Wimbledon dress code: ವಿಂಬಲ್ಡನ್ ಆಡುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್; ಡ್ರೆಸ್ ಕೋಡ್ ನಿಯಮದಲ್ಲಿ ಬದಲಾವಣೆ

ಲಂಡನ್: Wimbledon dress code: ವಿಂಬಲ್ಡನ್ ನಲ್ಲಿ ಭಾಗವಹಿಸುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಆಟ ನಡೆಯುವ ವೇಳೆ ಆಟಗಾರರು ಬಿಳಿ ಬಣ್ಣದ ಅಂಡರ್ ಶಾಟ್ರ್ಸ್ ಧರಿಸಬೇಕು ಎಂಬ ನಿಯಮವನ್ನು ವಿಂಬಲ್ಡನ್ ಆಡಳಿತ ಮಂಡಳಿ ಸಡಿಲಗೊಳಿಸಿದೆ. ಅಲ್ಲದೇ ಆಟಗಾರರಿಗೆ ಈಗ ಬೇರೆ ಬಣ್ಣದ ಅಂಡರ್ ಶಾಟ್ರ್ಸ್ ಧರಿಸಲು ಸೂಚಿಸಿದೆ.

ಇದನ್ನೂ ಓದಿ: India Vs New Zeeland match cancelled: ಭಾರತ Vs ನ್ಯೂಜಿಲೆಂಡ್ ಟಿ20 ಸರಣಿ: ಮೊದಲ ಪಂದ್ಯ ಮಳೆಯಿಂದ ರದ್ದು

ವಿಂಬಲ್ಡನ್ ತನ್ನ ಗ್ರಾಸ್ ಕೋರ್ಟ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಎಲ್ಲಾ ಆಟಗಾರ್ತಿಯರಿಗೆ ಕಟ್ಟುನಿಟ್ಟಾಗಿ ಬಳಿ ಬಣ್ಣದ ಉಡುಪಿನ ನಿಯಮವನ್ನು ಜಾರಿಗೊಳಿಸಿತ್ತು. ಆದರೆ ಆಲ್ ಇಂಗ್ಲೆಂಡ್ ಕ್ಲಬ್ ಡಬ್ಲ್ಯೂಟಿಎ, ಬಟ್ಟೆ ಕಂಪೆನಿಗಳು ಮತ್ತು ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ಬಳಿಕ ತನ್ನ ನಿಯಮಗಳನ್ನು ಬದಲಿಸಲು ಯೋಜಿಸಿದೆ ಎಂದು ತಿಳಿಸಿದೆ. ಋತುಸ್ರಾವದ ಸಂದರ್ಭದಲ್ಲಿ ಮಹಿಳಾ ಆಟಗಾರ್ತಿಯರು ಹೆಚ್ಚು ಆರಾಮದಾಯಕವಾಗಿ ಆಡಲು ಅನುವು ಮಾಡಿಕೊಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿಕೊಂಡಿದೆ.

ಹೊಸ ನಿಯಮದ ಪ್ರಕಾರ, ಮಹಿಳೆಯರು ತಮ್ಮ ಶಾಟ್ರ್ಸ್ ಅಥವಾ ಸ್ಕರ್ಟ್‍ಗಳಿಗಿಂತ ಉದ್ದವಾಗಿರದಿದ್ದಲ್ಲಿ ಡಾರ್ಕ್ ಅಥವಾ ಲೈಟ್ ಡಾರ್ಕ್ ಬಣ್ಣದ ಅಂಡರ್ ಶಾಟ್ರ್ಸ್ ಧರಿಸಲು ಅವಕಾಶವಿದೆ. ಈ ನಿಯಮ ಒಂದನ್ನು ಹೊರತುಪಡಿಸಿ ಇನ್ನುಳಿದ ಹಳೆಯ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಎಲ್ಲವೂ ಹಾಗೆಯೇ ಇರಲಿದೆ ಎಂದು ವಿಂಬಲ್ಡನ್ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: Pandya T20 captain: ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್’ಗೆ ಕೊಕ್, ಹಾರ್ದಿಕ್ ಪಾಂಡ್ಯ ಹೊಸ ಕ್ಯಾಪ್ಟನ್

‘ಆಟಗಾರರನ್ನು ಬೆಂಬಲಿಸಲು ಬದ್ಧರಾಗಿದ್ದೇವೆ. ಮತ್ತು ಅವರಿಗೆ ಯಾವ ರೀತಿಯ ನೆರವು ನೀಡಿದರೆ ಅವರು ಅತ್ಯುತ್ತಮ ಪ್ರದರ್ಶನ ನೀಡಬಹುದು ಅನ್ನೋದರ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಕೇಳುವುದಾಗಿ ಆಲ್ ಇಂಗ್ಲೆಂಡ್ ಕ್ಲಬ್ ನ ಮುಖ್ಯ ಕಾರ್ಯನಿರ್ವಹಕರಾದ ಸ್ಯಾಲಿ ಬೋಲ್ಟನ್ ತಿಳಿಸಿದ್ದಾರೆ. ಹಾಗೆಯೇ ಈ ನಿಯಮದಲ್ಲಿ ಸಡಿಲಿಕೆ ಮಾಡುವ ಮೂಲಕ ಆಟಗಾರರ ಆತಂಕ ನಿವಾರಣೆಯಾಗಲಿದ್ದು, ಉತ್ತಮ ಪ್ರದರ್ಶನದತ್ತ ಸಂಪೂರ್ಣ ಗಮನಹರಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Wimbledon dress code: Wimbledon will allow women to wear colored undershorts in nod to period concerns

Comments are closed.