ರಾಜ್ಯದಲ್ಲಿಂದು‌ 50 ಕೋಟಿ ಮೌಲ್ಯದ‌ ಮಾದಕವಸ್ತು ನಾಶ : ಸಚಿವ ಬೊಮ್ಮಾಯಿ

ಬೆಂಗಳೂರು : ಅಂತಾರಾಷ್ಟ್ರೀಯ ‌ಮಾದಕವಸ್ತು ವಿರೋಧಿ ದಿನಾಚರಣೆಯ‌ ಹಿನ್ನೆಲೆಯಲ್ಲಿ ವಶಪಡಿಸಿ ಕೊಂಡಿರುವ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ  ಮಾದಕ ವಸ್ತುಗಳನ್ನು ನಾಶ ಪಡಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಳೆದ ಒಂದು ವರ್ಷದ‌ ಅವಧಿಯಲ್ಲಿ ಬರೋಬ್ಬರಿ 7 ಟನ್ ಗಾಂಜಾ ಹಾಗೂ ಬ್ರೌನ್ ಶುಗರ್,‌‌ ಕೊಕೆನ್,  ಹೆರಾಯಿನ್, ಚರಸ್ ಸೇರಿದಂತೆ ಬರೋಬ್ಬರಿ 50.23 ಕೋಟಿ ಮೌಲ್ಯದ ಮಾದಕ‌ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇದೀಗ ದಾಬಸ್ ಪೇಟೆಯ ಕರ್ನಾಟಕ‌ ವೇಸ್ಟ್  ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ನಲ್ಲಿ ನಾಶಪಡಿಸಲಾಗುವುದು ಎಂದಿದ್ದಾರೆ‌.

ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಮಾಧಕ ವಸ್ತುಗಳನ್ನು ವಶಕ್ಕೆ ಪಡೆದಿದೆ. ಅಲ್ಲದೇ ಮಾದಕ ವಸ್ತುಗಳ ವಿರುದ್ಧದ ಹೋರಾಟ ಇನ್ನಷ್ಟು ತೀವ್ರ ಸ್ವರೂಪದಲ್ಲಿ ನಡೆಯಲಿದೆ‌.  2020 -21ನೇ ಸಾಲಿನಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4,066 ಪ್ರಕರಣ ದಾಖಲಿಸಿ 5,291 ಜನರನ್ನು ಬಂಧಿಸಲಾಗಿದೆ ಎಂದು‌ ಅವರು ಹೇಳಿದ್ದಾರೆ.

Comments are closed.