ನ್ಯಾಯಾಂಗ ನಿಂದನೆ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್‌ಗೆ ಜಾಮೀನು (Actor Chetan Bail)ದೊರೆತಿದೆ. ಶುಕ್ರವಾರ 32 ನೇ ಎಸಿಎಂಎಂ ನ್ಯಾಯಾಲಯ ನಟ ಚೇತನ್‌ಗೆ ಜಾಮೀನು ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆ ಷರತ್ತುಗಳೆಂದರೆ, ನಟ ಚೇತನ್ ಒಂದು ಲಕ್ಷ ರೂ. ಬಾಂಡ್ ಕೊಡಬೇಕು. ಇಬ್ಬರ ಶ್ಯೂರಿಟಿ ಹಾಕಬೇಕು. ಪೊಲೀಸರು ನಡೆಸುವ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ (Court) ಸೂಚನೆ ನೀಡಿದೆ.
ಮಂಗಳವಾರ ಸಂಜೆ ನಾಲ್ಕು ಗಂಟೆ ವೇಳೆಗೆ ಚೇತನ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಸುಮೋಟು ಪ್ರಕರಣ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ರನ್ನು ವಶಕ್ಕೆ ಪಡೆದಿದ್ದಾರೆ . ವೈದ್ಯಕೀಯ ಪರೀಕ್ಷೆ ಬಳಿಕ ಚೇತನ್ ರನ್ನ ಮಧ್ಯರಾತ್ರಿ 12 ಗಂಟೆ ವೇಳೆಗೆ ಕೋರಮಂಗಲದ ನ್ಯಾಯಾಧೀಶರ್ ಸಂಕೀರ್ಣದಲ್ಲಿ ಜಡ್ಜ್ ಮುಂದೇ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಿಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಿದ್ದಾರೆ. ಇನ್ನು ತಮ್ಮ ಪತಿಯನ್ನು ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡದೇ ಬಂಧಿಸಲಾಗಿದೆ ಎಂದು ಆರೋಪಿಸಿ ನಟ ಚೇತನ್ ಪತ್ನಿ ಮೇಘಾ ಪತಿ ಬಂಧನದ ಬಳಿಕ ಆರೋಪಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಲೈವ್ ನಡೆಸಿದ್ದರು.
ಮಾತ್ರವಲ್ಲ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಚೇತನರನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದರು. ಬಳಿಕ ಶೇಷಾದ್ರಿಪುರಂ ಪೊಲೀಸರು ಚೇತನ್ ಬಂಧನವನ್ನು ಖಚಿತಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ನನ್ನು ನ್ಯಾಯಾಧೀಶರ್ ನಿವಾಸಕ್ಕೆ ಹಾಜರು ಪಡಿಸಿದ ಬಳಿಕ ಮಾತನಾಡಿದ ಚೇತನ್ ಪತ್ನಿ ಮೇಘಾ, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ.ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ
ಯಾವುದೇ ಆಕ್ಷೇಪಾರ್ಹ ಪದಗಳನ್ನ ಬಳಸಿ ಚೇತನ್ ಮಾತನಾಡಿಲ್ಲ.ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಚೇತನ್ ವಿರುದ್ಧ ಕಾನೂನಿನ ಘನತೆಗೆ ಧಕ್ಕೆ ತರುವಂತ ಬರಹಗಳನ್ನು ಪೋಸ್ಟ್ ಮಾಡುವಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲಿನ ಜನಸಾಮಾನ್ಯರ ನಂಬಿಕೆಗೆ ಧಕ್ಕೆ ತರುವಂತ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪದಡಿ ಅವರನ್ನು ನ್ಯಾಯಾಂಗ ನಿಂದನೆ ಆರೋಪದಡಿ ಬಂಧಿಸಲಾಗಿತ್ತು.
(Actor Chetan Bail in offensive tweet case)