ಬೆಂಗಳೂರು : ರಾಜ್ಯದಾದ್ಯಂತ ತಲೆದೋರಿರುವ ಧರ್ಮ ಸಂಘರ್ಷದ ನಡುವೆಯೇ ಅಕ್ಷಯ ತೃತೀಯ (Akshaya Tritiya) ಸಂಪನ್ನಗೊಂಡಿದ್ದು, ದಾಖಲೆ ಪ್ರಮಾಣದ ಚಿನ್ನ ಮಾರಾಟ ಕಂಡಿದೆ. ಹಿಂದೂಗಳು ಮುಸ್ಲಿಂ ವ್ಯಾಪಾರಿಗಳ ಅಂಗಡಿಯಲ್ಲಿ ಚಿನ್ನ ಖರೀದಿಸಬೇಡಿ ಎಂದು ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು ಚಿನ್ನದ ವ್ಯಾಪಾರದ ಮೇಲೆ ಅಂತಹ ಪ್ರಭಾವವೇನೂ ಬೀರಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಾವಿರಾರು ಚಿನ್ನದ ಅಂಗಡಿಗಳಲ್ಲಿ ಚಿನ್ನದ ವ್ಯಾಪಾರ ಜೋರಾಗಿ ನಡೆದಿದ್ದು, ಸಾವಿರಾರು ಕೋಟಿ ವ್ಯವಹಾರ ವಹಿವಾಟು ನಡೆದಿದೆ.
ರಾಜ್ಯದಲ್ಲಿ ನಿನ್ನೆ 1680 ಕೋಟಿ ಚಿನ್ನ ಮಾರಾಟವಾಗಿದ್ದು ಬೆಂಗಳೂರು ಒಂದರಲ್ಲೇ 650 ಕೋಟಿ ಮೌಲ್ಯದ ಚಿನ್ನ ಖರೀದಿಯಾಗಿದೆ. ಅಕ್ಷಯ ತೃತೀಯದಂದು ಚಿನ್ನ ಹಾಗೂ ಚಿನ್ನದ ಆಭರಣ ಖರೀದಿಸಿದರೇ ಚಿನ್ನ ಹಾಗೂ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಸಾಮಾನ್ಯವಾಗಿ ದೇಶದಲ್ಲಿ ಅಕ್ಷಯ ತೃತೀಯದಂದು ಒಂದು ಗ್ರಾಂನಷ್ಟಾದರೂ ಚಿನ್ನ ಖರೀದಿಸುವ ಪದ್ದತಿ ಕುಟುಂಬಗಳಲ್ಲಿದೆ. ಅಕ್ಷಯ ತೃತೀಯದಂದು ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿಸಿ ಬಳಿಕ ಅದನ್ನು ಮನೆಯಲ್ಲಿ ಪೂಜೆ ಮಾಡಿ ಬಳಿಕ ಧರಿಸುವ ಪರಿಪಾಟವಿದೆ.
ಹೀಗಾಗಿ ಚಿನ್ನದ ಬೆಲೆ ಎಷ್ಟಿದ್ದರೂ ಅಕ್ಷಯಾ ತೃತೀಯದ ದಿನಚಿನ್ನ ಖರೀದಿಸುವ ಪದ್ಧತಿಯನ್ನು ಹಲವರು ಇಂದೂ ಪಾಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ,ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿನ್ನಾಭರಣ ಖರೀದಿ ಜೋರಾಗಿ ನಡೆದಿದ್ದು, ತಡರಾತ್ರಿವರೆಗೂ ಚಿನ್ನದಂಗಡಿಗಳಲ್ಲಿ ಜನರು ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ. ಇನ್ನು ಚಿನ್ನದ ಮಾರಾಟದ ಪ್ರಮಾಣವನ್ನು ಗಮನಿಸೋದಾದರೇ, ಒಂದು ಗ್ರಾಂ ನ ಚಿನ್ನದ ನಾಣ್ಯಗಳು ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿದೆ. ಕೆಲವರು 10-20 ಗ್ರಾಂ ಕಚ್ಚಾ ಚಿನ್ನ ಖರೀದಿಸಿ ಅಕ್ಷಯ ತೃತೀಯ ಆಚರಿಸಿದರೇ, ಇನ್ನೂ ಹಲವರು ಮಾಸಿಕ ಕಂತಿನಲ್ಲಿ ಹಣ ಪಾವತಿಸಿ ಚಿನ್ನಾಭರಣ ಖರೀದಿಸಿದ್ದಾರೆ.
ಮದುವೆ ಮತ್ತಿತರ ಸಮಾರಂಭಗಳ ಹಿನ್ನೆಲೆಯಲ್ಲಿ ಓಲೆ, ನೆಕ್ಲಸ್, ಲಾಂಗ್ ಚೈನ್, ಬಳೆ ಸೇರಿದಂತೆ ವಿವಿಧ ಬಗೆಯ ಆಭರಣಗಳನ್ನು ಖರೀದಿಯೂ ಜೋರಾಗಿದ್ದು, ಇದನ್ನು ಹೊರತು ಪಡಿಸಿದಂತೆ ಚಿನ್ನದ ನಾಣ್ಯ, ಚಿನ್ನದ ಸಣ್ಣ ಸಣ್ಣ ದೇವರ ವಿಗ್ರಹಗಳು ಕೂಡ ಮಾರಾಟವಾಗಿದೆ. ಒಟ್ಟು ದೇಶದಾದ್ಯಂತ 650 ಸಾವಿರ ಕೋಟಿ ಚಿನ್ನ ಮಾರಾಟವಾಗಿದೆ ಎನ್ನಲಾಗಿದ್ದು, ಕೊರೋನಾದಿಂದ ಕಂಗೆಟ್ಟ ಅಂಗಡಿಕಾರರಿಗೆ ಈ ವರ್ಷದ ಅಕ್ಷಯಾ ತೃತೀಯ ಕೊಂಚ ಸಮಾಧಾನ ತಂದಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ : ಶಾಲಾರಂಭ ಮುಂದೂಡಿಕೆ ಸಾಧ್ಯತೆ
ಇದನ್ನೂ ಓದಿ : ಕೊರೋನಾದಿಂದ ಕಂಗೆಟ್ಟವರಿಗೆ ಸಮಾಧಾನದ ಸುದ್ದಿ: ಏಪ್ರಿಲ್‌ನಲ್ಲಿ ದಾಖಲಾಯ್ತು ಅತಿ ಕಡಿಮೆ ಸಾವಿನ ಸಂಖ್ಯೆ
Akshaya Tritiya 1680 Crore Gold Sale Karnataka