ಸೋಮವಾರ, ಏಪ್ರಿಲ್ 28, 2025
HomeSportsCricketನಿನ್ನೆ ದೋಸ್ತಿ.. ಇವತ್ತು ದುಷ್ಮನ್.. ಇಂಗ್ಲೆಂಡ್ ಆಟಗಾರನಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ!

ನಿನ್ನೆ ದೋಸ್ತಿ.. ಇವತ್ತು ದುಷ್ಮನ್.. ಇಂಗ್ಲೆಂಡ್ ಆಟಗಾರನಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ!

- Advertisement -

ಎಡ್ಜ್’ಬಾಸ್ಟನ್: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (King Virat Kohli) ತಮ್ಮ ಆಕ್ರಮಣಶೀಲ ಮನೋಭಾವಕ್ಕೆ ಹೆಸರುವಾಸಿ. ಅಗ್ರೆಸ್ಸಿವ್’ನೆಸ್ ಅನ್ನೋದು ವಿರಾಟ್ ಕೊಹ್ಲಿಯ ಟ್ರೇಡ್ ಮಾರ್ಕ್. ಕ್ರಿಕೆಟ್ ಮೈದಾನದಲ್ಲಿ ಸದಾ ಅಗ್ರೆಸ್ಸಿವ್ ಆಗಿರುವ ವಿರಾಟ್ ಕೊಹ್ಲಿ, ಸಾಕಷ್ಟು ಬಾರಿ ಎದುರಾಳಿ ಆಟಗಾರರ ಚಳಿ ಬಿಡಿಸಿದ್ದಿದೆ. ಈಗ ಕೊಹ್ಲಿ ಕೆಂಗಣ್ಣಿಗೆ ಗುರಿಯಾಗುವ ಸರದಿ ಇಂಗ್ಲೀಷ್ ಆಟಗಾರ ಜಾನಿ ಬೇರ್’ಸ್ಟೋ ಅವರದ್ದು.

ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಆಟಗಾರ ಬೈರ್’ಸ್ಟೊ ಚಳಿ ಬಿಡಿಸಿದ್ದಾರೆ. ಜಾನಿ ಬೇರ್’ಸ್ಟೊ ಭಾರತೀಯ ಆಟಗಾರರನ್ನು ಕೆಣಕಿದಾಗ ಸ್ಲಿಪ್’ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ, ಬೇರ್’ಸ್ಟೋ ಬಳಿ ಬಂದು ತಮ್ಮದೇ ಸ್ಟೈಲ್’ನಲ್ಲಿ ವಾರ್ನಿಂಗ್ ನೀಡಿದ್ರು. ಈ ವೇಳೆ ಕೊಹ್ಲಿ ಮತ್ತು ಬೇರ್’ಸ್ಟೋಮಧ್ಯೆ ಮಾತಿನ ಚಕಮಕಿ ನಡೆಯಿತು.

2ನೇ ದಿನದಾಟದ ವೇಳೆ ಮಳೆಯಿಂದ ಆಟ ನಿಂತಾಗ ಬೇರ್’ಸ್ಟೋ ಹೆಗಲ ಮೇಲೆ ವಿರಾಟ್ ಕೊಹ್ಲಿ ಕೈಹಾಕಿ ಮಾತನಾಡುತ್ತಾ ಪೆವಿಲಿಯನ್ ಕಡೆ ನಡೆದುಕೊಂಡು ಹೋಗುತ್ತಿದ್ದ ಫೋಟೋ-ದೃಶ್ಯ ವೈರಲ್ ಆಗಿತ್ತು.


ರಿಷಭ್ ಪಂತ್ ಬ್ಯಾಟಿಂಗ್ ಸರಿ ಇಲ್ಲ ಎಂದ ಪಾಕ್ ಮಾಜಿ ವೇಗಿ

ಲಂಡನ್: ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Ind vs Eng Rishabh Pant) ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್. ಇಂಗ್ಲೆಂಡ್ ವಿರುದ್ಧ ಎಡ್ಜ್’ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ರಿಷಭ್ ಪಂತ್.

ಭಾರತ 98 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ರವೀಂದ್ರ ಜಡೇಜ ಜೊತೆಗೂಡಿ ದ್ವಿಶತಕದ ಜೊತೆಯಾಟವಾಡಿದ ರಿಷಭ್ ಪಂತ್ ತಂಡಕ್ಕೆ ಆಸರೆಯಾಗಿದ್ದರು. 111 ಎಸೆತಗಳನ್ನು ಎದುರಿಸಿದ್ದ ಪಂತ್, 20 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ 146 ರನ್ ಸಿಡಿಸಿ ಔಟಾಗಿದ್ದರು. ಇದು ಇಂಗ್ಲೆಂಡ್ ನೆಲದಲ್ಲಿ ಪಂತ್ ಬಾರಿಸಿದ 2ನೇ ಟೆಸ್ಟ್ ಶತಕ.ಆಂಗ್ಲರ ದಾಳಿಯನ್ನು ಚೆಂಡಾಡಿ ಸ್ಫೋಟಕ ಶತಕ ಬಾರಿಸಿದ ರಿಷಭ್ ಪಂತ್ ಸಾಹಸವನ್ನು ಇಡೀ ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿದೆ. ಆದರೆ ಪಾಕಿಸ್ತಾನ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಮಾತ್ರ ಪಂತ್ ಬ್ಯಾಟಿಂಗ್ ಬಗ್ಗೆ ಕೊಂಕು ಮಾತುಗಳನ್ನಾಡಿದ್ದಾರೆ. ‘’ರಿಷಭ್ ಪಂತ್ ಶತಕದಲ್ಲು ಧಮ್ ಇರಲಿಲ್ಲ. ಆತನ ಬ್ಯಾಟಿಂಗ್’ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಗುರುತಿಸುವಲ್ಲಿ ಇಂಗ್ಲೆಂಡ್ ಬೌಲರ್’ಗಳು ವಿಫಲರಾಗಿದ್ದಾರೆ’’.

-ಮೊಹಮ್ಮದ್ ಆಸಿಫ್, ಪಾಕಿಸ್ತಾನದ ಮಾಜಿ ವೇಗದ ಬೌಲರ್.

ಬಲಗೈ ವೇಗಿ ಮೊಹಮ್ಮದ್ ಆಸಿಫ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್’ನಿಂದ ಬ್ಯಾನ್ ಆಗಿದ್ದರು.

ಇದನ್ನೂ ಓದಿ : India Vs England test‌ : ಟೀಮ್ ಇಂಡಿಯಾಗೆ ದಿನೇಶ್‌ ಕಾರ್ತಿಕ್ ನಾಯಕ !

ಇದನ್ನೂ ಓದಿ : Ind vs Eng Rishabh Pant : ರಿಷಭ್ ಪಂತ್ ಬ್ಯಾಟಿಂಗ್ ಸರಿ ಇಲ್ಲ ಎಂದ ಪಾಕ್ ಮಾಜಿ ವೇಗಿ !

Yesterday’s friend today’s enemy King Virat Kohli gave the England player a chill.!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular