Virat Kohli : ಲಂಡನ್: ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ (Virat Kohli) ಅವರಿಗೆ ಈಗ 35 ವರ್ಷ ವಯಸ್ಸು. ಇನ್ನೂ ಕನಿಷ್ಠ ನಾಲ್ಕು ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಫಿಟ್ನೆಸ್ ಅನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆೆ. ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಕ್ರೀಡಾಪಟು ಗಳಿಗೆ ಮಾದರಿಯಾಗಿ ನಿಲ್ಲುವ ಆಟಗಾರ.

ದೆಹಲಿಯವರಾದ ವಿರಾಟ್ ಕೊಹ್ಲಿ ಸದ್ಯ ಮುಂಬೈ ನಿವಾಸಿಯಾಗಿದ್ದು, ವಾಣಿಜ್ಯ ನಗರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಂಬೈನ ಅಲಿಭಾಗ್’ನಲ್ಲಿ ಕೊಹ್ಲಿ ಫಾರ್ಮ್ ಹೌಸ್ ಒಂದನ್ನು ನಿರ್ಮಿಸುತ್ತಿದ್ದು, ಐಷಾರಾಮಿ ಮನೆ ಕಟ್ಟಿಸುತ್ತಿದ್ದಾರೆ. ಹಾಗಂತ ವಿರಾಟ್ ಕೊಹ್ಲಿ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಂತರ ಮುಂಬೈನಲ್ಲೇ ನೆಲೆಸುತ್ತಾರಾ? ಖಂಡಿತಾ ಇಲ್ಲ.
ಇದನ್ನೂ ಓದಿ : Abhishek Sharma: ಸಿಡಿಲಬ್ಬರದ ಶತಕ ಬಾರಿಸಿ ರೋಹಿತ್ ಶರ್ಮಾ ಜಾಗ ತುಂಬಲು ಬಂದ ಅಭಿಷೇಕ್ ಶರ್ಮಾ
ಕ್ರಿಕೆಟ್’ನಿಂದ ನಿವೃತ್ತಿಯಾದ ನಂತರ ವಿರಾಟ್ ಕೊಹ್ಲಿ ಪತ್ನಿ ಮತ್ತು ಮಕ್ಕಳ ಸಮೇತ ಬ್ರಿಟನ್’ನ ಲಂಡನ್’ನಲ್ಲಿ ನೆಲೆಸಲಿದ್ದಾರೆ. ಲಂಡನ್’ನಲ್ಲಿ ಕೊಹ್ಲಿ ಈಗಾಗಲೇ 40 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ್ದಾರೆ. ಸಾಮಾನ್ಯರಂತೆ ಜೀವನ ನಡೆಸುವ ಉದ್ದೇಶದಿಂದ ನಿವೃತ್ತಿಯ ಬಳಿಕ ಲಂಡನ್’ನಲ್ಲಿ ನೆಲೆಸಲು ವಿರಾಟ್ ಕೊಹ್ಲಿ ತೀರ್ಮಾನಿಸಿದ್ದಾರೆ. ಕೊಹ್ಲಿ ದೊಡ್ಡ ಸೆಲೆಬ್ರಿಟಿಯಾಗಿರುವ ಕಾರಣ ಭಾರತದಲ್ಲಿ ಅವರ ಖಾಸಗಿತನಕ್ಕೆ ಅಡ್ಡಿಯಾಗುತ್ತಿದ್ದು, ಈ ಕಾರಣದಿಂದ ನಿವೃತ್ತಿಯ ನಂತರದ ದಿನಗಳನ್ನು ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಾಮಿಕಾ ಕೊಹ್ಲಿ ಮತ್ತು ಪುತ್ರ ಅಕಾಯ್ ಕೊಹ್ಲಿ ಜೊತೆ ಲಂಡನ್’ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ : Abhishek Sharma: ಸಿಡಿಲಬ್ಬರದ ಶತಕ ಬಾರಿಸಿ ರೋಹಿತ್ ಶರ್ಮಾ ಜಾಗ ತುಂಬಲು ಬಂದ ಅಭಿಷೇಕ್ ಶರ್ಮಾ

ಅನುಷ್ಕಾ ಶರ್ಮಾ ಈಗಾಗಲೇ ಲಂಡನ್’ನಲ್ಲಿದ್ದು, ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಗುರುವಾರ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮುಂಬೈನಿಂದ ಲಂಡನ್’ಗೆ ತೆರಳಿದ್ದರು. ಜೂನ್ 19ರಂದು ಬಾರ್ಬೆಡೋಸ್’ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಮಣಿಸಿದ್ದ ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಆಕರ್ಷಕ 76 ರನ್ ಸಿಡಿಸಿದ್ದ ಕಿಂಗ್ ಕೊಹ್ಲಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದಿದ್ದರು.
ಇದನ್ನೂ ಓದಿ : Mohammad Siraj: ವಿಶ್ವಕಪ್ ಪದಕವನ್ನು ತಾಯಿಯ ಕೊರಳಿಗೆ ತೊಡಿಸಿದ ಮೊಹಮ್ಮದ್ ಸಿರಾಜ್
Virat Kohli will leave India after retirement