Virat Kohli Controversy : ವಿವಾದಕ್ಕೆ ಸಿಲುಕಿದ ವಿರಾಟ್‌ ಕೊಯ್ಲಿ : ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ನವದೆಹಲಿ : ಇಂಗ್ಲೆಂಡ್‌ ಪ್ರವಾಸದಲ್ಲಿರುವ ಟೀಮ್‌ ಇಂಡಿಯಾ ಆಟಗಾರ ವಿರಾಟ್‌ ಕೊಯ್ಲಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಖಾಸಗಿ ವಿಶ್ವವಿದ್ಯಾಲಯದ ಕುರಿತು ಕೊಯ್ಲಿ ಪೋಸ್ಟ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಸಿದ್ದತೆ ನಡೆಸುತ್ತಿದ್ದಾರೆ. ಅಭ್ಯಾಸದ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೊಯ್ಲಿ ಸಕ್ರೀಯವಾಗಿದ್ದಾರೆ. ಇಷ್ಟು ದಿನ ತಮ್ಮ ಖಾಸಗಿ ಬದುಕಿನ ಕುರಿತು ಪೋಸ್ಟ್‌ ಮಾಡುತ್ತಿದ್ದ ಕೊಯ್ಲಿ ಇದೀಗ ಖಾಸಗಿ ವಿಶ್ವವಿದ್ಯಾಲಯದ ಕುರಿತು ಪೋಸ್ಟ್‌ ಮಾಡದ್ದಾರೆ.

ಪೋಸ್ಟ್‌ನಲ್ಲಿ, ಖಾಸಗಿ ವಿಶ್ವವಿದ್ಯಾಲಯದ ಬಗ್ಗೆ ಬರೆದಿದ್ದಾರೆ. ಭಾರತದ ಒಲಿಂಪಿಕ್ಸ್ ಆಟಗಾರರಲ್ಲಿ ಶೇಕಡಾ 10ರಷ್ಟು ಮಂದಿ ಲವ್ಲಿ ಪ್ರೊಫೇಶನಲ್ ವಿಶ್ವವಿದ್ಯಾಲಯದವರು. ಎಲ್‌ಪಿಯು ಶೀಘ್ರದಲ್ಲೇ ತನ್ನ ವಿದ್ಯಾರ್ಥಿಗಳನ್ನು ಭಾರತೀಯ ಕ್ರಿಕೆಟ್ ತಂಡಕ್ಕೂ ಕಳುಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಜೈ ಹಿಂದ್’ ಎಂದು ಕೊಹ್ಲಿ ಪೋಸ್ಟ್ ಹಾಕಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ಈ ಪೋಸ್ಟ್, ಎಎಸ್ಸಿಐ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವಿರಾಟ್‌ ಕೊಯ್ಲಿ ಪೋಸ್ಟ್‌ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಶೀಘ್ರದಲ್ಲೇ ಎಎಸ್ಸಿಐ, ಕೊಹ್ಲಿಗೆ ನೊಟೀಸ್ ನೀಡುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿಯ ಪೋಸ್ಟ್ ಎಎಸ್ಸಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎನ್ನಲಾಗುತ್ತಿದೆ.

Comments are closed.