ಸೋಮವಾರ, ಏಪ್ರಿಲ್ 28, 2025
Homekarnataka3rd CM proposal : ಮತ್ತೆ ಮೂರನೇ ಸಿಎಂ ಪ್ರಸ್ತಾಪ : ಬೆಚ್ಚಿ ಬಿದ್ದ ಬಿಜೆಪಿ...

3rd CM proposal : ಮತ್ತೆ ಮೂರನೇ ಸಿಎಂ ಪ್ರಸ್ತಾಪ : ಬೆಚ್ಚಿ ಬಿದ್ದ ಬಿಜೆಪಿ ಶಾಸಕರು

- Advertisement -

ಬೆಂಗಳೂರು : ( 3rd CM proposal ) ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮೂರನೇ ಸಿಎಂ ಬಗ್ಗೆ ಚರ್ಚೆ ಜೋರಾಗಿದೆ. ಮೂರನೇ ಸಿಎಂ ಸಧ್ಯದಲ್ಲೇ ಅಧಿಕಾರಕ್ಕೆ ಏರುತ್ತಾರೆ ಎಂದು ಕಾಂಗ್ರೆಸ್ ಟ್ವೀಟ್ ವಾರ್ ಮೂಲಕ ಬಿಜೆಪಿ ಕಾಲೆಳೆಯುತ್ತಿದೆ. ಸದ್ಯದಲ್ಲೇ ಸಿಎಂ ಬದಲಾವಣೆ ಖಚಿತ ಎಂಬುದು ಗೊತ್ತಿದ್ದರೂ ಬಿಜೆಪಿ ನಾಯಕರು ಸಿಎಂ ಬದಲಾವಣೆಯಿಲ್ಲ, ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್ ಎಂದು ಕನವರಿಸುತ್ತಿದ್ದಾರೆ. ಆದರೆ ಇದೆಲ್ಲದರ ಪರಿಣಾಮ ಶಾಸಕರ ಮೇಲಾಗಿದ್ದು, ಈ ಹಿಂದೆ ಮೂರು ಮೂರು ಸಿಎಂ ಬಳಸಿ ಬಿಜೆಪಿ ಅಧಿಕಾರ ನಡೆಸಿದಾಗ ಉಂಟಾದ ರಾಜಕೀಯ ಪಲ್ಲಟ ನೆನೆದು ಶಾಸಕರು ಆತಂಕಿತರಾಗುತ್ತಿದ್ದಾರೆ.

ಹೌದು ಬಿಜೆಪಿ ನೇತೃತ್ವದ ಸರ್ಕಾರ ಬಂದಾಗಲೆಲ್ಲ ರಾಜಕೀಯ ಪ್ರಹಸನಗಳು ಕಾಮನ್. 2013 ರಲ್ಲಿ ಅಧಿಕಾರಕ್ಕೆ ಬಂದಾಗಲೂ ಬಿಜೆಪಿ ಸಿಎಂ ಬದಲಾವಣೆಯ ಹೈಡ್ರಾಮಾಗಳಿಂದಲೇ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಈಗ ಮತ್ತೊಮ್ಮೆ ಅಧಿಕಾರಕ್ಕೆ ಏರಿದಾಗಲೂ ಅದೇ ಹಳೆ ಚಾಳಿ ಮುಂದುವರೆಸಿದೆ. ಬಿಜೆಪಿ ಹೈಕಮಾಂಡ್ ನ ನಿರ್ಧಾರ ಹಾಗೂ ಹೀಗೆ ಆರು ತಿಂಗಳು ವರ್ಷಕ್ಕೆ ಸಿಎಂ ಬದಲಾಯಿಸುವ ಅವಾಂತರಗಳಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಈಗ ಮತ್ತೊಮ್ಮೆ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಪ್ರಹಸನ ಮುನ್ನಲೆಗೆ ಬರ್ತಿರೋದರಿಂದ ಬಿಜೆಪಿ ಶಾಸಕರು ಆತಂಕಕ್ಕಿಡಾಗಿದ್ದಾರಂತೆ.

