ಮಂಗಳವಾರ, ಏಪ್ರಿಲ್ 29, 2025
HomeSportsCricketYuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ...

Yuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ ಫೈಟರ್” ಯುವರಾಜ್ ಸಿಂಗ್

- Advertisement -

ಮುಂಬೈ: ವಿಶ್ವಕಪ್ ಹೀರೋ, ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್, ಏಕದಿನ ಕ್ರಿಕೆಟ್’ನಲ್ಲಿ ಭಾರತ ಕಂಡ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿಒಬ್ಬರಾಗಿರುವ ಸಿಕ್ಸರ್ ಸರ್ದಾರ ಯುವರಾಜ್ ಸಿಂಗ್ (Yuvraj Singh), ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು (Yuvraj meets Rishabh Pant ) ಭೇಟಿ ಮಾಡಿದ್ದಾರೆ.

ಕಳೆದ ಡಿಸೆಂಬರ್ ಅಂತ್ಯದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್, ಶಸ್ತ್ರಚಿಕಿತ್ಸೆಯ ನಂತರ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ವಿಶ್ರಾಂತಿಯಲ್ಲಿರುವ ರಿಷಭ್ ಪಂತ್ ಅವರನ್ನು ಯುವರಾಜ್ ಸಿಂಗ್ ಭೇಟಿ ಮಾಡಿದ್ದಾರೆ. ಪಂತ್ ಜೊತೆಗಿನ ಭೇಟಿಯ ಚಿತ್ರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಯುವಿ, ಒಂದೆರಡು ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ.

“ರಿಷಭ್ ಪಂತ್ ಅಂಬೆಗಾಲಿಡುತ್ತಿದ್ದಾರೆ. ಈ ಚಾಂಪಿಯನ್ ಮತ್ತೆ ಮೇಲೆದ್ದು ನಿಲ್ಲಲಿದ್ದಾನೆ. ರಿಷಭ್ ಪಂತ್’ನನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಅದ್ಭುತ ಹುಡುಗ, ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ. ದೇವರು ನಿನಗೆ ಹೆಚ್ಚಿನ ಶಕ್ತಿ ನೀಡಲಿ” ಎಂದು ಯುವರಾಜ್ ಸಿಂಗ್ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.

ಯುವರಾಜ್ ಸಿಂಗ್ ಭಾರತಕ್ಕೆ 3 ವಿಶ್ವಕಪ್’ಗಳನ್ನು ಗೆಲ್ಲಿಸಿಕೊಟ್ಟ ಅದ್ಭುತ ಮ್ಯಾಚ್ ವಿನ್ನರ್. 2000ನೇ ಇಸವಿಯಲ್ಲಿ ಐಸಿಸಿ ಅಂಡರ್-19 ವಿಶ್ವಕಪ್, 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಭಾರತ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪಾತ್ರ ಮಹತ್ವದ್ದಾಗಿತ್ತು. 2011ರಲ್ಲಿ ವಿಶ್ವಕಪ್ ಆಡುವ ವೇಳೆ ಯುವಿ ಕ್ಯಾನ್ಸರ್’ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ಮಧ್ಯೆಯೇ ಆಡಿದ್ದ ಯುವಿ ಟೂರ್ನಿಯಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ 28 ವರ್ಷಗಳ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು.

ವಿಶ್ವಕಪ್ ಟೂರ್ನಿಯ ನಂತರ ಕ್ಯಾನ್ಸರ್’ಗೆ ಚಿಕಿತ್ಸೆ ಪಡೆದು ಬಂದಿದ್ದ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಕ್ರಿಕೆಟ್ ಜಗತ್ತಿನ ಶ್ರೇಷ್ಠ ಫೈಟರ್ ಎಂದೇ ಕರೆಯಲ್ಪಡುವ ಯುವಿ, ಬದುಕಲ್ಲಿ ಎದುರಾಗುವ ಕಠಿಣ ಸಮಯಗಳನ್ನು ಮೆಟ್ಟಿ ನಿಂತು ಸೈ ಎನಿಸಿಕೊಂಡವರು. ಆ ಅನುಭವನ್ನು ರಿಷಭ್ ಪಂತ್ ಜೊತೆ ಹಂಚಿಕೊಂಡಿರುವ ಯುವಿ, ಯುವ ಆಟಗಾರನಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ : 100 ಮೀಟರ್‌ ಓಟದಲ್ಲಿ 2 ಚಿನ್ನ ಗೆದ್ದ 92 ವರ್ಷದ ಮಡಿಕೇರಿಯ ಪಾಲೆಕಂಡ ಬೋಪಯ್ಯ

ಇದನ್ನೂ ಓದಿ : Will Jacks out : ಐಪಿಎಲ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್‌ಗೆ ಶಾಕ್, ಸ್ಟಾರ್ ಆಟಗಾರ ಟೂರ್ನಿಯಿಂದಲೇ ಔಟ್

25 ವರ್ಷದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ 2022ರ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿರುವ ರಿಷಭ್ ಪಂತ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಇನ್ನೂ ಕನಿಷ್ಠ 9ರಿಂದ 10 ತಿಂಗಳು ಹಿಡಿಯಲಿದೆ.

Yuvraj meets Rishabh Pant: “The Fighter” Yuvraj Singh was encouraged by meeting Rishabh Pant.

RELATED ARTICLES

Most Popular