ಭಾನುವಾರ, ಏಪ್ರಿಲ್ 27, 2025
HomeSportsCricketಆರ್‌ಸಿಬಿ ಮುಂದಿನ ನಾಯಕ ಯಾರು ? ವಿರಾಟ್‌ ಕೊಹ್ಲಿ Vs ಕೆಎಲ್‌ ರಾಹುಲ್‌ ನಡುವೆ ಬಿಗ್‌ಫೈಟ್‌

ಆರ್‌ಸಿಬಿ ಮುಂದಿನ ನಾಯಕ ಯಾರು ? ವಿರಾಟ್‌ ಕೊಹ್ಲಿ Vs ಕೆಎಲ್‌ ರಾಹುಲ್‌ ನಡುವೆ ಬಿಗ್‌ಫೈಟ್‌

Who will be the next captain of RCB IPL 2025 : ಆರ್‌ಸಿಬಿ ನಾಯಕತ್ವಕ್ಕಾಗಿ (RCB Captian) ಕನ್ನಡಿಗ ಕೆಎಲ್‌ ರಾಹುಲ್‌ (KL Rahul), ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ನಡುವೆ ಪೈಪೋಟಿ ಏರ್ಪಟ್ಟಿದೆ.

- Advertisement -

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸದ್ಯ ಐಪಿಎಲ್‌ 2025 (IPL 2025) ಕ್ಕೆ ಸಜ್ಜಾಗುತ್ತಿದೆ. ಇದುವರೆಗೆ ಐಪಿಎಲ್‌ ಟ್ರೋಫಿಯನ್ನು ಗೆಲ್ಲೋದಕ್ಕೆ ಸಾಧ್ಯವಾಗದ ಆರ್‌ಸಿಬಿ ಈ ಬಾರಿ ಹೊಸ ನಾಯಕನ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಈ ನಡುವಲ್ಲೇ ಆರ್‌ಸಿಬಿ ನಾಯಕತ್ವಕ್ಕಾಗಿ (RCB Captian) ಕನ್ನಡಿಗ ಕೆಎಲ್‌ ರಾಹುಲ್‌ (KL Rahul), ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ನಡುವೆ ಪೈಪೋಟಿ ಏರ್ಪಟ್ಟಿದೆ.

Who will be the next captain of RCB IPL 2025 Big fight between Virat Kohli Vs KL Rahul vs Rohit Sharma
Image Credit to Original Source

ವಿರಾಟ್‌ ಕೊಹ್ಲಿ ನಾಯಕತ್ವ ತ್ಯೆಜಿಸಿದ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಫಾಪ್‌ ಡುಪ್ಲೆಸಿಸ್‌ ತಂಡದ ನಾಯಕರಾಗಿದ್ದರು. ಡುಪ್ಲೆಸಿಸ್‌ ಅವರ ನಾಯಕತ್ವದಲ್ಲಿ ಕಳೆದ ಎರಡು ವರ್ಷಗಳಿಂದಲೂ ಐಪಿಎಲ್‌ನಲ್ಲಿ ಪಾಲ್ಗೊಂಡಿದೆ. ಅತ್ಯುತ್ತಮ ತಂಡ, ಬಲಿಷ್ಠ ಆಟಗಾರರೇ ಇದ್ದರೂ ಕೂಡ ಆರ್‌ಸಿಬಿಯ ಲಕ್‌ ಬದಲಾಗಲೇ ಇಲ್ಲ. ಆದರೆ ಈ ಬಾರಿ ಆರ್‌ಸಿಬಿ ಹೊಸ ನಾಯಕನ ಹುಡುಕಾಟದಲ್ಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ಡೆಕ್ಕನ್‌ ಚಾರ್ಜಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಸನ್‌ರೈಸಸ್‌ ಹೈದ್ರಾಬಾದ್‌ ತಂಡದ ವಿರುದ್ದ ಸೋಲನ್ನು ಕಂಡಿತ್ತು. ಆರ್‌ಸಿಬಿ ಫ್ಯಾನ್ಸ್‌ ಅಭಿಮಾನಿಗಳು ನಿರಾಸೆಯನ್ನು ಅನುಭವಿಸಿದ್ದರು.

ಇದನ್ನೂ ಓದಿ : IPL 2025 Auction : ಸೂರ್ಯಕುಮಾರ್‌ಗಾಗಿ ಶ್ರೇಯಸ್‌ ಅಯ್ಯರ್‌ ಮುಂಬೈಗೆ ಮಾರಾಟಕ್ಕೆ ಸಿದ್ದವಾದ ಕೆಕೆಆರ್‌

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಪ್‌ ಡುಪ್ಲಸಿಸ್‌ ನಾಯಕಾದ್ರೂ ಕೂಡ ಆರ್‌ಸಿಬಿಯ ಲಕ್‌ ಮಾತ್ರ ಬದಲಾಗಲೇ ಇಲ್ಲ. ಐಪಿಎಲ್‌ ೨೦೨೫ ಮೆಗಾ ಹರಾಜಿಗೂ ಮೊದಲೇ ಡುಪ್ಲಸಿಸ್‌ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ. ವಿರಾಟ್‌ ಕೊಹ್ಲಿ ಅವರನ್ನು ಆರ್‌ಸಿಬಿ ರಿಟೈನ್‌ ಮಾಡುವುದು ಬಹುತೇಕ ಖಚಿತ. ಈ ನಡುವಲ್ಲೇ ಕೆಎಲ್‌ ರಾಹುಲ್‌, ರೋಹಿತ್‌ ಶರ್ಮಾ ಕೂಡ ಆರ್‌ಸಿಬಿ ತಂಡ ಸೇರುವ ಮಾತುಗಳು ಕೇಳಿಬರುತ್ತಿದೆ.

