ಎಡ್ಜ್’ಬಾಸ್ಟನ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಶ್ವದಾಖಲೆ ಇರುವುದು ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ (Indian Cricket Team Coach rahul Dravidd) ಹೆಸರಲ್ಲಿ. 164 ಟೆಸ್ಟ್ ಪಂದ್ಯಗಳಲ್ಲಿ 210 ಕ್ಯಾಚ್ ಪಡೆದಿರುವ ದ್ರಾವಿಡ್ ಕ್ಯಾಚಿಂಗ್ ವಿಚಾರದಲ್ಲಿ ಈಗಲೂ ವಿಶ್ವದಾಖಲೆ ವೀರ. ಭಾರತದ ಮತ್ತೊಬ್ಬ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) 200 ಟೆಸ್ಟ್ ಪಂದ್ಯಗಳನ್ನಾಡಿ 115 ಕ್ಯಾಚ್ ಪಡೆದಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜ ಆಟಗಾರರಿಗೆ ಸಾಧ್ಯವಾಗದ ದಾಖಲೆಯೊಂದನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ (Virat Kohli becomes 1st Indian to register unique record).
ಅಂತರಾಷ್ಟ್ರೀಯ ಕ್ರಿಕೆಟ್”ನಲ್ಲಿ ಎರಡು ಪ್ರತ್ಯಕ ತಂಡಗಳ ವಿರುದ್ಧ 50 ಮತ್ತು 50+ ಕ್ಯಾಚ್ ಪಡೆದ ಭಾರತದ ಮೊದಲ ಆಟಗಾರ ವಿರಾಟ್ ಕೊಹ್ಲಿ. ಇಂಗ್ಲೆಂಡ್ ವಿರುದ್ಧ ಎಡ್ಜ್”ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ (India Vs England Test match) ಜಾನಿ ಬೇರ್”ಸ್ಟೋ (Jonny Bairstow) ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ವಿಶೇಷ ದಾಖಲೆ ಬರೆದಿದ್ದಾರೆ. ಬೇರ್”ಸ್ಟೋ ಕ್ಯಾಚ್ ವಿರಾಟ್ ಕೊಹ್ಲಿ ಪಾಲಿಗೆ ಇಂಗ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 50ನೇ ಕ್ಯಾಚ್.
ಆಸ್ಟ್ರೇಲಿಯಾ ವಿರುದ್ಧ ಕಿಂಗ್ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 55 ಕ್ಯಾಚ್”ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ101 ಪಂದ್ಯಗಳಿಂದ 101 ಕ್ಯಾಚ್”ಗಳನ್ನು ಪಡೆದಿದ್ರೆ, 260 ಏಕದಿನ ಪಂದ್ಯಗಳಿಂದ 137 ಕ್ಯಾಚ್ ಹಾಗೂ 97 ಟಿ20 ಪಂದ್ಯಗಳಿಂದ 43 ಕ್ಯಾಚ್ ಪಡೆದಿದ್ದಾರೆ. ಇದುವರೆಗೆ ಒಟ್ಟಾರೆ 458 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 281 ಕ್ಯಾಚ್ ಪಡೆದಿದ್ದಾರೆ.
ಕ್ಯಾಚಿಂಗ್”ನಲ್ಲಿ ಭಾರತೀಯ ದಾಖಲೆ ಬರೆದಿರುವ ವಿರಾಟ್ ಕೊಹ್ಲಿಗೆ (Virat Kohli) ಬ್ಯಾಟಿಂಗ್ ಯಾಕೋ ಇನ್ನೂ ಕೈಹಿಡಿಯುತ್ತಿಲ್ಲ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್”ನಲ್ಲಿ 11 ರನ್ನಿಗೆ ಔಟಾಗಿದ್ದ ಕಿಂಗ್ ಕೊಹ್ಲಿ, ದ್ವಿತೀಯ ಇನ್ನಿಂಗ್ಸ್”ನಲ್ಲಿ 40 ಎಸೆತಗಳಲ್ಲಿ 20 ರನ್ ಗಳಿಸಿ ಉತ್ತಮ ಲಯ ಕಂಡುಕೊಳ್ಳುವಷ್ಟರಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ “ಆಡಲಸಾಧ್ಯ” ಎಸೆತಕ್ಕೆ ವಿಕೆಟ್ ಒಪ್ಪಿಸಿದ್ರು.
2019ರ ನವೆಂಬರ್’ನಿಂದ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ಎದುರಿಸುತ್ತಿದ್ದಾರೆ. ಈ ವರ್ಷದ ನವೆಂಬರ್ ಬಂದರೆ ಅಂತರಾಷ್ಟ್ರೀಯ ಕ್ರಿಕೆಟ್”ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಭರ್ತಿ ಮೂರು ವರ್ಷ ತುಂಬಲಿದೆ. 2019 ನವೆಂಬರ್ 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್”ನಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಸಿಡಿಸಿಲ್ಲ. ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಸೇರಿ ಒಟ್ಟು 70 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್(100 ಶತಕ) ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್(71 ಶತಕ) ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಇದನ್ನೂ ಓದಿ : ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !
ಇದನ್ನೂ ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ
Virat Kohli becomes 1st Indian to register unique record, A record that Dravid, Sachin could not achieve