ಲಂಡನ್: 2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ, ಮತ್ತೊಮ್ಮೆ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಚಾಂಪಿಯನ್’ಷಿಪ್ ಗೆದ್ದಿದೆ. ಆದರೆ ಇದು ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ (World Championship of Legends) ಟೂರ್ನಿ.

ಬರ್ಮಿಂಗ್’ಹ್ಯಾಮ್’ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಯಕತ್ವದ ಭಾರತ ಚಾಂಪಿಯನ್ಸ್ ತಂಡ ಯೂನುಸ್ ಖಾನ್ ಸಾರಥ್ಯದ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 5 ವಿಕೆಟ್’ಗಳಿಂದ ಬಗ್ಗು ಬಡಿದು ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದುಕೊಂಡಿತು.
ಇದನ್ನೂ ಓದಿ : Rohit Sharma : ತನ್ನ 5 ಕೋಟಿಯನ್ನು ಸಪೋರ್ಟ್ ಸ್ಟಾಫ್’ಗೆ ನೀಡಲು ಮುಂದಾಗಿದ್ದ ರೋಹಿತ್ ಶರ್ಮಾ

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಪಾಕ್ ಪರ ಶೋಯೆಬ್ ಮಲಿಕ್ 36 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ 41 ರನ್ ಸಿಡಿಸಿದರು.
ಇದನ್ನೂ ಓದಿ : James Anderson: ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಪಂದ್ಯಕ್ಕೆ ಪದಾಪರ್ಣೆ ಮಾಡಿದಾಗ ಈಗಿನ ಇಂಗ್ಲೆಂಡ್ ಆಟಗಾರರ ವಯಸ್ಸೆಷ್ಟು ಗೊತ್ತಾ?

ನಂತರ ಗುರಿ ಬೆನ್ನಟ್ಟಿದ ಭಾರತ ಚಾಂಪಿಯನ್ಸ್ ಆರಂಭದಲ್ಲೇ ರಾಬಿನ್ ಉತ್ತಪ್ಪ (10) ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಬ್ಬ ಓಪನರ್ ಅಂಬಾಟಿ ರಾಯುಡು 30 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ಪಠಾಣ್ 16 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಭಾರತ ಹಿರಿಯ ಕ್ರಿಕೆಟ್ ತಂಡ 19.1 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇದನ್ನೂ ಓದಿ : Rahul Dravid : ರಾಹುಲ್ ದ್ರಾವಿಡ್ ಬಗ್ಗೆ ರಾಜ್ಯ ಸರ್ಕಾರ, ರಾಜ್ಯ ಕ್ರಿಕೆಟ್ ಸಂಸ್ಥೆಗೆ ಏಕಿಷ್ಟು ನಿರ್ಲಕ್ಷ್ಯ ?
World Championship of Legends India Champions Champion Defeat Pakistan to become world champion again