ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ನಾಯಕ, ಆಧುನಿಕ ಕ್ರಿಕೆಟ್”ನ ಮಾಸ್ಟರ್ ಬ್ಲಾಸ್ಟರ್, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli Photos Viral ) ಅವರ ಬ್ಯಾಟ್ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿದ್ದು ತುಂಬಾ ಕಡಿಮೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ ಎರಡೂವರೆ ವರ್ಷಗಳೇ ಕಳೆದು ಹೋಗಿವೆ. ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ಮೂರು ‘ಡಕ್’ ಸಹಿತ ದಯನೀಯ ವೈಫಲ್ಯ ಅನುಭಸಿದ್ದರು.
ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸದ ಮೂಲಕ ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆ. ಕ್ರಿಕೆಟ್’ನಿಂದ ವಿರಾಮ ಪಡೆದಿರುವ ಕೊಹ್ಲಿ, ಸಿಕ್ಕ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಜೊತೆ ವಿದೇಶಿ ಪ್ರವಾಸಕ್ಕೆ ತೆರಳಿರುವ ಕೊಹ್ಲಿ, ಸಮುದ್ರ ತಟದಲ್ಲಿ ಕುಳಿತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವಿರಾಟ್ ಕೊಹ್ಲಿ ಸದಾ ಒಂದಿಲ್ಲೊಂದು ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. Instagramನಲ್ಲಿ ಕೊಹ್ಲಿ ಪೋಸ್ಟ್ ಮಾಡುವ ಒಂದು ಫೋಟೋಗೆ 3 ಕೋಟಿಗೂ ಹೆಚ್ಚು ರೂಪಾಯಿ ಪಡೆಯುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದರು. ವಿರಾಟ್ ಕೊಹ್ಲಿ ಅವರ Instagram ಫಾಲೋವರ್ಸ್ ಸಂಖ್ಯೆ 200 ಮಿಲಿಯನ್. ಅಂದ್ರ ಬರೋಬ್ಬರಿ 20 ಕೋಟಿ.
ಕಳೆದ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿತ್ತು. ಕೊನೆಯ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಕ್ಯಾಂಪ್”ನಲ್ಲಿ ಕೋವಿಡ್ ಕೇಸ್ ಕಾಣಿಸಿಕೊಂಡ ಕಾರಣ ಸರಣಿಯನ್ನು ಮೊಟಕುಗೊಳಿಸಿದ್ದ ಟೀಮ್ ಇಂಡಿಯಾ ಆಟಗಾರರು, ಇಂಗ್ಲೆಂಡ್”ನಿಂದ ನೇರವಾಗಿ ದುಬೈಗೆ ಹಾರಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಐಪಿಎಲ್ ಆಡಲೆಂದೇ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ ಎಂಬ ಟೀಕೆಗಳೂ ಆಗ ಕೇಳಿ ಬಂದಿದ್ವು. ಆ ಸರಣಿಯಲ್ಲಿ ಬಾಕಿ ಉಳಿದಿದ್ದ ಒಂದು ಟೆಸ್ಟ್ ಪಂದ್ಯವನ್ನು ಆಡಲು ಭಾರತ ತಂಡದ ಇನ್ನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್’ಗೆ ತೆರಳಲಿದ್ದು, ಆ ಟೆಸ್ಟ್ ಪಂದ್ಯ ಜುಲೈ ಒಂದರಂದು ಸೌಥಾಂಪ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
🌊☀️ pic.twitter.com/VBVvlIIvLh
— Virat Kohli (@imVkohli) June 12, 2022
ಇದನ್ನೂ ಓದಿ : IPL 2023 Broadcasting rights : ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬರೋಬ್ಬರಿ 43,255 ಕೋಟಿಗೆ ಸೇಲ್
ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ : ಮುಂದಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೆ ಈ ಇಬ್ಬರನ್ನು ಆಡಿಸಿ
Virat Kohli Photos Viral in Social Media