ಭಾನುವಾರ, ಏಪ್ರಿಲ್ 27, 2025
HomeSportsRavi Shastri: ರವಿ ಶಾಸ್ತ್ರಿಗೆ ಕೊರೋನಾ ಪಾಸಿಟಿವ್: ಸಂಪರ್ಕದಲ್ಲಿದ್ದ ಟೀಂ ಇಂಡಿಯಾ ಸಿಬ್ಬಂದಿ ಕ್ವಾರಂಟೈನ್ ಗೆ

Ravi Shastri: ರವಿ ಶಾಸ್ತ್ರಿಗೆ ಕೊರೋನಾ ಪಾಸಿಟಿವ್: ಸಂಪರ್ಕದಲ್ಲಿದ್ದ ಟೀಂ ಇಂಡಿಯಾ ಸಿಬ್ಬಂದಿ ಕ್ವಾರಂಟೈನ್ ಗೆ

- Advertisement -

ಇಂಗ್ಲೆಂಡ್ ವರ್ಸಸ್ ಇಂಡಿಯಾ ಪೋರ್ತ್ ಟೆಸ್ಟ್  ಪಂದ್ಯಾವಳಿಗೆ ಕೊರೋನಾ ಕಾರ್ಮೋಡ ಎದುರಾಗಿದ್ದು, ಕೋಚ್ ರವಿ ಶಾಸ್ತ್ರಿ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದ್ದು, ಶಾಸ್ತ್ರಿ ಹಾಗೂ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಯನ್ನು ಐಷೋಲೇಶನ್ ಗೆ ಒಳಪಡಿಸಲಾಗಿದೆ.

ಇಂಗ್ಲೆಂಡ್ ವರ್ಸಸ್ ಇಂಡಿಯಾ ಸರಣಿಯ ನಾಲ್ಕನೇ ಪಂದ್ಯಾವಳಿ ವೇಳೆ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ. ಫಿಲ್ಡಿಂಗ್ ಕೋಚ್ ಆರ್.ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ ಫಿಸಿಯೋಥೆರಪಿಸ್ಟ್ ನಿತಿನ್ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಬಿಸಿಸಿಐ ಟ್ವೀಟರ್ ಮೂಲಕ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದೆ. ಎಲ್ಲರನ್ನು ಆರ್ಟಿಪಿಸಿಆರ್ ಟೆಸ್ಟ್ ಗೆ ಒಳಪಡಿಸಲಾಗಿದೆ. ವೈದ್ಯಕೀಯ ತಂಡದಿಂದ ಹಸಿರು ನಿಶಾರೆ ಸಿಗುವವರೆಗೂ ಶಾಸ್ತ್ರಿ ಹಾಗೂ ಈ ಮೂವರು ಹೊಟೇಲ್ ರೂಂನಲ್ಲೇ ಐಷೋಲೇಶನ್ ಗೆ ಒಳಗಾಗಲಿದ್ದಾರೆ.

ಭಾನುವಾರ ತಂಡದ ಎಲ್ಲ ಆಟಗಾರರನ್ನು ಕೊರೋನಾ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಕೊರೋನಾ ಟೆಸ್ಟ್ ನೆಗೆಟಿವ್ ಬಂದವರನ್ನು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಲಾಗಿದೆ.

Ravi Shastri Tests Positive For Covid, Isolated With 3 Other Support Staff Members

RELATED ARTICLES

Most Popular