Evening Snacks : ಸಂಜೆಯ ಟೀ ಟೈಮ್‌ಗೆ ಇದು ಬೆಸ್ಟ್‌ : ಶೇಂಗಾದಿಂದ ಮಾಡಿ ಈ ರೀತಿಯ ಸ್ನಾಕ್ಸ್‌

ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಏನೋ ಒಂದು ಬ್ರೇಕ್‌ ಬೇಕು ಎಂದು ಅನಿಸುವುದು ಸಹಜ. ಕಡಕ್‌ ಚಹಾದ ಜೊತೆ ಚಟಪಟಾ ಸ್ನಾಕ್ಸ್‌ (Evening Snacks) ಇದ್ದರಂತೂ ಇನ್ನೂ ಬೆಸ್ಟ್‌. ಪಕೋಡಾ, ಮಸಾಲಾ ಚಾಟ್‌, ವಡಾ ಪಾವ್‌, ಪಾವ್‌ ಭಾಜಿ ಇವುಗಳಲ್ಲಿ ಯಾವುದಾದರೂ ಒಂದು ಸ್ನಾಕ್ಸ್‌ ಇರದೇ ಸಂಜೆಯ ಟೀ ಟೈಮ್‌ ಮುಗಿಯುವುದೇ ಇಲ್ಲ. ಸಂಜೆಯ ಸಮಯಕ್ಕೆ ಹಲವಾರು ರುಚಿಯಾದ ಸ್ನಾಕ್ಸ್‌ಗಳಿವೆ. ಅವುಗಳು ಹೆಚ್ಚಿನ ಪ್ರೋಟಿನ್‌ ಅನ್ನೂ ಸಹ ನಿಮಗೆ ಕೊಡುತ್ತವೆ. ನಿಮಗೆ ಒಂದೇ ರೀತಿಯ ಸ್ನಾಕ್ಸ್‌ಗಳನ್ನು ತಿಂದು ಬೇಜಾರಾಗಿದ್ದರೆ ಇಲ್ಲಿ ಹೇಳಿರುವ ಸ್ನಾಕ್ಸ್‌ಗಳನ್ನು ಟ್ರೈ ಮಾಡಿ.

ಪ್ರೋಟೀನ್‌ ಅಂಶ ಹೆಚ್ಚಾಗಿರುವ ಶೇಂಗಾ (Peanut) ದಿಂದ ಮಾಡಬಹುದಾದ ಸ್ನಾಕ್ಸ್‌ಗಳು, ಒಂದೇ ರೀತಿಯ ಸ್ನಾಕ್ಸ್‌ ತಿಂದು ಆದ ಬೇಜಾರನ್ನು ಹೋಗಲಾಡಿಸಬಲ್ಲದು. ಈ ಸ್ನಾಕ್ಸ್‌ಗಳನ್ನು ತಯಾರಿಸಲು ಹೆಚ್ಚೇನೂ ಸಮಯ ಬೇಡ. ಒಂದು ಕಪ್‌ ಟೀ ತಯಾರಿಸುವುದರ ಒಳಗೆ ಇವುಗಳನ್ನು ಮಾಡಬಹುದು.

ಮಸಾಲಾ ಶೇಂಗಾ :

ಒಂದು ಪಾತ್ರೆಗೆ, ಎರಡು ಚಮಚ ಕಾರ್ನ್‌ ಹಿಟ್ಟು, ಒಂದು ಚಮಚ ಮೈದಾ ಮತ್ತು ಕಡ್ಲೆ ಹಿಟ್ಟು ಹಾಕಿ. ಅದಕ್ಕೆ ಉಪ್ಪು, ಮೆಣಸಿನ ಪುಡಿ, ಕಾಲು ಚಮಚ ಗರಂ ಮಸಾಲ ಪುಡಿ, ಓಮ್‌ ಕಾಳು ಸೇರಿಸಿ, ಸ್ವಲ್ಪ ನೀರು ಬೆರೆಸಿ ಬಜ್ಜಿ ಹಿಟ್ಟಿನ ರೀತಿಯಲ್ಲಿ ಬೆರೆಸಿಕೊಳ್ಳ. ಅದಕ್ಕೆ ಶೇಂಗಾ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ/ ನಂತರ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ. ಅದಕಕ್ಎ ಮೇಲಿನಿಂದ ಚಾಟ್‌ ಮಸಾಲ ಸೇರಿಸಿ. ‌ಹೀಗೆ ಚಟಪಟಾ ಮಸಾಲ ಶೇಂಗಾ ಮಾಡಿ.

ಇದನ್ನೂ ಓದಿ : Breakfast Recipes : ಬೆಳಗ್ಗಿನ ತಿಂಡಿಗೆ ಮಾಡಿ ಸಿಂಪಲ್‌ ರಾಗಿ ದೋಸೆ

ಶೇಂಗಾ–ಸವತೆಕಾಯಿ ಸಲಾಡ್‌ :

ಒಂದು ಕಪ್‌ ಹೆಚ್ಚಿದ ಸವತೆಕಾಯಿ, ಒಂದು ಚಮಚ ಸಕ್ಕರೆ, ಅರ್ಧ ಕಪ್‌ ತೆಂಗಿನ ತುರಿ, ಅರ್ಧ ಕಪ್‌ ಹುರಿದ ಶೇಂಗಾ, ಉಪ್ಪು, ಒಂದು ಚಮಚ ಲಿಂಬು ರಸ. ಇವೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಮೇಲಿನಿಂದ ಸಾಸಿವೆ, ಇಂಗಿನ ಒಂದು ಒಗ್ಗರಣೆ ಕೊಡಿ. ಶೇಂಗಾ–ಸವತೆಕಾಯಿ ಸಲಾಡ್‌ ರೆಡಿ. ಇದು ಟೀ ಟೈಮ್‌ ಮತ್ತು ಆರೋಗ್ಯ ಎರಡಕ್ಕೂ ಬೆಸ್ಟ್‌.

ಇದನ್ನೂ ಓದಿ : Best Chutneys : ಬೆಳಗಿನ ಉಪಹಾರಕ್ಕೆ 3 ಬೆಸ್ಟ್‌ ಚಟ್ನಿಗಳು : ಮಾಡುವುದು ಹೇಗೆ ?

(Evening Snacks Protein rich peanut snacks for evening tea time)

Comments are closed.