Virat Kohli house : ಅಲಿಬಾಗ್’ನಲ್ಲಿ ವಿರಾಟ್ ಮನೆ, 8 ಎಕರೆಯಲ್ಲಿ ಐಷಾರಾಮಿ ಮನೆ ಕಟ್ಟುವ ಕಾರ್ಯಕ್ಕೆ ವಿರುಷ್ಕಾ ಚಾಲನೆ

ಮುಂಬೈ: ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ದಂಪತಿ (Virat Kohli house) ಮುಂಬೈನಲ್ಲಿ 8 ಎಕರೆ ಪ್ರದೇಶದಲ್ಲಿ ಐಷಾರಾಮಿ ಮನೆ ಕಟ್ಟಿಸುತ್ತಿದ್ದಾರೆ. ದಕ್ಷಿಣ ಮುಂಬೈಯ ಕರಾವಳಿ ಪ್ರದೇಶವಾಗಿರುವ ಅಲಿಬಾಗ್’ನ ಜಿರಾಜ್ ಎಂಬಲ್ಲಿ ವಿರಾಟ್ ಕೊಹ್ಲಿ ಇತ್ತೀಚೆಗೆ 19.24 ಕೋಟಿ ರೂಪಾಯಿ ಮೊತ್ತಕ್ಕೆ 8 ಎಕರೆ ಭೂಮಿ ಖರೀದಿಸಿದ್ದರು.

ಇದೀಗ ಅಲ್ಲಿ 20 ಸಾವಿರ ಚದರ ಅಡಿ ಸುತ್ತಳತೆಯ ಐಷಾರಾಮಿ ಮನೆ ಕಟ್ಟಿಸಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಸೋಮವಾರ ಪತ್ನಿ ಅನುಷ್ಕಾ ಶರ್ಮಾ ಜೊತೆ ಅಲಿಬಾಗ್’ನಲ್ಲಿರುವ ತಮ್ಮ ಭೂಮಿಗೆ ಭೇಟಿ ನೀಡಿರುವ ವಿರಾಟ್ ಕೊಹ್ಲಿ, ಮನೆ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಮುಂದಿನ 18ರಿಂದ 24 ತಿಂಗಳಲ್ಲಿ ಕೊಹ್ಲಿ ಅವರ ಐಷಾರಾಮಿ ಮನೆ ಎದ್ದು ನಿಲ್ಲಲಿದೆ. ಕೊಹ್ಲಿ ದಂಪತಿಯ ಮನೆಯನ್ನು ಖ್ಯಾತ ವಿನ್ಯಾಸಗಾರ ಮಜುಮ್ದಾರ್ ಬ್ರಾವೊ ವಿನ್ಯಾಸಗೊಳಿಸಿದ್ದಾರೆ.

ಕ್ರಿಕೆಟ್’ನಿಂದ ವಿರಾಮ ಪಡೆದಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಂತರ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಯಾವುದೇ ಪಂದ್ಯಗಳನ್ನಾಡಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡು ಹಾಗೂ 3ನೇ ಪಂದ್ಯಗಳಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಏಷ್ಯಾ ಕಪ್ ಟೂರ್ನಿಯನ್ನು ವಿರಾಟ್ ಕೊಹ್ಲಿ ಎದುರು ನೋಡುತ್ತಿದ್ದು, ಟೀಮ್ ಇಂಡಿಯಾದ ಪೂರ್ವಸಿದ್ಧತಾ ಶಿಬಿರ ಆಗಸ್ಟ್ 23ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭವಾಗಲಿದೆ. ಇದನ್ನೂ ಓದಿ : Hardik Pandya captaincy: ಟಿ20 ಸರಣಿ: ವಿಂಡೀಸ್ ವಿರುದ್ಧ ಭಾರತದ ಸರಣಿ ಸೋಲಿಗೆ ಹಾರ್ದಿಕ್ ಪಾಂಡ್ಯನೇ ಕಾರಣ

ಏಷ್ಯಾ ಕಪ್ ಟೂರ್ನಿ ಆಗಸ್ಟ್ 31ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule) :

  • ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
  • ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
  • ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)

Virat Kohli house: Virushka drive to build a luxury house in Alibaug, 8 acres

Comments are closed.