ದುಬೈ: (Virat Kohli Harris Rauf) ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಹೈಟೆನ್ಶನ್, ಹೈವೋಲ್ಟೇಜ್ ಪಂದ್ಯದ ನಂತರ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್’ಗೆ ಮರೆಯಲಾಗದ ಉಡುಗೊರೆ ಯೊಂದನ್ನು ನೀಡಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ (India Vs Pakistan Asia Cup 2022) ಮುಗಿದ ನಂತರ ಪಾಕ್ ವೇಗಿ ಹ್ಯಾರಿಸ್ ರೌಫ್ (Haris Rauf), ಕಿಂಗ್ ಕೊಹ್ಲಿಯನ್ನು ಭೇಟಿ ಮಾಡಿ, ಆಟೋಗ್ರಾಫ್ ಇರುವ ಜರ್ಸಿ ನೀಡುವಂತೆ ಕೇಳಿದ್ದಾರೆ. ಹ್ಯಾರಿಸ್ ರೌಫ್ ಮನವಿಗೆ ಪ್ರೀತಿಯಿಂದಲೇ ಸ್ಪಂದಿಸಿದ ವಿರಾಟ್ ಕೊಹ್ಲಿ, ತಮ್ಮ ನಂ.18 ಜರ್ಸಿ ಮೇಲೆ ಆಟೋಗ್ರಾಫ್ ಹಾಕಿ ಪಾಕ್ ವೇಗಿಗೆ ನೀಡಿದ್ದಾರೆ. ಈ ವೀಡಿಯೊವನ್ನು ಬಿಸಿಸಿಐ (BCCI) ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾ ಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್’ಗಳಿಂದ ಸೋಲಿಸಿತ್ತು. ಗೆಲ್ಲಲು ಪಾಕ್ ಒಡ್ಡಿದ 148 ರನ್’ಗಳ ಗುರಿ ಬೆನ್ನಟ್ಟುವ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅತ್ಯಮೂಲ್ಯ 35 ರನ್ ಬಾರಿಸಿ ಭಾರತ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಕಿಂಗ್ ಕೊಹ್ಲಿ ಇನ್ನಿಂಗ್ಸ್’ನಲ್ಲಿ 3 ಬೌಂಡರಿಗಳು ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು. ಈ ಮೂಲಕ ವಿರಾಟ್ ಕೊಹ್ಲಿಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಫಾರ್ಮ್ ಕಂಡುಕೊಳ್ಳುವ ಸೂಚನೆ ನೀಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ, ಬುಧವಾರ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಶಿಶು ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಗ್ರೂಪ್ ‘ಎ’ ವಿಭಾಗದಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶಿಸುವುದು ಖಚಿತವಾಗಿರುವ ಕಾರಣ, ಸೂಪರ್-4 ಹಂತದಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಆ ಪಂದ್ಯ ಮುಂದಿನ ಭಾನುವಾರ (ಸೆಪ್ಟೆಂಬರ್ 4) ನಡೆಯಲಿದೆ.
ಇದನ್ನೂ ಓದಿ : Hardik Pandya: ಜಡೇಜಾ-ಹಾರ್ದಿಕ್ Interview ;2018ರ ಆ “ಕರಾಳ” ದಿನವನ್ನು ನೆನೆದು ಭಾವುಕರಾದ ಪಾಂಡ್ಯ
Virat Kohli gave an unforgettable gift to Pakistan pacer Harris Rauf India Vs Pakistan Asia Cup 2022