Yashaswi Jaiswal : ಆಡಿದ ಎಲ್ಲಾ ಟೂರ್ನಿಗಳಲ್ಲೂ ಶತಕ, ಯಾರೂ ಮಾಡಲಾಗದ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಡೊಮಿನಿಕಾ: Yashaswi Jaiswal : ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಆರಂಭಗೊಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ (India Vs West Indies 1st test) ಟೀಮ್ ಇಂಡಿಯಾದ ಯುವ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಬಾರಿಸಿದ್ದಾರೆ. ಈ ಮೂಲಕ ಪದಾರ್ಪಣೆಯ ಟೆಸ್ಟ್’ನಲ್ಲೇ ಅಮೋಘ ಶತಕ ಬಾರಿಸಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಆಡಿದ ಮೊದಲ ಟೆಸ್ಟ್’ನಲ್ಲೇ ಶತಕ ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್, ಭಾರತೀಯ ಕ್ರಿಕೆಟ್’ನಲ್ಲಿ ಯಾರೂ ಮಾಡಲಾಗದ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್’ನಲ್ಲಿ ಇದುವರೆಗೆ ಆಡಿರುವ ಎಲ್ಲಾ ಟೂರ್ನಿಗಳಲ್ಲೂ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 21 ವರ್ಷದ ಯಶಸ್ವಿ ಜೈಸ್ವಾಲ್ ಇದುವರೆಗೆ ಅಂಡರ್-19 ವಿಶ್ವಕಪ್, ರಣಜಿ ಟ್ರೋಫಿ, ಇರಾನಿ ಕಪ್, ದುಲೀಪ್ ಟ್ರೋಫಿ, ವಿಜಯ್ ಹಜಾರೆ, ಭಾರತ ಎ, ಐಪಿಎಲ್ ಹಾಗೂ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ಆಡಿರುವ ಎಲ್ಲಾ ಟೂರ್ನಿಗಳಲ್ಲೂ ಜೈಸ್ವಾಲ್ ಶತಕ ಬಾರಿಸಿದ್ದಾರೆ.

  • ಶತಕವೀರ ಯಶಸ್ವಿ ಜೈಸ್ವಾಲ್
  • ಪ್ರಥಮದರ್ಜೆ ಕ್ರಿಕೆಟ್: ದ್ವಿಶತಕ
  • ಲಿಸ್ಟ್ ಎ ಕ್ರಿಕೆಟ್: ದ್ವಿಶತಕ
  • ಅಂಡರ್-19 ವಿಶ್ವಕಪ್: ಶತಕ
  • ರಣಜಿ ಟ್ರೋಫಿ: ಶತಕ
  • ಇರಾನಿ ಕಪ್: ಶತಕ
  • ದುಲೀಪ್ ಟ್ರೋಫಿ: ಶತಕ
  • ವಿಜಯ್ ಹಜಾರೆ ಟ್ರೋಫಿ: ಶತಕ
  • ಸೈಯದ್ ಮುಷ್ತಾಕ್ ಅಲಿ ಟಿ20: ಶತಕ
  • ಭಾರತ ಎ: ಶತಕ
  • ಐಪಿಎಲ್: ಶತಕ
  • ಟೆಸ್ಟ್ ಕ್ರಿಕೆಟ್: ಶತಕ

ವಿಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ 2ನೇ ದಿನ ತಾಳ್ಮೆಯ ಆಟವಾಡಿದ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದಷ್ಟೇ ಅಲ್ಲ, 2ನೇ ದಿನದಂತ್ಯಕ್ಕೆ 143 ರನ್’ಗಳೊಂದಿಗೆ ಅಜೇಯರಾಗುಳಿದಿದ್ದಾರೆ. ದೇಶೀಯ ಕ್ರಿಕೆಟ್’ನಲ್ಲಿ ಅಮೋಘ ಪ್ರದರ್ಶನ ತೋರಿರುವ ಯಶಸ್ವಿ ಜೈಸ್ವಾಲ್ ಇದೇ ಮೊದಲ ಬಾರಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅಬ್ಬರಿಸಿರುವ ಯಶಸ್ವಿ ಜೈಸ್ವಾಲ್ 2022ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ದ್ವಿಶತಕ (265 ರನ್) ಬಾರಿಸಿ ಪಶ್ಚಿಮ ವಲಯ ತಂಡಕ್ಕೆ ಚಾಂಪಿಯನ್’ಷಿಪ್ ಗೆಲ್ಲಿಸಿಕೊಟ್ಟಿದ್ದರು.

ಇದನ್ನೂ ಓದಿ : Ashwin breaks Kumble record : ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ ತಮಿಳುನಾಡಿನ ಸ್ಪಿನ್ ಮಾಂತ್ರಿಕ ಅಶ್ವಿನ್

ಇದನ್ನೂ ಓದಿ : Ashwin 700 wickets : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700 ವಿಕೆಟ್, ಸ್ಪಿನ್ ಮಾಂತ್ರಿಕ ಅಶ್ವಿನ್ ಮಹೋನ್ನತ ಸಾಧನೆ

ಈ ವರ್ಷದ ಮಾರ್ಚ್’ನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲೂ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಪ್ರಥಮ ಇನ್ನಿಂಗ್ಸ್’ನಲ್ಲಿ 213 ರನ್ ಬಾರಿಸಿದ್ರೆ, 2ನೇ ಇನ್ನಿಂಗ್ಸ್’ನಲ್ಲಿ ಸ್ಫೋಟಕ 144 ರನ್ ಸಿಡಿಸಿದ್ದರು. ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಇದುವರೆಗೆ 15 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್ 80.21ರ ಅಮೋಘ ಸರಾಸರಿಯಲ್ಲಿ 9 ಶತಕ ಹಾಗೂ 2 ಅರ್ಧಶತಕಗಳ ಸಹಿತ 1845 ರನ್ ಗಳಿಸಿದ್ದಾರೆ. ಐಪಿಎಲ್-2023 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಅಮೋಘ ಪ್ರದರ್ಶನ ತೋರಿದ್ದ 21 ವರ್ಷದ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಿಂದ ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 163.61ರ ಸ್ಟ್ರೈಕ್’ರೇಟ್’ನಲ್ಲಿ 625 ರನ್ ಕಲೆ ಹಾಕಿದ್ದರು.

Yashaswi Jaiswal : Yasshaswi Jaiswal who has scored a century in all the tournaments played, a rare record that no one else can do.

Comments are closed.