Schools and Colleges Bandh: ಮಾರ್ಚ್‌ 4 ರಂದು ರಾಜ್ಯದಾದ್ಯಂತ ಅನುದಾನಿತ ಶಾಲಾ, ಕಾಲೇಜುಗಳು ಬಂದ್‌

ಬೆಂಗಳೂರು : ಪಿಂಚಣಿ ಸೌಲಭ್ಯವನ್ನು ಅನುದಾನಿತ ಶಾಲಾ, ಕಾಲೇಜುಗಳ ನೌಕರರಿಗೂ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನುದಾನಿತ ಶಾಲಾ, ಕಾಲೇಜುಗಳನ್ನು ಮಾರ್ಚ್‌ 4 ರಂದು (Schools and Colleges Bandh) ಬಂದ್‌ ಆಗಲಿವೆ. ಅಲ್ಲದೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಬೆಂಗಳೂರಿನ ವಿಧಾನ ಸೌಧ ಚಲೋ ನಡೆಸಲಾಗುವುದು ಎಂದು ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಸಿ.ಗೋಪಿನಾಥ್‌ ತಿಳಿಸಿದ್ದಾರೆ.

2006ರ ನಂತರ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ 2006 ಕ್ಕೂ ಮೊದಲು ಹಳೆಯ ಪಿಂಚಣಿ ಯೋಜನೆ ಜಾರಿಯಲ್ಲಿತ್ತು. ಈ ಕುರಿತು ಸಾಕಷ್ಟು ಬಾರಿ ಹೋರಾಟಗಳನ್ನು ನಡೆಸಲಾಗಿದೆ. ಆದರೆ ರಾಜ್ಯ ಸರಕಾರ ಎನ್‌ಪಿಎಸ್‌ ರದ್ದತಿಗೆ ಮುಂದಾಗಿರಲಿಲ್ಲ. ಇದರಿಂದಾಗಿ ಅನುದಾನಿತ ಶಾಲೆ, ಕಾಲೇಜುಗಳ ನೌಕರರು (Schools and Colleges Bandh) ಇದೀಗ ಬೀದಿಗೆ ಇಳಿದಿದ್ದಾರೆ.

ರಾಜ್ಯ ಸರಕಾರ ಸರಕಾರಿ ನೌಕರರಿಗೆ ಮಾತ್ರವೇ ನೂತನ ಪಿಂಚಣಿ ಯೋಜನೆಯನ್ನು ನೀಡುತ್ತಿದೆ. ಆದರೆ ಅನುದಾನಿನ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು. ಅಲ್ಲದೇ ನೌಕರರ ಪಾಲಿನ ಶೇ.14ರಷ್ಟು ಹಣವನ್ನು ಆಡಳಿತ ಮಂಡಳಿಗೆ ನೀಡಬೇಕು. ಇನ್ನು 2006 ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟಿರುವ ನೌಕರರಿಗೆ ಹಾಗೂ ನಿವೃತ್ತರಾಗಿರುವವರಿಗೆ ಕಾಲ್ಪನಿಕ ವೇತನವನ್ನು ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ನೀಡುವಂತೆ ಒತ್ತಾಯಿಸಿದ್ದಾರೆ.

ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ಆರೋಗ್ಯ ಸಚಿ ( ಜ್ಯೋತಿ ಸಂಜೀವಿನಿ) ಯೋಜನೆಯನ್ನು ಜಾರಿಗೆ ತರಬೇಖು. ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ವಿಧಿಸಿರುವ ನಿಯಮಗಳನ್ನು ಸಡಿಲುಗೊಳಿಸಬೇಕು. ಅಲ್ಲದೇ ಸರಕಾರಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ನೀಡಬೇಕೆಂದು ಆಗ್ರಹಿಸಿದ್ದಾರೆ. ಮಾರ್ಚ್‌ 4 ರಂದು ರಾಜ್ಯದಾದ್ಯಂತ ಅನುದಾನಿತ ಶಾಲೆ, ಕಾಲೇಜುಗಳು ಬಂದ್‌ ಆಗಲಿದ್ದು, ವಿಧಾನಸೌದ ಚಲೋ ನಡೆಸಲಿದ್ದಾರೆ. ಅಲ್ಲದೇ ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿಗೂ ಸಿದ್ದರಾಗಿದ್ದೇವೆ ಎಂದು ಗೋಪಿನಾಥ್‌ ತಿಳಿಸಿದ್ದಾರೆ.

ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಈಗಾಗಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರನ್ನು ಭೇಟಿಯಾಗಿ ಎನ್‌ಪಿಎಸ್‌ ರದ್ದು ಮಾಡುವುದರ ಜೊತೆಗೆ ಕೇಂದ್ರ ಸಮಾನ ವೇತನವನ್ನು ಜಾರಿ ಮಾಡುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಕೂಡ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಎನ್‌ಪಿಎಸ್‌ ವಿರುದ್ದ ಈಗಾಗಲೇ ಹಲವು ವರ್ಷಗಳಿಂದಲೂ ಹೋರಾಟ ನಡೆಯುತ್ತಿದ್ದು, ಇದೀಗ ಅನುದಾನಿತ ಶಾಲಾ, ಕಾಲೇಜುಗಳ ನೌಕರರು (Schools and Colleges Bandh) ಬೀದಿಗೆ ಇಳಿಯಲು ಮುಂದಾಗಿರುವುದು ರಾಜ್ಯ ಸರಕಾರಕ್ಕೆ ತಲೆನೋವು ತರಿಸಿದೆ.

ಇದನ್ನೂ ಓದಿ : ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಎಪ್ರಿಲ್‌ 10 ರಿಂದ ಬೇಸಿಗೆ ರಜೆ : ಮೇ 16 ಶಾಲಾರಂಭ

ಇದನ್ನು ಓದಿ : ಎನ್‌ಪಿಎಸ್‌ ರದ್ದು, ಕೇಂದ್ರ ಸಮಾನ ವೇತನ : ಸಿಎಂ ಬೊಮ್ಮಾಯಿಗೆ ಹೊರಟ್ಟಿ ಪತ್ರ

( Aided Schools and Colleges Bandh On March 4th in Karnataka )

Comments are closed.