ನಮ್ಮ ಮೆಟ್ರೋ ಮೂಲಕ 5ನೇ ಬಾರಿಗೆ ಯಶಸ್ವಿಯಾದ ಮಾನವ ಅಂಗಾಂಗ ಸಾಗಣೆ
ನಮ್ಮ ಮೆಟ್ರೊ ಬೆಂಗಳೂರಿನ ಸಂಚಾರ ದಟ್ಟಣೆಗೆ ಒಂದು ಟಾನಿಕ್ ಇದ್ದ ಹಾಗೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ, ಅದನ್ನೂ ಮೀರಿದ ಅತ್ಯಂತ ಉಪಯುಕ್ತ ಕಾರ್ಯ ನಮ್ಮ ಮೆಟ್ರೊದಿಂದ ಆಗುತ್ತಿದೆ. ನಮ್ಮ ಬೆಂಗಳೂರು ಮೆಟ್ರೊದಲ್ಲಿ ಇದೀಗ ಐದನೇ ಬಾರಿಗೆ ಹೃದಯ ಸಾಗಣೆ ಮಾಡಲಾಗಿದೆ. ಈ ಹಿಂದೆ ಕೂಡ ಮೆಟ್ರೊ ಬಳಸಿ ಕಸಿ ಮಾಡಲು ಹೃದಯವನ್ನು ಸಾಗಿಸಲಾಗಿತ್ತು. ಈ ಕಾರಣದಿಂದಾಗಿ ನಮ್ಮ ಮೆಟ್ರೊ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಈ ಇತ್ತೀಚಿನ ಕಾರ್ಯಾಚರಣೆಯ ಸಂದರ್ಭದಲ್ಲಿ, ವೈದ್ಯಕೀಯ ತಂಡವು 7:32 ಗಂಟೆಗೆ ರೈಲು ಹತ್ತಿ, ನಿಖರವಾಗಿ 7:39 ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿದರು. ಈ ಪ್ರಮುಖ ಕಾರ್ಯದಲ್ಲಿ ವೈದ್ಯಕೀಯ ತಂಡಕ್ಕೆ ನಮ್ಮ ಮೆಟ್ರೋದ ಭದ್ರತಾ ಅಧಿಕಾರಿಗಳು ಮತ್ತು ನಿಲ್ದಾಣದ ಸಿಬ್ಬಂದಿ ಸಂಪೂರ್ಣವಾಗಿ ನೆರವಾದರು. ಬಳಿಕ, 8:12 ಕ್ಕೆ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಯಿತು. ನಂತರ, ಆಸ್ಪತ್ರೆಯಲ್ಲಿ ರೋಗಿಗೆ ಯಶಸ್ವಿಯಾಗಿ ಹೃದಯ ಜೋಡಣೆ (ಕಸಿ) ಮಾಡಲಾಯಿತು.
ಇದನ್ನೂ ಓದಿ: ನೀವು ಕಟ್ಟಿದ ಸಾಲದ ಬಡ್ಡಿಯನ್ನು ಸರ್ಕಾರ ಮರಳಿ ನೀಡುತ್ತೆ
ನಮ್ಮ ಮೆಟ್ರೋ ಮೂಲಕ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಣೆ ಮಾಡಿದ ಐದನೇ ಬಾರಿಯ ಯಶಸ್ವಿ ಕಾರ್ಯಾಚರಣೆ ಇದಾಗಿದೆ. ಇದು ಬೆಂಗಳೂರಿನಲ್ಲಿ ಜೀವ ಉಳಿಸುವ ವೈದ್ಯಕೀಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವಲ್ಲಿ BMRCL (ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್) ಹೊಂದಿರುವ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ.



