World’s largest Star Sapphire : ಶ್ರೀಲಂಕಾದಲ್ಲಿ ಪತ್ತೆಯಾಯ್ತು ವಿಶ್ವದ ಅತೀ ದೊಡ್ಡ ನೀಲಮಣಿ..!!

ಕೊಲಂಬೋ : ವಿಶ್ವದ ಅತೀ ದೊಡ್ಡ ನಕ್ಷತ್ರ ನೀಲಮಣಿ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಬಾವಿಯನ್ನು ಅಗೆಯುವಾಗ ನೀಲಮಣಿ ಪತ್ತೆಯಾಗಿದ್ದು, ಈ ಕುರಿತು ಅಧ್ಯಯನ ನಡೆಯುತ್ತಿದೆ.

ರತ್ನಪುರದ ರತ್ನ ಸಮೃದ್ಧ ಪ್ರದೇಶದಲ್ಲಿ ಮನೆಯ ಹಿತ್ತಲ ಬಾವಿಯನ್ನು ಅಗೆಯುವಾಗ ಬಂಡೆಯಾಕಾರದ ಕಲ್ಲು ಪತ್ತೆಯಾಗಿದೆ. ಇದನ್ನು ಅಗೆದು ಹೊರತೆಗೆದಾಗ ಅದು ಅತ್ಯಂತ ಬೆಲೆಬಾಳುವ ನೀಲ ಮಣಿ ಅನ್ನೋದು ತಿಳಿದುಬಂದಿದೆ. ಸುಮಾರು 510 ಕೆ.ಜಿ ( 2.5 ಮಿಲಿಯನ್ ಕ್ಯಾರೆಟ್) ತೂಕವನ್ನು ಹೊಂದಿದೆ. ಆದರೆ ಭದ್ರತಾ ಕಾರಣದಿಂದಾಗಿ ಸಂಪೂರ್ಣ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮ ಬಿಬಿಸಿ ವರದಿಯನ್ನು ಪ್ರಕಟಿಸಿದೆ.

ಬಾವಿಯನ್ನು ಅಗೆಯುವಾಗ ನೀಲಮಣಿ ಪತ್ತೆಯಾಗುತ್ತಿದ್ದಂತೆಯೇ ವಿಚಾರವನ್ನುಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರದ ಕಲ್ಲಿನ ಕುರಿತು ಸಂಶೋಧನೆಯನ್ನು ನಡೆಸಲಾಗಿದ್ದು, ಅದು ವಿಶ್ವದ ಅತೀ ದೊಡ್ಡ ನೀಲಮಣಿ ಅನ್ನೋದು ಬಹಿರಂಗವಾಗಿದೆ. ಕಲ್ಲನ್ನು ಸಂಪೂರ್ಣವಾಗಿ ಶುಚಿಗೊಳಿಸಲು ಸುಮಾರು ಒಂದು ವರ್ಷಗಳ ಕಾಲಾವಕಾಶವನ್ನು ತೆಗೆದುಕೊಳ್ಳ ಲಾಗಿದೆ. ಅಲ್ಲದೇ ತಜ್ಞರ ಈ ನೀಲಮಣಿಯು ಸುಮಾರು ನೂರು ಮಿಲಿಯನ್ ಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎನ್ನಲಾಗುತ್ತಿದೆ.

ವಿಶೇಷ ನಕ್ಷತ್ರ ನೀಲಮಣಿ ಮಾದರಿಯಲ್ಲಿದ್ದುಮ ಬಹುಶಃ ಇದು ವಿಶ್ವದಲ್ಲೇ ದೊಡ್ಡದಾಗಿದೆ. ಗಾತ್ರ ಮತ್ತು ಅದರ ಮೌಲ್ಯವನ್ನು ಗಮನಿಸಿದರೆ, ಇದು ಖಾಸಗಿ ಸಂಗ್ರಾಹಕರು ಅಥವಾ ವಸ್ತುಸಂಗ್ರಹಾಲಯಗಳಿಗೆ ಹೆಚ್ಚು ಆಸಕ್ತಿಯನ್ನು ಮೂಡಿಸಿದೆ ಎಂದು ಶ್ರೀಲಂಕಾದ ರಾಷ್ಟ್ರೀಯ ರತ್ನ ಮತ್ತು ಆಭರಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿವೆ.

Comments are closed.