ಸೋಮವಾರ, ಏಪ್ರಿಲ್ 28, 2025
HomeSportsCricketVirat Kohli: ರಾಜ, ವೈದ್ಯ, ಯೋಧ, ಪೈಲಟ್, ಫುಟ್ಬಾಲಿಗ : ಇದು ನೀವು ನೋಡಿರದ ಕಿಂಗ್...

Virat Kohli: ರಾಜ, ವೈದ್ಯ, ಯೋಧ, ಪೈಲಟ್, ಫುಟ್ಬಾಲಿಗ : ಇದು ನೀವು ನೋಡಿರದ ಕಿಂಗ್ ಕೊಹ್ಲಿ ಅವತಾರ

- Advertisement -

ಬೆಂಗಳೂರು : (Virat Kohli) ವಿರಾಟ್ ಕೊಹ್ಲಿಯನ್ನು ನೀವು ಅದ್ಭುತ ಬ್ಯಾಟ್ಸ್’ಮನ್ ಆಗಿ, ಶ್ರೇಷ್ಠ ನಾಯಕನಾಗಿ, ಬ್ರ್ಯಾಂಡ್ ಅಂಬಾಸಿಡರ್ ಆಗಿ ನೋಡಿದ್ದೀರಿ. ಆದರೆ ರಾಜನಾಗಿ, ಯೋಧನಾಗಿ, ವೈದ್ಯನಾಗಿ, ತರಕಾರಿ ಮಾರುವವನ ಗೆಟಪ್’ನಲ್ಲಿ ಯಾವತ್ತಾದ್ರೂ ನೋಡಿದ್ದೀರಾ ? ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಸಖತ್ ಫಿಟ್ & ಫೈನ್. ಫಿಟ್ನೆಸ್’ನಲ್ಲಿ ವಿರಾಟ್ ಕೊಹ್ಲಿ ಎಲ್ಲರಿಗೂ ಮಾದರಿ.

ಆಟದ ವಿಚಾರಕ್ಕೆ ಬಂದ್ರೆ ಸಮಕಾಲೀನ ಕ್ರಿಕೆಟ್’ನಲ್ಲಿ ಕಿಂಗ್ ಕೊಹ್ಲಿಯನ್ನು ಮೀರಿಸಿದ ಮತ್ತೊಬ್ಬ ಬ್ಯಾಟ್ಸ್’ಮನ್ ಇಲ್ಲ. ಕ್ರಿಕೆಟ್’ನ ಮೂರು ಫಾರ್ಮ್ಯಾಟ್’ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಆಟಗಾರ. ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರೆಲ್ಲಾ ಕೊಹ್ಲಿಯನ್ನು ಪ್ರೀತಿಸುತ್ತಾರೆ, ಆರಾಧಿಸುತ್ತಾರೆ. ಇಲ್ಲೊಬ್ಬ ಕೊಹ್ಲಿ ಫ್ಯಾನ್ ತನ್ನ ನೆಚ್ಚಿನ ಕ್ರಿಕೆಟಿಗನ ಒಂದಷ್ಟು ಚಿತ್ರಗಳನ್ನು ಬಿಡಿಸಿದ್ದಾನೆ. ತನ್ನದೇ ಕಲ್ಪನೆಯಲ್ಲಿ ಕೊಹ್ಲಿಗೆ ಒಂದಷ್ಟು ರೂಪಗಳನ್ನು ನೀಡಿದ್ದಾನೆ.

ರಾಜನಾಗಿ, ಯೋಧನಾಗಿ, ವೈದ್ಯನಾಗಿ, ತರಕಾರಿ ಮಾರುವವನಾಗಿ, ಪೈಲಟ್ ಆಗಿ, ಫುಟ್ಬಾಲ್ ಆಟಗಾರನಾಗಿ ವಿರಾಟ್ ಕೊಹ್ಲಿಯನ್ನು ಚಿತ್ರಿಸಲಾಗಿದೆ. ಅಂದ ಹಾಗೆ ವಿರಾಟ್ ಕೊಹ್ಲಿ ಅವರನ್ನು ವಿಭಿನ್ನ ಅವತಾರದಲ್ಲಿ ಚಿತ್ರಿಸಿರುವ ಕಲಾವಿದನ ಹೆಸರು ಸಹೀದ್. ಈತ ಡಿಜಿಟಲ್ ಕ್ರಿಯೇಟರ್. ವಿರಾಟ್ ಕೊಹ್ಲಿಯವರ ದೊಡ್ಡ ಅಭಿಮಾನಿಯಾಗಿರುವ ಕಿಂಗ್ ಕೊಹ್ಲಿ, ವಿರಾಟ್ ಅವರನ್ನು ಬೇರೆ ಬೇರೆ ರೂಪಗಳಲ್ಲಿ ಚಿತ್ರಿಸಿದ್ದು, ಆ ಚಿತ್ರಗಳನ್ನು ಇನ್’ಸ್ಟಾಗ್ರಾಂನದಲ್ಲಿ ಹಂಚಿಕೊಂಡಿದ್ದಾನೆ. ಆ ಚಿತ್ರಗಳೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ : World Cup 2023 draft fixtures : ಅಕ್ಟೋಬರ್ 15ಕ್ಕೆ ಮೋದಿ ಸ್ಟೇಡಿಯಂನಲ್ಲಿ ಭಾರತ vs ಪಾಕ್ ವಿಶ್ವಕಪ್ ಹೈವೋಲ್ಟೇಜ್ ಮ್ಯಾಚ್

35 ವರ್ಷದ ವಿರಾಟ್ ಕೊಹ್ಲಿ ಭಾನುವಾರ ಇಂಗ್ಲೆಂಡ್’ನ ದಿ ಓವಲ್ ಮೈದಾನದಲ್ಲಿ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ 14 ರನ್ ಹಾಗೂ 2ನೇ ಇನ್ನಿಂಗ್ಸ್’ನಲ್ಲಿ 49 ರನ್ ಗಳಿಸಿದ್ದರು. WTC ಫೈನಲ್ ಪಂದ್ಯದಲ್ಲಿ ಭಾರತವನ್ನು 209 ರನ್’ಗಳಿಂದ ಸೋಲಿಸಿದ್ದ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.

Virat Kohli: King, Doctor, Warrior, Pilot, Footballer: This is the avatar of King Kohli you have never seen before

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular