ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ: ಸಿಎಂ ತಂದೆ ವಿರುದ್ಧ ಪ್ರಕರಣ ದಾಖಲು

ರಾಯಪುರ: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕಾಗಿ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಯಪುರ ಪೊಲೀಸರು ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ವ ಬ್ರಾಹ್ಮಣ ಸಮಾಜದ ದೂರಿನ ಹಿನ್ನೆಲೆಯಲ್ಲಿ ಶನಿವಾರ 75 ವರ್ಷದ ನಂದಕುಮಾರ್ ವಿರುದ್ಧ ದೂರು ದಾಖಲಾಗಿದೆ.

ಬ್ರಾಹ್ಮಣರು ವಿದೇಶಿಯರು. ಹೀಗಾಗಿ ಬ್ರಾಹ್ಮಣರನ್ನು ಹಳ್ಳಿಗಳಲ್ಲಿ ಬಹಿಷ್ಕರಿಸಬೇಕು. ಅವರಿಗೆ ಹಳ್ಳಿಗಳಲ್ಲೂ ಪ್ರವೇಶ ನೀಡಬಾರದು ಎಂದು ನಂದಕುಮಾರ್ ಹೇಳಿದ್ದಾರೆ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿನಲ್ಲಿ ಹೇಳಿದೆ.

ಇದಲ್ಲದೇ ಭಗವಾನ್ ರಾಮನ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ನಂದಕುಮಾರ್ ವಿರುದ್ಧ ಕೇಳಿಬಂದಿದೆ. ಹೀಗಾಗಿ ಸಿಎಂ ತಂದೆ ವಿರುದ್ಧ ಭಾರತೀಯ ದಂಡ ಸಂಹಿತೆ 153ಎ, 505(1)ಬಿ ಸಾರ್ವಜನಿಕರಲ್ಲಿ ಭಯ ಮೂಡಿಸುವ ಉದ್ದೇಶದಡಿಯಲ್ಲಿ ಪ್ರಕರಣದಾಖಲಿಸಿಕೊಳ್ಳಲಾಗಿದೆ.

ಸಿಎಂ ಭೂಪೇಶ್ ಬಘೇಲ್ ತಮ್ಮ ತಂದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದನ್ನು ಸ್ವೀಕರಿಸಿದ್ದು, ಪೊಲೀಸರ ಕ್ರಮಸರಿಯಾಗಿದೆ ಎಂದಿದ್ದಾರೆ.

Chhattisgarh CM Bhupesh Baghel’s father booked for derogatory remarks against a community

Comments are closed.