health of Muruga Sharanaru : ಜೈಲು ಸೇರಿರುವ ಮುರುಘಾ ಶರಣರಿಗೆ ಎದೆ ನೋವು: ಆಸ್ಪತ್ರೆಗೆ ದಾಖಲು

ಚಿತ್ರದುರ್ಗ :health of Muruga Sharanaru, : ವಸತಿ ನಿಲಯದಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಅಡಿಯಲ್ಲಿ ಚಿತ್ರದುರ್ಗದ ಮುರುಘಾ ಶ್ರೀ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಜೈಲು ಪಾಲಾಗಿದ್ದಾರೆ. ಗುರುವಾರ ರಾತ್ರಿ 9:30ರ ಸುಮಾರಿಗೆ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ಮುರುಘಾ ಶರಣರ ಪರ ವಕೀಲರು ಶ್ರೀಗಳಿಗೆ ಜಾಮೀನು ನೀಡಬೇಕೆಂದು ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಆದರೆ ನ್ಯಾಯಾಧೀಶೆ ಕೋಮಲಾ ಜಾಮೀನು ಅರ್ಜಿಯನ್ನು ತಿರಸ್ಕರಿದ್ದು ಮುರುಘಾ ಶರಣರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


ಮುಂಜಾನೆ ಮೂರು ಗಂಟೆ ಸುಮಾರಿಗೆ ಚಿತ್ರದುರ್ಗದ ಜಿಲ್ಲಾ ಕಾರಾಗೃಹಕ್ಕೆ ಮುರುಘಾ ಶ್ರೀಗಳನ್ನು ಕಳುಹಿಸಲಾಗಿತ್ತು. ಆದರೆ ಮುರುಘಾ ಶ್ರೀಗಳಿಗೆ ಜೈಲಿನಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಜೈಲಿನಿಂದ ಸೀದಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಮುರುಘಾ ಶರಣರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು ಯಾವುದೇ ಅಪಾಯಗಳಿಲ್ಲ ಎಂದು ತಿಳಿದು ಬಂದಿದೆ.


ಇನ್ನು ಇದೇ ವೇಳೆಯಲ್ಲಿ ಮರುಘಾ ಶರಣರ ಬಂಧನದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಮಠದ ಪರ ವಕೀಲ ಉಮೇಶ್​, ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿಲ್ಲ. ದೇಶದ ಕಾನೂನಿಗೆ ತಾನು ಗೌರವ ನೀಡಬೇಕೆಂದು ಸ್ವತಃ ಮುರುಘಾ ಶರಣರೇ ಪೊಲೀಸರಿಗೆ ಶರಣಾಗಿದ್ದಾರೆ. ಮಹಿಳಾ ವಾರ್ಡನ್​ ಹೇಳಿಕೆಗೂ ಶ್ರೀಗಳ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.


ಅಕ್ಕ ಮಹಾದೇವಿ ವಸತಿ ನಿಲಯದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ಮೈಸೂರಿಗೆ ತೆರಳಿ ಅಲ್ಲಿನ ಒಡನಾಡಿ ಎಂಬ ಸಂಸ್ಥೆಯ ಸದಸ್ಯರ ಬಳಿಯಲ್ಲಿ ತಮಗೆ ಮುರುಘಾ ಶರಣರು ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾರ ಎಂದು ಆರೋಪ ಮಾಡಿದ್ದರು. ಇದಾದ ಬಳಿಕ ಒಡನಾಡಿ ಸಂಸ್ಥೆಯ ಸಹಾಯದೊಂದಿಗೆ ಆಗಸ್ಟ್​ 26ರಂದು ಮೈಸೂರಿನ ನಜರಾಬಾದ್​ ಪೊಲೀಸ್​ ಠಾಣೆಯಲ್ಲಿ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.ಈ ಪ್ರಕರಣದಲ್ಲಿ ಮುರುಘಾ ಶರಣರು ಪ್ರಥಮ ಆರೋಪಿಯಾಗಿದ್ದರೆ ಹಾಸ್ಟೆಲ್​ನ ಮಹಿಳಾ ವಾರ್ಡನ್​ 2ನೇ ಆರೋಪಿಯಾಗಿದ್ದಾರೆ. ಒಟ್ಟು ಐವರ ಮೇಲೆ ಕೇಸ್​ ದಾಖಲಾಗಿದ್ದು ಇದರಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಇದನ್ನು ಓದಿ : Murugha Seer in Jail : ಜೈಲು ಸೇರಿದ ಮುರುಘಾ ಶ್ರೀ

ಇದನ್ನೂ ಓದಿ : Virat Kohli Restaurant: ಕೊಹ್ಲಿ ‘ಖೇಲ್’ ಕತಂ.. ದುಕಾನ್ ಓಪನ್

The health of Muruga Sharanaru, who is in jail, is fluctuating

Comments are closed.