Forest Rape Case: ಅತ್ಯಾಚಾರ ಪ್ರಕರಣ: ಸ್ನೇಹಿತನ ನೆರವಿನಿಂದ ಬದುಕುಳಿದ ಯುವತಿ

ಕಂಕೇರ್: (Forest Rape Case) ಕಾಡಿನಲ್ಲಿ ಯುವತಿಯ ಮೇಲೆ 23 ವರ್ಷದ ಯುವಕನೋರ್ವ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದು, ಸ್ನೇಹಿತನ ಸಹಾಯದಿಂದ ಯುವತಿ ಬದುಕುಳಿದಿರುವ ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯ ವಾಸ್ಕೋಂಗೇರಾ ಕಾಡಿನಲ್ಲಿ ನಡೆದಿದೆ. ಅತ್ಯಾಚಾರ ಅರೋಪದ ಮೇಲೆ ಯುವಕನನ್ನು ಬಂದಿಸಲಾಗಿದ್ದು, ಕಂಕೇರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆ ಕಾಲೇಜು ವಿದ್ಯಾರ್ಥಿನಿಯಾಗಿದ್ದು,ಆರೋಪಿಯು ಸಂತ್ರಸ್ತೆಯನ್ನು ತನ್ನ ಕಾರಿನಲ್ಲಿ ಹೊರಗೆ ಹೋಗುವುದಾಗಿ ಹೇಳಿ ಕಾಡಿಗೆ ಕರೆದೊಯ್ದು ಅತ್ಯಾಚಾರ(Forest Rape Case) ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ನೀಡಿದ ಮಾಹಿತಿಯ ಪ್ರಕಾರ, “ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ, ತಾನು ಅದನ್ನು ತಡೆಯಲು ಪ್ರಯತ್ನಿಸಿದ್ದೇನೆ ಮತ್ತು ತನ್ನ ಸ್ನೇಹಿತನಿಗೆ ಕರೆಯನ್ನು ಮಾಡಿರುವುದಾಗಿ ಹೇಳಿದ್ದು , ಆದರೆ ಆರೋಪಿ ಯುವಕ ತನ್ನ ಫೋನ್ ಕಿತ್ತುಕೊಂಡು ಕಾರಿನ ಹಿಂದಿನ ಸೀಟಿನಲ್ಲಿ ಎಸೆದಿದ್ದಾನೆ.” ಎಂದು ಆಕೆ ಹೇಳಿದ್ದಾಳೆ.

ಕರೆ ಸಂಪರ್ಕ ಕಡಿತಗೊಳ್ಳದ ಕಾರಣ, ಸಂತ್ರಸ್ತೆಯ ಕಿರುಚಾಟವನ್ನು ಆಕೆಯ ಸ್ನೇಹಿತ ಕೇಳಿಸಿಕೊಂಡಿದ್ದು, ತಕ್ಷಣ ಪೊಲೀಸರನ್ನು ಸಂಪರ್ಕಿಸಿ, ಆಕೆಯ ಫೋನ್ ಲೊಕೇಶನ್‌ ಅನ್ನು ಪತ್ತೆ ಹಚ್ಚಿ ಆಕೆಯನ್ನು ರಕ್ಷಿಸಲಾಗಿದೆ ಎಂದು ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂದಿಸಿದ್ದು, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 376, 376 (2) , 323 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : Sexual harassment: 17 ವರ್ಷದ ಹುಡುಗಿಯ ಮೇಲೆ ತಂದೆ, ಚಿಕ್ಕಪ್ಪ ಹಾಗೂ ಅಜ್ಜನಿಂದಲೇ ಅತ್ಯಾಚಾರ

ಇದನ್ನೂ ಓದಿ : Collision between vehicles: ಕಾರುಗಳ ನಡುವೆ ಡಿಕ್ಕಿ: 5 ಸಾವು, ಮೂವರು ಗಂಭೀರ ಗಾಯ

ಇದನ್ನೂ ಓದಿ : Sexual assault against minor: ಉಡುಪಿ : ಬಾಲಕಿಗೆ ಲೈಂಗಿಕ ದೌರ್ಜನ್ಯ, ಅಪರಾಧಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

ಬುಧವಾರ ಕಂಕೇರ್ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಾಸ್ಕೊಂಗೇರಾ ಅರಣ್ಯದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಂಕೇರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಶರದ್ ದುಬೆ ತಿಳಿಸಿದ್ದಾರೆ. ಸಂತ್ರಸ್ತೆ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಆಕೆಗೆ ಆರೋಪಿಯ ಪರಿಚಯವಿತ್ತು, ಆದ ಕಾರಣ ಆರೋಪಿಯು ಸಂತ್ರಸ್ತೆಯನ್ನು ತನ್ನ ಕಾರಿನಲ್ಲಿ ವಿಹಾರದ ನೆಪದಲ್ಲಿ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

(Forest Rape Case) A 23-year-old man tried to rape a young woman in the forest, and the young woman survived with the help of a friend. A youth has been arrested on the charge of rape and a case has been registered at the Kanker police station.

Comments are closed.