Vijayapur earthquake : ವಿಜಯಪುರದಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಜನರು

ವಿಜಯಪುರ : ಗೊಮ್ಮಟನಗರಿ ವಿಜಯಪುರದಲ್ಲಿ ಭೂಮಿ (Vijayapur earthquake) ಕಂಪಿಸಿದೆ. ನಿನ್ನೆ ತಡರಾತ್ರಿ 1.38 ಸುಮಾರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮನಗೂಳಿ, ಐನಾಪುರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಕುರಿತು ಜಿಲ್ಲಾಡಳಿತ ಖಚಿತಪಡಿಸಿದ್ದು, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದೆ.

ರಿಕ್ಟರ್‌ ಮಾಪನದಲ್ಲಿ 3.4 ಕಂಪನದ ತೀವ್ರತೆ ದಾಖಲಾಗಿದೆ. ಅಲಮಟ್ಟಿ ಶಲಾಶಯ ಇರುವ ಹಿನ್ನೆಲೆಯಲ್ಲಿ ಭೂಕಂಪನ ಸಹಜ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆಯೂ ಕೂಡ ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿತ್ತು.

ಇದನ್ನೂ ಓದಿ : Tirupati Tirumala Temple : ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅನಾಹುತ : ಮಹಾದ್ವಾರದಲ್ಲೇ ಉರುಳಿಬಿತ್ತು ತಿಮ್ಮಪ್ಪನ ಕಾಣಿಕೆ ಹುಂಡಿ

ಇದನ್ನೂ ಓದಿ : Murder case‌ : 2 ತಿಂಗಳ ಹಿಂದೆಯಷ್ಟೇ ಮದುವೆ, ಆದರೆ ಪತ್ನಿ 4 ತಿಂಗಳ ಗರ್ಭಿಣಿ : ಅಮಾಯಕ ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

ಈ ಹಿಂದೆ 2022 ರ ಎಪ್ರಿಲ್‌ 21 ರಂದು ರಾತ್ರಿಯ ವೇಳೆಯಲ್ಲಿ ಭೂಕಂಪನ ಉಂಟಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಕಳೆದ ಎರಡು ವರ್ಷಗಳಿಂದಲೂ ವಿಜಯಪುರ ಜಿಲ್ಲೆಗಳಲ್ಲಿ ನಿರಂತರವಾಗಿ ಭೂಪಂಕನದ ಅನುಭವವಾಗುತ್ತಿದೆ. ಇದೀಗ ಎರಡು ತಿಂಗಳ ಬಳಿಕ ಮತ್ತೆ ಭೂಕಂಪನ ಸಂಭವಿಸಿದೆ.

Vijayapur earthquake : Earth shook in Vijayapur, people are worried

Comments are closed.