Who will be the next captain of RCB IPL 2025 Big fight between Virat Kohli Vs KL Rahul vs Rohit Sharma
Image Credit to Original Source

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕನಾಗಿರುವ ಕೆಎಲ್‌ ರಾಹುಲ್‌ ಸತತ ಎರಡು ವರ್ಷಗಳ ಕಾಲ ತಂಡವನ್ನು ಉತ್ತಮವಾಗಿ ಮುನ್ನೆಡೆಸಿದ್ದರು. ಆದರೆ ಲಕ್ನೋ ತಂಡದ ನಾಯಕನಾದ ಮೊದಲ ಋತುವಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಹುಲ್‌ ತಂಡವನ್ನು ಫ್ಲೇ ಆಫ್‌ ಪ್ರವೇಶಿಸಿ ಐಪಿಎಲ್‌ನಿಂದ ಹೊರ ನಡೆದಿದ್ದರು. ಆದರೆ ಲಕ್ನೋ ತಂಡದ ಮಾಲೀಕ ಸಂಜೀವ ಗೋಯೆಂಕಾ ಅವರ ವರ್ತನೆಯಿಂದ ಬೇಸತ್ತು ತಂಡದಿಂದ ಹೊರ ನಡೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ : IND vs BAN : ದುಲೀಪ್ ಟ್ರೋಫಿಯಿಂದ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಡ್ತಾರಾ ಈ 3 ಆಟಗಾರರು

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಿಂದ ಹೊರ ಬಂದ್ರೆ ರಾಯಲ್‌ ಚಾಲೆಂಜರ್ಸ್‌ ತಂಡವನ್ನು ರಾಹುಲ್‌ ಸೇರ್ಪಡೆ ಆಗೋದು ಪಕ್ಕಾ. ಕೆಎಲ್‌ ರಾಹುಲ್‌ ೨೦೧೩ರಿಂದ ೨೦೧೬ರ ವರೆಗೂ ಕೂಡ ಆರ್‌ಸಿಬಿ ತಂಡದ ಆಟಗಾರರಾಗಿದ್ದರು. ಬೆಂಗಳೂರು ತಂಡದ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಕನ್ನಡಿಗರೇ ಆಗಿರುವುದರಿಂದ ರಾಹುಲ್‌ ಸೇರ್ಪಡೆಗೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಆರ್‌ಸಿಬಿ ರಾಹುಲ್‌ ಮರಳಿದ್ರೆ ತಂಡದ ನಾಯಕನಾಗೋದು ಪಕ್ಕಾ.

ಇನ್ನೊಂದೆಡೆಯಲ್ಲಿ ವಿರಾಟ್‌ ಕೊಹ್ಲಿ ಕೂಡ ಆರ್‌ಸಿಬಿ ನಾಯಕರಾಗುವ ಮಾತುಗಳು ಕೇಳಿಬರುತ್ತಿದೆ. ೨೦೧೧ ರಿಂದ ೨೦೨೩ರ ವರೆಗೆ ಆರ್‌ಸಿಬಿ ತಂಡವನ್ನು ವಿರಾಟ್‌ ಕೊಹ್ಲಿ ಮುನ್ನೆಡೆಸಿದ್ದರು. ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ೨೦೧೬ರಲ್ಲಿ ಆರ್‌ಸಿಬಿ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೂ ಪ್ರಶಸ್ತಿ ಜಯಿಸುವಲ್ಲಿ ವಿಫಲವಾಗಿತ್ತು. ಇದೇ ಬೇಸರಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವ ತ್ಯೆಜಿಸಿದ್ದರು. ಆದರೆ ಟಿ೨೦ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಆರ್‌ಸಿಬಿ ತಂಡ ನಾಯಕರಾಗುವ ಕುರಿತು ಒತ್ತಡ ಕೇಳಿಬಂದಿದೆ.

Who will be the next captain of RCB IPL 2025 Big fight between Virat Kohli Vs KL Rahul vs Rohit Sharma
Image Credit to Original Source

ಮುಂಬೈ ಇಂಡಿಯನ್ಸ್‌ ತಂಡ ನಾಯಕರಾಗಿರುವ ರೋಹಿತ್‌ ಶರ್ಮಾ ಅವರನ್ನು ಕಳೆದ ಐಪಿಎಲ್‌ನಲ್ಲಿ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಅಲ್ಲದೇ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ರೋಹಿತ್‌ ಶರ್ಮಾ ತೊರೆಯುವುದು ಖಚಿತ ಎನ್ನಲಾಗುತ್ತಿದೆ. ಒಂದೊಮ್ಮೆ ರೋಹಿತ್‌ ಶರ್ಮಾ ಐಪಿಎಲ್‌ ಹರಾಜಿನಲ್ಲಿ ಕಾಣಿಸಿಕೊಂಡ್ರೆ ಆರ್‌ಸಿಬಿ ಖರೀದಿಸುವ ಸಾಧ್ಯತೆಯಿದೆ. ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳಲು ಸಾಧ್ಯವಾಗದೇ ಇದ್ರೆ ರೋಹಿತ್‌ ಶರ್ಮಾ ನಾಯಕರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2025 : ಐಪಿಎಲ್ ಹರಾಜಿಗೆ ಹೊಸ ರೂಲ್ಸ್‌ : ಏನಿದು 3+1 ನಿಯಮ ?

Who will be the next captain of RCB IPL 2025 ? Big fight between Virat Kohli Vs KL Rahul vs Rohit Sharma

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular