IPL 2023 Broadcasting rights : ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬರೋಬ್ಬರಿ 43,255 ಕೋಟಿಗೆ ಸೇಲ್

ಮುಂಬೈ: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL) ಮತ್ತೊಂದು ದಾಖಲೆ ಬರೆದಿದೆ. ಮುಂಬೈನಲ್ಲಿ ನಡೆದ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ (IPL 2023 Broadcasting rights) ಬರೋಬ್ಬರಿ 43,255 ಕೋಟಿ ಮೊತ್ತಕ್ಕೆ ಸೇಲ್ ಆಗಿದೆ.

ಐಪಿಎಲ್ ಪಂದ್ಯಗಳ ಟಿವಿ ಹಕ್ಕನ್ನು ಸೋನಿ ನೆಟ್’ವರ್ಕ್ (Sony Network) ಗೆದ್ದುಕೊಂಡಿದೆ. ರಿಲಯನ್ಸ್”ನ ಅಂಗಸಂಸ್ಥೆ ವಯಾಕಾಮ್-18ನ ಪ್ರಬಲ ಪೈಪೋಟಿ ಮಧ್ಯೆಯೂ ಮತ್ತೆ ಐಪಿಎಲ್ ಟಿವಿ ರೈಟ್ಸ್ ತನ್ನದಾಗಿಸಿಕೊಳ್ಳುವಲ್ಲಿ ಸೋನಿ ಯಶಸ್ವಿಯಾಗಿದೆ. ಚೊಚ್ಚಲ ಆವೃತ್ತಿಯ ಐಪಿಎಲ್ ಸೋನಿ ವಾಹಿನಿಯಲ್ಲೇ ಪ್ರಸಾರವಾಗಿತ್ತು. ಈಗ ಮತ್ತೆ ಸೋನಿ ನೆಟ್ವರ್ಕ್ ಐಪಿಎಲ್”ಗೆ ಮರಳಿದ್ದು 2023ರಿಂದ 2027ರವರೆಗೆ ಐಪಿಎಲ್ ಪಂದ್ಯಗಳನ್ನು ಸೋನಿ ನೆಟ್’ವರ್ಕ್ ಪ್ರಸಾರ ಮಾಡಲಿದೆ.

ಐಪಿಎಲ್ ಟಿವಿ ಹಕ್ಕು ಬರೋಬ್ಬರಿ 23,575 ಕೋಟಿ ರೂಪಾಯಿಗೆ ಸೋನಿ ನೆಟ್”ವರ್ಕ್ ಪಾಲಾಗಿದೆ. ಡಿಜಿಟಲ್ ಹಕ್ಕು 19,680 ಕೋಟಿ ರೂಪಾಯಿಗೆ ಸೇಲ್ ಆಗಿದೆ. 2018ರಿಂದ 2022ರವರೆಗಿನ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ 16,347 ಕೋಟಿ ರೂಪಾಯಿಗೆ ಸ್ಟಾರ್ ನೆಟ್’ವರ್ಕ್ ಪಾಲಾಗಿತ್ತು. ಈ ಬಾರಿಯ ಬಿಡ್ಡಿಂಗ್ ನಿರೀಕ್ಷೆಗೂ ಮೀರಿ ಬಿಸಿಸಿಐಗೆ ಲಾಭ ತಂದುಕೊಟ್ಟಿದ್ದು, ಇದು ಕಳೆದ ಬಾರಿಗಿಂತ ಎರಡೂವರೆ ಪಟ್ಟು ಹೆಚ್ಚು.

ಹರಾಜಿನಲ್ಲಿ ಟಿವಿ ಪ್ರಸಾರ ಹಕ್ಕುಗಳಿಗೆ ಸೋನಿ ನೆಟ್’ವರ್ಕ್, ರಿಲಯನ್ಸ್ ವಯಾಕಾಮ್ 18 ಮತ್ತು ಸ್ಟಾರ್ ನೆಟ್’ವರ್ಕ್ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಡಿಜಿಟಲ್ ಹಕ್ಕುಗಳಿಗಾಗಿ ಡಿಸ್ನಿ ಹಾಟ್’ಸ್ಟಾರ್ , ಝೀ ಮತ್ತು ರಿಲಯನ್ಸ್ ಜಿಯೋ ಮಧ್ಯೆ ಸ್ಪರ್ಧೆ ನಡೆದಿದೆ. ಈ ಬಾರಿ ಬಿಸಿಸಿಐ, ಐಪಿಎಲ್ ಪ್ರಸಾರ ಹಕ್ಕುಗಳನ್ನು ನಾಲ್ಕು ಪ್ಯಾಕೇಜ್’ಗಳ ರೂಪದಲ್ಲಿ ಬಿಡ್ಡಿಂಗ್ ಮಾಡುತ್ತಿದೆ.

4 ಪ್ಯಾಕೇಜ್ ಸಿಸ್ಟಮ್
ಇನ್ನು ಮುಂದೆ ಐಪಿಎಲ್’ನ ಎಲ್ಲಾ ಪಂದ್ಯಗಳು ಒಂದೇ ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ. ಕಾರಣ ಬಿಸಿಸಿಐ ಸಿದ್ಧಪಡಿಸಿರುವ 4 ಪ್ಯಾಕೇಜ್ ಸಿಸ್ಟಮ್. A, B, C ಮತ್ತು D ಎಂಬ ನಾಲ್ಕು ಪ್ಯಾಕೇಜ್”ಗಳಲ್ಲಿ ಐಪಿಎಲ್ ಬ್ರಾಡ್ ಕಾಸ್ಟಿಂಗ್ ಹಕ್ಕನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ.
ಪ್ಯಾಕೇಜ್ A: ಭಾರತೀಯ ಉಪಖಂಡದ ಟಿವಿ ಹಕ್ಕು
ಪ್ಯಾಕೇಜ್ B: ಭಾರತೀಯ ಉಪಖಂಡಕ್ಕೆ ಮಾತ್ರ ಡಿಜಿಟಲ್ ಹಕ್ಕು
ಪ್ಯಾಕೇಜ್ C: ಭಾರತೀಯ ಉಪಖಂಡಕ್ಕೆ ಮಾತ್ರ ಪ್ಲೇಆಫ್ ಸೇರಿದಂತೆ ಕೆಲ ಪಂದ್ಯಗಳ ಡಿಜಿಟಲ್ ಹಕ್ಕು.
ಪ್ಯಾಕೇಜ್ D: ಭಾರತೀಯ ಉಪಖಂಡ ಹೊರತು ಪಡಿಸಿ ಪ್ರಪಂಚದ ಉಳಿದ ಭಾಗಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕು.

ಪ್ಯಾಕೇಜ್ C ವಿಶೇಷತೆ
ಪ್ಯಾಕೇಜ್ C ‘ಸ್ಪೆಷಲ್ ಪ್ಯಾಕೇಜ್’ ಪಂದ್ಯಗಳನ್ನು ಒಳಗೊಂಡಿರುತ್ತದೆ. ಈ ಪ್ಯಾಕೇಜ್‌ನಲ್ಲಿನ ಪಂದ್ಯಗಳ ಸಂಖ್ಯೆ, ಐಪಿಎಲ್ ಋತುವಿನಲ್ಲಿನ ಒಟ್ಟು ಪಂದ್ಯಗಳ ಸಂಖ್ಯೆಯ ಆಧಾರದ ಮೇಲೆ ಬದಲಾಗುತ್ತದೆ. 2022ರಂತೆ ಐಪಿಎಲ್’ನಲ್ಲಿ 74 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ 18 ಪಂದ್ಯಗಳನ್ನು ಹೊಂದಿರುತ್ತದೆ. ಒಂದು ಋತುವಿನಲ್ಲಿ 74 ಕ್ಕಿಂತ ಹೆಚ್ಚು ಪಂದ್ಯಗಳು ಇದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು ಪ್ರತಿ ಹೆಚ್ಚುವರಿ 10 ಪಂದ್ಯಗಳಿಗೆ ಎರಡು ಹಂತಗಳಲ್ಲಿ ಏರಿಕೆಯಾಗುತ್ತದೆ. ಒಂದು ಋತುವಿನಲ್ಲಿ 84 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು 20 ಆಗಿರುತ್ತದೆ ಮತ್ತು ಪಂದ್ಯಾವಳಿಯು 94 ಪಂದ್ಯಗಳನ್ನು ಹೊಂದಿದ್ದರೆ, ನಂತರ ವಿಶೇಷ ಪ್ಯಾಕೇಜ್ 22 ಪಂದ್ಯಗಳನ್ನು ಹೊಂದಿರುತ್ತದೆ.

ಸ್ಪೆಷಲ್ ಪ್ಯಾಕೇಜ್”ನಲ್ಲಿ ಯಾವ ಯಾವ ಪಂದ್ಯಗಳು?
ಉದ್ಘಾಟನಾ ಪಂದ್ಯ, ವಾರಾಂತ್ಯದ ರಾತ್ರಿ ಪಂದ್ಯಗಳು, ಫೈನಲ್ ಸೇರಿದಂತೆ ನಾಲ್ಕು ಪ್ಲೇ ಆಫ್ ಪಂದ್ಯಗಳು.

ಪ್ರತಿ ಪ್ಯಾಕೇಜ್‌ಗೆ ಪ್ರತಿ ಪಂದ್ಯದ ಮೂಲ ಬೆಲೆ ಎಷ್ಟು..?
ಪ್ಯಾಕೇಜ್ A: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 49 ಕೋಟಿ.
ಪ್ಯಾಕೇಜ್ B: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 33 ಕೋಟಿ.
ಪ್ಯಾಕೇಜ್ C: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 22 ಕೋಟಿ.
ಪ್ಯಾಕೇಜ್ D: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 3 ಕೋಟಿ.

5 ವರ್ಷಗಳಿಗೆ ಪ್ರತೀ ಪ್ಯಾಕೇಜ್’ನ ಒಟ್ಟು ಮೂಲ ಬೆಲೆ ಎಷ್ಟು..?
ಪ್ಯಾಕೇಜ್ A: 74 x 49 ಕೋಟಿ x 5 (ಸೀಸನ್) = 18,130 ಕೋಟಿ.
ಪ್ಯಾಕೇಜ್ B: 12,210 ಕೋಟಿ

ಇದನ್ನೂ ಓದಿ : IPL Broadcasting rights : ಐಪಿಎಲ್ ಬ್ರಾಡ್‌ಕಾಸ್ಟ್ ರೈಟ್ಸ್: ಒಂದು ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಹೆಚ್ಚು

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ : ಮುಂದಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೆ ಈ ಇಬ್ಬರನ್ನು ಆಡಿಸಿ

IPL 2023 Broadcasting rights Sale 43,255 crore Sony Networks

Comments are closed.