Virat Kohli Vs Smriti Mandhana bowling action ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ 4 ರನ್’ಗಳ ರೋಚಕ ಗೆಲುವು ಸಾಧಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತೀಯ ಮಹಿಳಾ ತಂಡ, 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಸರಣಿ ಕೈವಶ ಮಾಡಿಕೊಂಡಿದೆ.

ನಾಯಕಿ ಹರ್ಮನ್ ಪ್ರೀತ್ ಕೌರ್ (ಅಜೇಯ 103 ರನ್, 88 ಎಸೆತ) ಹಾಗೂ ಉಪನಾಯಕಿ ಸ್ಮೃತಿ ಮಂಧನ (136 ರನ್, 120 ಎಸೆತ) ಬಾರಿಸಿದ ಅಮೋಘ ಶತಕಗಳ ನೆರವಿನಿಂದ ಭಾರತ 50 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.
ನಂತರ ಕಠಿಣ ಸವಾಲು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, ನಾಯಕಿ ಲೌರಾ ವೊಲ್ಫ್’ವಡ್ತ್ (ಅಜೇಯ 135 ರನ್, 135 ಎಸೆತ) ಮತ್ತು ಮರಿಜೇನ್ ಕಪ್ (114 ರನ್, 94 ಎಸೆತ) ಅವರ ಶತಕಗಳ ಹೊರತಾಗಿಯೂ 50 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಲಷ್ಟೇ ಶಕ್ತವಾಗಿ ಕೂದಲೆಳೆಯ ಅಂತರದಲ್ಲಿ ಸೋಲಿಗೆ ಶರಣಾಯಿತು.
ಇದನ್ನೂ ಓದಿ : Smriti Mandhana: ಚಿನ್ನಸ್ವಾಮಿಯಲ್ಲಿ ಮನೆಮಗಳು ಸ್ಮೃತಿ ಮಂಧನ ಮತ್ತೊಂದು ಶತಕ, ನಾಯಕಿ ಕೌರ್ ಸೆಂಚುರಿ ಸಂಭ್ರಮ !
ಭಾರತದ ಸೆಂಚುರಿ ಸ್ಟಾರ್ ಸ್ಮೃತಿ ಮಂಧನ ಬೌಲಿಂಗ್’ನಲ್ಲೂ ಮಿಂಚಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕಿ ಸುನೆ ಲೀಸ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸ್ಮೃತಿ ಮಂಧನ ಪಡೆದ ಚೊಚ್ಚಲ ವಿಕೆಟ್. ಸ್ಮೃತಿ ಮಂಧನ ಅವರ ಬೌಲಿಂಗ್ ಶೈಲಿ ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಬೌಲಿಂಗ್ ಶೈಲಿಯನ್ನೇ ಹೋಲುತ್ತದೆ (Smriti Mandhana and Virat Kohli bowling style). ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://x.com/im_s_k_/status/1803445181083267259
https://x.com/AhmedGT_/status/1803422167633371581
ತಮ್ಮ ಬೌಲಿಂಗ್ ಶೈಲಿ ವಿರಾಟ್ ಕೊಹ್ಲಿ ಅವರ ಬೌಲಿಂಗ್ ಶೈಲಿಯಂತೆಯೇ ಇದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಸ್ವತಃ ಸ್ಮೃತಿ ಮಂಧನ ಅವರೇ ಹೇಳಿದ್ದರು. ಆ ವೀಡಿಯೊ ಕೂಡ ಈಗ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಅವರಂತೆ ಸ್ಮೃತಿ ಮಂಧನ ಅವರ ಜರ್ಸಿ ನಂಬರ್ ಕೂಡ 18. ಕೊಹ್ಲಿ ಭಾರತ ಪುರುಷರ ತಂಡದ ರನ್ ಮಷಿನ್, ಸ್ಮೃತಿ ಭಾರತ ಮಹಿಳಾ ತಂಡದ ರನ್ ಮಷಿನ್. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಸ್ಮೃತಿ ಮಂಧನ ಅಮೋಘ ಶತಕಗಳನ್ನು ಬಾರಿಸಿದ್ದಾರೆ.
ಭಾರತ ಪರ ಅತೀ ಹೆಚ್ಚು ಏಕದಿನ ಶತಕಗಳನ್ನು ದಾಖಲಿಸಿದವರ ಸಾಲಿನಲ್ಲಿ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಸ್ಮೃತಿ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲ, ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ಸತತ 2 ಶತಕಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: Smriti Mandhana: ದ್ರಾವಿಡ್ ಕೊಟ್ಟ ಬ್ಯಾಟ್‌ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಳು Queen Of Cricket
ಭಾರತ ಪರ ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (ಟಾಪ್-3)
1. ಸ್ಮೃತಿ ಮಂಧನ: 7 ಶತಕ (84 ಇನ್ನಿಂಗ್ಸ್)
2. ಮಿಥಾಲಿ ರಾಜ್: 7 ಶತಕ (211 ಇನ್ನಿಂಗ್ಸ್)
3. ಹರ್ಮನ್ ಪ್ರೀತ್ ಕೌರ್: 6 ಶತಕ (113 ಇನ್ನಿಂಗ್ಸ್)
https://x.com/Manojy9812/status/1803432346068345228
https://x.com/smdhaka/status/1803669389683593340
Virat Kohli Vs Smriti Mandhana bowling action is going viral