ದುಬೈ: (Virat Kohli Bows to Suryakumar Yadav) ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಅಚ್ಚರಿಗಳು ನಡೆಯುತ್ತವೆ ಎಂಬುದಕ್ಕೆ ಭಾರತ ಮತ್ತು ಹಾಂಕಾಂಗ್ (Hong Kong) ನಡುವಿನ ಏಷ್ಯಾ ಕಪ್ (Asia Cup 2022) ಪಂದ್ಯವೇ ಸಾಕ್ಷಿ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಏಷ್ಯಾ ಕಪ್ ಗ್ರೂಪ್ ‘ಎ’ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧ 40 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಗ್ರೂಪ್ ‘ಎ’ನಿಂದ ಭಾರತ ಅಜೇಯವಾಗಿ ಸೂಪರ್-4 ಹಂತ ಪ್ರವೇಶಿಸಿತ್ತು. ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಕೇವಲ 26 ಎಸೆತಗಳಲ್ಲಿ 6 ಸಿಕ್ಸರ್’ಗಳ ಸಹಿತ ಅಜೇಯ 68 ರನ್ ಸಿಡಿಸಿ ಅಬ್ಬರಿಸಿದ್ದರು. ಸೂರ್ಯಕುಮಾರ್ ಜೊತೆ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 42 ಎಸೆತಗಳಲ್ಲಿ ಅಜೇಯ 98 ರನ್’ಗಳ ಜೊತೆಯಾಟವಾಡಿ ಭಾರತದ ಮೊತ್ತ 2 ವಿಕೆಟ್ ನಷ್ಟಕ್ಕೆ 192 ರನ್ ತಲುಪಲು ಕಾರಣವಾಗಿದ್ದರು. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೇ ಬ್ಯಾಟಿಂಗ್ ಖದರ್ ತೋರಿದ ಕೊಹ್ಲಿ, 44 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ ಅಜೇಯ 59 ರನ್ ಗಳಿಸಿದ್ದರು.
ಪಂದ್ಯದ ವಿಶೇಷತೆ ಏನಂದ್ರೆ ಸಿಡಿಲಬ್ಬರದ ಆಟವಾಡಿ ಪೆವಿಲಿಯನ್’ನತ್ತ ವಾಪಸ್ಸಾಗುತ್ತಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ತಲೆ ಬಾಗಿ ನಮಿಸಿದ್ದರು. ಆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಹ್ಲಿ ನಡವಳಿಕೆಗೆ ಕ್ರಿಕೆಟ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ವಿರಾಟ್ ಕೊಹ್ಲಿ (Virat Kohli) ತಲೆ ಬಾಗಿ ನಮಿಸಿದ ವೀಡಿಯೊ ಸದ್ದು ಮಾಡ್ತಿದ್ದಂತೆ, ಎರಡು ವರ್ಷಗಳ ಮತ್ತೊಂದು ವೀಡಿಯೊ ವೈರಲ್ ಆಗುತ್ತಿದೆ. ಅದೇನಂದ್ರೆ 2020ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ RCB ಗೆಲುವಿಗೆ ಅಡ್ಡಿಯಾಗಿದ್ದ ಸೂರ್ಯನನ್ನು ಆಗಿನ RCB ನಾಯಕ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲೇ ದಿಟ್ಟಿಸಿ ನೋಡಿದ್ದರು. ಚೆಂಡಿಗೆ ಹೊಳಪು ನೀಡುತ್ತಾ ಸೂರ್ಯನತ್ತ ನಡೆದುಕೊಂಡು ಬಂದಿದ್ದ ಕೊಹ್ಲಿ, ಆಕ್ರಮಣಕಾರಿ ನೋಟದಿಂದ ಸೂರ್ಯ ಕುಮಾರ್ ಯಾದವ್ (Suryakumar Yadav) ಅವರನ್ನು ಕೆಲ ಸೆಕೆಂಡ್’ಗಳ ಕಾಲ ದಿಟ್ಟಿಸಿದ್ದರು.
ಅಂದು ಜಿದ್ದಾಜಿದ್ದಿಯಲ್ಲಿ ಸೂರ್ಯನನ್ನು ದಿಟ್ಟಿಸಿ ನೋಡಿದ್ದ ವಿರಾಟ್ ಕೊಹ್ಲಿ, ಇಂದು ಅದೇ ಸೂರ್ಯನಿಗೆ ತಲೆ ಬಾಗಿ ನಮಿಸಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅವರ ಈ ನಡವಳಿಕೆ ನನ್ನ ಹೃದಯಕ್ಕೇ ಮುಟ್ಟಿದೆ ಎಂದು ಸೂರ್ಯಕುಮಾರ್ ಯಾದವ್ (Suryakumar Yadav) ಹೇಳಿದ್ದಾರೆ.
ಇದನ್ನೂ ಓದಿ: ಕೊಹ್ಲಿ ‘ಖೇಲ್’ ಕತಂ.. ದುಕಾನ್ ಓಪನ್
ಇದನ್ನೂ ಓದಿ: ಭಾರತ ವಿರುದ್ಧ ಸೋತ ಬೆನ್ನಲ್ಲೇ ಪ್ರೇಯಸಿಗೆ “ಲವ್ ಪ್ರಪೋಸ್” ಮಾಡಿದ ಹಾಂಕಾಂಗ್ ಆಟಗಾರ
ಇದನ್ನೂ ಓದಿ: ದುಲೀಪ್ ಟ್ರೋಫಿ: ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ; ಮಯಾಂಕ್ ಅಗರ್‌ವಾಲ್ ಉಪನಾಯಕ
”ಅದು ನಿಜಕ್ಕೂ ಹೃದಯಸ್ಪರ್ಶಿ ಕ್ಷಣ. ಇಂಥದ್ದನ್ನು ನಾನು ಈ ಹಿಂದೆ ನೋಡಿಯೇ ಇಲ್ಲ. ಪೆವಿಲಿಯನ್’ಗೆ ಮರಳುತ್ತಿದ್ದಾಗ ನಾನು ವಿರಾಟ್ ಕೊಹ್ಲಿಯವರನ್ನು ನೋಡುತ್ತಿದ್ದೆ. ಅವರು ಮುಂದೆ ಹೋಗದೆ ಅಲ್ಲೇ ನಿಂತಿದ್ದರು. ಅವರ ಹತ್ತಿರ ಬರುತ್ತಿದ್ದಂತೆ ನನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗದ ರೀತಿಯಲ್ಲಿ ಅವರು ನನ್ನನ್ನು ಅಭಿನಂದಿಸಿದರು” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
Virat Kohli Bows to Suryakumar Yadav ipl Asia Cup 2022