ಭಾನುವಾರ, ಏಪ್ರಿಲ್ 27, 2025
HomeSportsCricketVirat Kohli : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ

Virat Kohli : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ

- Advertisement -

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎಷ್ಟೇ ಬಲಿಷ್ಠವಾಗುತ್ತಿದ್ದರೂ ಕೂಡ, ಇದುವರೆಗೂ ಐಪಿಎಲ್‌ ಟ್ರೋಫಿಯನ್ನು ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಅದ್ರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ (Virat Kohli) ನಾಯಕತ್ವದಲ್ಲಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರೂ ಸೋಲನ್ನು ಕಂಡು ಕನ್ನಡಿಗರಿಗೆ ನಿರಾಸೆ ಮೂಡಿಸಿತ್ತು. ಆದ್ರೆ ಈ ಬಾರಿ ಶತಾಯಗತಾಯ ಟ್ರೋಫಿ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಆರ್‌ಸಿಬಿ ಇದೀಗ ವಿರಾಟ್‌ ಕೊಹ್ಲಿಗೆ (Virat Kohli RCB captain) ಮತ್ತೆ ತಂಡದ ನಾಯಕತ್ವ ವಹಿಸಲು ಮುಂದಾಗಿದೆ. ಅಷ್ಟಕ್ಕೂ ಏನಿದು ಆರ್‌ಸಿಬಿ ಮೈಂಡ್‌ ಗೇಮ್‌ ಅನ್ನೋ ಕುತೂಹಲನಾ ಹಾಗಾದ್ರೆ ಈ ಸ್ಟೋರಿ ಓದಿ.

ಮದ್ಯದ ದೊರೆ ವಿಜಯ್‌ ಮಲ್ಯ ಒಡೆತನದ ಆರ್‌ಸಿಬಿಗೆ ಮಾಲೀಕರು ಬದಲಾದ್ರೂ ಕೂಡ ತಂಡ ಲಕ್‌ ಮಾತ್ರ ಬದಲಾಗಿಲ್ಲ. ಇದೀಗ ಎಲ್ಲಾ ತಂಡಗಳು ಐಪಿಎಲ್‌ 2022 ( IPL 2022 ) ಗಾಗಿ ಸಿದ್ದತೆಯನ್ನು ಆರಂಭಿಸಿವೆ. ವಿರಾಟ್‌ ಕೊಹ್ಲಿ , ಮ್ಯಾಕ್ಸ್‌ವೆಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ರನ್ನು ತಂಡದಲ್ಲಿ ಉಳಿಸಿಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿವೆ. ದಕ್ಷಿಣ ಆಫ್ರಿಕಾದ ಆಟಗಾರ ಫಾಪ್‌ ಡುಪ್ಲೆಸಿ ತಂಡವನ್ನು ಸೇರುತ್ತಲೇ ಆರ್‌ಸಿಬಿ ನಾಯಕನಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಮ್ಯಾಕ್ಸ್‌ವೆಲ್‌ ಕೂಡ ನಾಯಕನ ರೇಸ್‌ ನಲ್ಲಿದ್ರು. ಆದರೆ ಮ್ಯಾಕ್ಸ್‌ವೆಲ್‌ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ.

2008 ರಿಂದಲೂ ಆರ್‌ಸಿಬಿ ತಂಡದಲ್ಲಿಯೇ ಉಳಿದುಕೊಂಡಿರುವ ವಿರಾಟ್‌ ಕೊಹ್ಲಿ (Virat Kohli)ಇದೀಗ ನಾಯಕತ್ವ ತ್ಯೆಜಿಸಿದ್ದರೂ ಕೂಡ ಈ ಬಾರಿ ತಂಡದಲ್ಲಿಯೇ ಇದ್ದಾರೆ. ವಿರಾಟ್‌ ಕೊಹ್ಲಿ ಆರ್‌ ಸಿಬಿ ತಂಡ ಆಟಗಾರನಾಗಿ 207 IPL ಪಂದ್ಯಗಳಲ್ಲಿ 6283 ರನ್ ಗಳಿಸಿದ್ದಾರೆ. 2016 ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತಂಡವನ್ನು ಕೊಂಡೊಯ್ದಿದ್ದಾಳೆ. 2013 ರ ಋತುವಿನಲ್ಲಿ ಡೇನಿಯಲ್ ವೆಟ್ಟೋರಿಯಿಂದ RCB ನಾಯಕತ್ವವನ್ನು ವಹಿಸಿಕೊಂಡ ಕೊಹ್ಲಿ, RCB ನಾಯಕನಾಗಿ 140 ಪಂದ್ಯಗಳಲ್ಲಿ 66 ಗೆಲುವು ಮತ್ತು 70 ಸೋಲುಗಳನ್ನು ಕಂಡಿದ್ದಾರೆ.

ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಗುಂಪಿನಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್‌ನೊಂದಿಗೆ ಕಾಣಿಸಿಕೊಂಡಿವೆ. ಮೇಲ್ನೋಟಕ್ಕೆ ಆರ್‌ಸಿಬಿ ಈ ಬಾರಿಯ ಬಲಿಷ್ಠ ತಂಡ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ತಂಡಕ್ಕೆ ಸೂಕ್ತ ನಾಯಕನ ಅಗತ್ಯತೆ ಇದೆ ಅನ್ನೋದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈ ಬಾರಿ ತರಬೇತಿ ಸಿಬ್ಬಂದಿಗಳನ್ನು ಕೂಡ ಬದಲಾವಣೆ ಮಾಡಿಕೊಂಡಿದೆ. ಕೇವಲ ಓರ್ವ ಕನ್ನಡಿಗ ಆಟಗಾರನಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ವಿರಾಟ್‌ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್. ಸಿರಾಜ್, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲ್ಲಿಂಡ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲುವ್ನಿತ್ ಸಿಸೋಡಿಯಾ, ಡೇವಿಡ್ ವಿಲ್ಲಿ, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್‌ವುಡ್, ಶಹಬಾಜ್ ಅಹ್ಮದ್, ಅನುಶ್ಜ್ ರಾವತ್, ಅನುಶ್ಜ್ ರಾವತ್ , ಮಹಿಪಾಲ್ ಲೋಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಬೆಹ್ರೆನ್ಡಾರ್ಫ್ ಅವರಂತಹ ಬಲಿಷ್ಠ ಆಟಗಾರರಿದ್ದಾರೆ.

ಆರ್‌ ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಸಾಮರ್ಥ್ಯ ಇರೋದು ಮ್ಯಾಕ್ಸ್‌ವೆಲ್‌, ಫಾಪ್‌ ಡುಪ್ಲಸಿಸ್‌ ಗೆ ಮಾತ್ರ. ಆದೆ ಮ್ಯಾಕ್ಸ್‌ವೆಲ್‌ ತಂಡದ ನಾಯಕನಾಗೋದು ಸಾಧ್ಯವಿಲ್ಲ, ಆದರೆ ಡುಪ್ಲಸಿಸ್‌ಗೆ ನಾಯಕತ್ವ ನೀಡೋದಕ್ಕೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಮನಸ್ಸಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಉಳಿದಿರೋ ಆವಕಾಶವೆಂದ್ರೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮಾತ್ರ.

ಆರ್‌ಸಿಬಿ ಮೂಲಗಳ ಪ್ರಕಾರ ವಿರಾಟ್‌ ಕೊಹ್ಲಿ (Virat Kohli RCB captain) ನಾಯಕನಾಗೋದು ಬಹುತೇಕ ಖಚಿತ. ಆದರೆ ಆರ್‌ ಸಿಬಿ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಒಂದೊಮ್ಮೆ ವಿರಾಟ್‌ ಕೊಹ್ಲಿ ಮತ್ತೆ ಬೆಂಗಳೂರು ತಂಡದ ನಾಯಕರಾದ್ರೆ ಕನ್ನಡಿಗರು ಈ ಬಾರಿಯೂ ಕಪ್‌ ನಮ್ಡೆ ಅನ್ನೋದು ಪಕ್ಕಾ. ಎಲ್ಲಾ ಕುತೂಹಲಗಳಿಗೂ ಕ್ರಿಕೆಟ್‌ ಅಭಿಮಾನಿಗಳು ಮುಂದಿನ ತಿಂಗಳವರಗೆ ಕಾಯಲೇ ಬೇಕಾಗಿದೆ.

ಇದನ್ನೂ ಓದಿ : ದೆಹಲಿ ಕ್ಯಾಪಿಟಲ್ಸ್‌ ಸೇರ್ತಾರೆ ಆರ್‌ಸಿಬಿ ತಂಡದ ಈ ಖ್ಯಾತ ಆಟಗಾರ

ಇದನ್ನೂ ಓದಿ : ಹೊಸ ಸ್ವರೂಪದಲ್ಲಿ IPL 2022 : 2 ಗುಂಪು, 10 ತಂಡ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Virat Kohli Again captain for RCB in IPL 2022)

RELATED ARTICLES

Most Popular