ಗೂಗಲ್ ಮಾಡಿರುವಂತ ಈ ವಿಚಾರದ ಬಗ್ಗೆ ನಾವು ಕಾನೂನು ಹೋರಾಟಕ್ಕೆ ಇಳಿಯುತ್ತೇವೆ. ಕನ್ನಡ ಭಾಷೆಗೆ ಕೊಳಕು ಸ್ಥಾನ ನೀಡಿದ ಗೂಗಲ್ ಗೆ ಲೀಗಲ್ ನೋಟಿಸ್ ನೀಡಲಾಗುತ್ತದೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಅವಮಾನ ಮಾಡುವುದನ್ನು ಎಂದುಗೂ ಸಹಿಸೋದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಎಚ್ಚರಿಸಿದ್ದಾರೆ.

Comments are closed.