Muruga Shri Swamiji : ಮುರುಘಾ ಶ್ರೀಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಕೃತ್ಯದ ಮಾಹಿತಿ ಎಳೆಎಳೆಯಾಗಿ ಬಿಚ್ಚಿಟ್ಟ ಒಡನಾಡಿ ಸಂಸ್ಥೆ

Muruga Shri Swamiji : ಶಿವಮೂರ್ತಿ ಶರಣರಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಹೊರ ಬಿದ್ದಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಈ ಇಬ್ಬರು ಮಕ್ಕಳ ಮೇಲೆ ಸ್ವಾಮೀಜಿ ಪ್ರತಿ ದಿನ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಸ್ವಾಮೀಜಿಗಳ ಕಿರುಕುಳದಿಂದ ಬೇಸತ್ತ ಮಕ್ಕಳು ಬೆಂಗಳೂರಿಗೆ ಬಂದು ಅಲ್ಲಿ ದೂರನ್ನು ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಇದು ಸಾಧ್ಯವಾಗದಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.


ಮಕ್ಕಳು ಆತ್ಮಹತ್ಯೆಗೆ ಮುಂದಾಗಿದ್ದ ಸಂದರ್ಭದಲ್ಲಿ ಯಾರೋ ಒಬ್ಬರು ಆಟೋ ಚಾಲಕರು ಇವರಿಗೆ ಸಹಾಯ ಮಾಡಿದ್ದಾರೆ. ನಮ್ಮ ಬಳಿ ಹೋಗಿ ನ್ಯಾಯ ಸಿಗುತ್ತೆ ಎಂದು ಕಳುಹಿಸಿಕೊಟ್ಟಿದ್ದಾರೆ. ನಮ್ಮಲ್ಲಿಗೆ ಬಂದ ಮಕ್ಕಳು ಸ್ವಾಮೀಜಿ ನೀಡುತ್ತಿದ್ದ ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ತಕ್ಷಣ ನಾವು ತಡಮಾಡದೇ ಮಕ್ಕಳ ಹಕ್ಕುಗಳ ರಕ್ಷಣಾ ಕೇಂದ್ರ ಮಾಹಿತಿ ನೀಡಿದ್ದೇವೆ. ಅವರು ಮಕ್ಕಳನ್ನು ಕೌನ್ಸೆಲಿಂಗ್​ ಮಾಡಿದ್ದಾರೆ ಎಂದು ಒಡನಾಡಿ ಮುಖ್ಯಸ್ಥ ಪರಶು ಹೇಳಿದ್ದಾರೆ.


ಮಕ್ಕಳ ಹೇಳಿಕೆ ಸತ್ಯವಾಗಿದೆ ಎಂದು ತಿಳಿದ ಬಳಿಕವೇ ನಿನ್ನೆ ರಾತ್ರಿ ನಜರ್​ಬಾದ್​ ಪೊಲೀಸ್​ ಠಾಣೆಯಲ್ಲಿ ಸ್ವಾಮೀಜಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ.ಶಿವಮೂರ್ತಿ ಶರಣರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದ ನಾಲ್ವರು ಆರೋಪಿಗಳು ಸ್ವಾಮೀಜಿಗೆ ಲೈಂಗಿಕ ದೌರ್ಜನ್ಯ ಎಸಗಲು ಸಹಾಯ ಮಾಡುತ್ತಿದ್ದರು. ನಾವು ಮಕ್ಕಳಿಗೆ ನ್ಯಾಯ ಒದಗಿಸುವ ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ ಎಂದು ಪರಶು ಹೇಳಿದರು.


ಸ್ವಾಮೀಜಿಯವರು ವಿಚಾರವಂತರು, ಪ್ರಜ್ಞಾವಂತರು, ಪ್ರಗತಿಪರರು ಎಂಬ ಭಾವನೆ ಇತ್ತು.ಮಕ್ಕಳ ಹೇಳಿಕೆ ಬಳಿಕ‌ ಸ್ವಾಮೀಜಿಯವರ ಬಗ್ಗೆ ನಮಗೆ ಅಸಹ್ಯ ಹುಟ್ಟಿಸಿದೆ.ಈ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಇದನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಸ್ವಾಮೀಜಿ ರಾಷ್ಟ್ರಮಟ್ಟದ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಮಕ್ಕಳಿಗೆ ನ್ಯಾಯ ಸಿಗಬೇಕು ಅಂದರೆ ಸೂಕ್ತ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಪರಶು ಆಗ್ರಹಿಸಿದ್ದಾರೆ.


ಇನ್ನು ಇದೇ ವಿಚಾರವಾಗಿ ಮಾತನಾಡಿದ ಒಡನಾಡಿ ಸಂಸ್ಥೆ ಕೌನ್ಸಿಲರ್​ ಸರಸ್ವತಿ, ಮಕ್ಕಳನ್ನ ಈಗಾಗಲೇ ಕೌನ್ಸಲಿಂಗ್ ಮಾಡಲಾಗಿದೆ. ಮಕ್ಕಳು ತಮಗೆ ಆದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.ಸ್ವಾಮಿಜಿ ಸಂಜೆ 6 ಗಂಟೆ ವೇಳೆಗೆ ಮಕ್ಕಳನ್ನ ಕರೆಸಿಕೊಳ್ಳುತ್ತಿದ್ದರು.ಆ ವೇಳೆ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ. ಇವರು ಮಾತ್ರವಲ್ಲದೇ ಮಠದಲ್ಲಿ ಇನ್ನಷ್ಟು ಮಕ್ಕಳು ಸ್ವಾಮೀಜಿಗಳಿಂದ ದೌರ್ಜನ್ಯ ಅನುಭವಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನು ಓದಿ : Heavy rainfall:ಭಾರಿ ಮಳೆ: ಈ ರಾಜ್ಯಗಳಿಗೆ ಐಎಂಡಿ ಹಳದಿ ಎಚ್ಚರಿಕೆ

ಇದನ್ನೂ ಓದಿ : snake crawled : ಮಲಗಿದ್ದ ಮಹಿಳೆಯ ಮೈ ಮೇಲೆ ಹೆಡೆಯೆತ್ತಿದ್ದ ಸರ್ಪ : ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ

Allegation of sexual assault on Muruga Shri Swamiji

Comments are closed.