2013 ರಲ್ಲೂ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮೂವರು ನಾಯಕರನ್ನು ಇನ್ ಸ್ಟಾಲ್ ಮೆಂಟ್ ರೀತಿಯಲ್ಲಿ ಸಿಎಂ ಮಾಡಿತ್ತು. ಈ ರಾಜಕೀಯ ಗೊಂದಲ, ರೆಸಾರ್ಟ್ ರಾಜಕೀಯದಿಂದ ಬೇಸತ್ತ ಜನ 2013 ರ ಬಳಿಕ ಬಿಜೆಪಿಯನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ ಮಣೆ ಹಾಕಿದ್ದರು. ಈಗಲೂ 2023 ರ ಚುನಾವಣೆ ಹೊತ್ತಿನಲ್ಲಿ ಮತ್ತೆ ಮೂರನೇ ಸಿಎಂ ಆಯ್ಕೆಗೆ ತೆರೆಮರೆಯ ಕಸರತ್ತು ನಡೆಸಿದೆ. ಹೀಗಾಗಿ ಶಾಸಕರು ಪಕ್ಷದ ವರಿಷ್ಠರ ಬಳಿಯೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದೆ. ಬೆಲೆ ಏರಿಕೆಯಿಂದ ಜನರು ಕಷ್ಟದಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ರಾಜಕೀಗ ಮೇಲಾಟಗಳು ಜನರ ಮೇಲೆ ನಕಾರಾತ್ಮಕ ಭಾವನೆ ಉಂಟು ಮಾಡುತ್ತದೆ. ನಾವು ಶಾಸಕರು ಸಚಿವರಾಗೋದು ದೂರದ ಮಾತು ಈ ಬೆಳವಣಿಗೆಯಿಂದ ಕ್ಷೇತ್ರದ ಜನರಿಗೆ ಮುಖ ತೋರಿಸೋದು ಕಷ್ಟವಾಗಲಿದೆ. ಹೀಗಾಗಿ ಈ ರೀತಿಯ ರಾಜಕೀಯ ಸ್ಥಿತ್ಯಂತರಗಳನ್ನು ಬಿಟ್ಟು ಗೊಂದಲ ಸರಿಪಡಿಸಿಕೊಂಡು ಮುನ್ನಡೆಯಬೇಕು.

ಅಲ್ಲದೇ ಪಕ್ಷದಲ್ಲೇ ಇರುವ ನಮ್ಮದೇ ಅತೃಪ್ತ ಬಣದ ವಿರುದ್ದವೂ ತಕ್ಕ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಸಿಎಂ ಹಾಗೂ ವರಿಷ್ಠರ ಗಮನಕ್ಕೆ ತರಬೇಕು. ಚುನಾವಣೆ ಹೊತ್ತಿನಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವಾಗಬೇಕೇ ವಿನಃ ಈ ರೀತಿಯ ಬೆಳವಣಿಗೆ ಬೇಡ ಎಂದು ಹಲವು ಹಿರಿ ಕಿರಿಯ ಶಾಸಕರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರಂತೆ.

ಇದನ್ನೂ ಓದಿ : Karnataka New CM : ಚುನಾವಣೆಯ ನೆಪ : ವೈಫಲ್ಯಕ್ಕೆ ಬೊಮ್ಮಾಯಿ ತಲೆದಂಡ : ರಾಜ್ಯಕ್ಕೆ ಮತ್ತೆ ಹೊಸ ಸಿಎಂ

ಇದನ್ನೂ ಓದಿ : JDS master plan : ರಾಜ್ಯದಲ್ಲಿ ಅಧಿಕಾರಕ್ಕೇರಲು ಜೆಡಿಎಸ್‌ ಮಾಸ್ಟರ್‌ ಪ್ಲ್ಯಾನ್ : ಮುನಿಸಿಕೊಂಡವರ ಮನವೊಲಿಕೆ ಮುಂದಾದ ಕುಮಾರಸ್ವಾಮಿ

3rd CM proposal again BJP MLAs Outrage

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular