ಗುಡ್ ನ್ಯೂಸ್ : ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್ !

ಲಂಡನ್: ಟೀಮ್ ಇಂಡಿಯಾಗೆ ಇದು ಗುಡ್ ನ್ಯೂಸ್. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಭಿಮಾನಿಗಳಿಗಂತೂ ಸಂತಸದ ಸುದ್ದಿ. ಕೋವಿಡ್ ನಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಚೇತರಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಭಾನುವಾರ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಫಲಿತಾಂಶ ‘ನೆಗೆಟಿವ್’ (Rohit Sharma Covid negative) ಬಂದಿದೆ. ಹೀಗಾಗಿ ಐಸೋಲೇಷನ್’ನಿಂದ ಹೊರ ಬಂದಿರುವ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಲಭ್ಯರಾಗಲಿದ್ದಾರೆ.

ಲೀಸೆಸ್ಟರ್’ಶೈರ್ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಅಭ್ಯಾಸ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದ್ದ ರೋಹಿತ್ ತಂಡ ವಾಸ್ತವ್ಯ ಹೂಡಿದ್ದ ಹೋಟೆಲ್’ನಲ್ಲಿ ಐಸೋಲೇಷನ್’ಗೆ ಒಳಗಾಗಿದ್ದರು. ಕೋವಿಡ್ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಿದ್ದ ಕಾರಣ, ವೇಗಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್ ಶರ್ಮಾ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಮೊದಲು ಟಿ20 ಸರಣಿ ನಡೆಯಲಿದ್ದು, ಮೊದಲ ಪಂದ್ಯ ಜುಲೈ 7ರಂದು ನಡೆಯಲಿದೆ.

ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು

ಲೀಸೆಸ್ಟರ್ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕೋವಿಡ್ ಪಾಸಿಟಿವ್ ಕಾರಣ ಇಂಗ್ಲೆಂಡ್’ನಲ್ಲಿ ಐಸೋಲೇಷನ್ ನಲ್ಲಿದ್ದಾರೆ. ಲೀಸೆಸ್ಟರ್”ನಲ್ಲಿ ನಡೆದ ಲೀಸೆಸ್ಟರ್’ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮಾ ಕೋವಿಡ್”ಗೆ ಗುರಿಯಾಗಿದ್ದರು. ಹೀಗಾಗಿ ಅಭ್ಯಾಸ ಪಂದ್ಯದ 2ನೇ ಇನ್ನಿಂಗ್ಸ್”ನಲ್ಲಿ ರೋಹಿತ್ ಬ್ಯಾಟಿಂಗ್”ಗೆ ಇಳಿದಿರಲಿಲ್ಲ. ಸದ್ಯ ಟೀಮ್ ಇಂಡಿಯಾ ಕ್ಯಾಪ್ಟನ್, ಲೀಸೆಸ್ಟರ್”ನಲ್ಲಿ ತಂಡ ತಂಗಿದ್ದ ಹೋಟೆಲ್”ನಲ್ಲಿ ಐಸೋಲೇಷನ್”ನಲ್ಲಿದ್ದಾರೆ.

ಹಾಗಾದರೆ ರೋಹಿತ್ ಶರ್ಮಾ ಈಗ ಹೇಗಿದ್ದಾರೆ ? ರೋಹಿತ್ ಹೆಲ್ತ್ ರಿಪೋರ್ಟ್ ಏನ್ ಹೇಳ್ತಿದೆ ? ಇದು ಪ್ರತಿಯೊಬ್ಬ ರೋಹಿತ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಸ್ವತಃ ರೋಹಿತ್ ಶರ್ಮಾ ಅವರ 3 ವರ್ಷದ ಮಗಳು ಸಮೈರಾ ಉತ್ತರ ಕೊಟ್ಟಿದ್ದಾಳೆ. ಲೀಸೆಸ್ಟರ್ ಹೋಟೆಲ್ ರೂಂನಿಂದ ರೋಹಿತ್ ಶರ್ಮಾ ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಹೊರ ಬರುತ್ತಿದ್ದಾಗ ಹೋಟೆಲ್ ಲಾಂಜ್’ನಲ್ಲಿದ್ದವರು ರೋಹಿತ್ ಬಗ್ಗೆ ಮಗಳನ್ನು ಪ್ರಶ್ನಿಸಿದ್ದಾರೆ. ಹಾಗಾದರೆ ರೋಹಿತ್ ಶರ್ಮಾ ಈಗ ಹೇಗಿದ್ದಾರೆ ? ರೋಹಿತ್ ಹೆಲ್ತ್ ರಿಪೋರ್ಟ್ ಏನ್ ಹೇಳ್ತಿದೆ? ಇದು ಪ್ರತಿಯೊಬ್ಬ ರೋಹಿತ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಸ್ವತಃ ರೋಹಿತ್ ಶರ್ಮಾ ಅವರ ಪುತ್ರಿ ಸಮೈರಾ ಉತ್ತರ ಕೊಟ್ಟಿದ್ದಾಳೆ.

ಪ್ರಶ್ನೆ: ನಿನ್ನ ತಂದೆ ಹೇಗಿದ್ದಾರೆ?
ಸಮೈರಾ ಉತ್ತರ: ತಂದೆ ರೂಮ್’ನಲ್ಲಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ರೋಹಿತ್ ಶರ್ಮಾ ಮಗಳು ಸಮೈರಾ ಈ ರೀತಿ ತಂದೆಯ ಹೆಲ್ತ್ ರಿಪೋರ್ಟ್ ರಿಪೋರ್ಟ್ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : India Vs England test‌ : ಟೀಮ್ ಇಂಡಿಯಾಗೆ ದಿನೇಶ್‌ ಕಾರ್ತಿಕ್ ನಾಯಕ !

ಇದನ್ನೂ ಓದಿ : ನಿನ್ನೆ ದೋಸ್ತಿ.. ಇವತ್ತು ದುಷ್ಮನ್.. ಇಂಗ್ಲೆಂಡ್ ಆಟಗಾರನಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ!

Rohit Sharma Covid negative Good News for Indian cricket team

Comments are closed.