Anna Bhagya Scheme : ಅನ್ನಭಾಗ್ಯ ಯೋಜನೆ : 14 ಲಕ್ಷ ಪಡಿತರ ಖಾತೆಗೆ ಇನ್ನು ಜಮೆ ಆಗಿಲ್ಲ ಹಣ

ಬೆಂಗಳೂರು : ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ (Anna Bhagya Scheme) ಒಂದಾಗಿದೆ. ಸದ್ಯ ತಾಂತ್ರಿಕ ಸಮಸ್ಯೆಯಿಂದ 14 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ದಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಹಣ ಪಾವತಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.

ರಾಜ್ಯದಲ್ಲಿ 1.27 ಕೋಟಿ ಹೆಚ್ಚು ಅರ್ಹ ಕಾರ್ಡ್‌ಗಳಿವೆ. ಈ ಪೈಕಿ 1,03,68,897 ಕಾರ್ಡ್‌ಗಳ ವೆಚ್ಚ 605.90 ಕೋಟಿ ರೂ. ಬ್ಯಾಂಕ್ ಖಾತೆ ಸಮಸ್ಯೆ ಸೇರಿದಂತೆ ಇತರೆ ಕೆಲವು ತಾಂತ್ರಿಕ ದೋಷಗಳಿಂದ ರಾಜ್ಯಾದ್ಯಂತ 14 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ದಾರರಿಗೆ ಹಣ ಪಾವತಿಯಾಗಿಲ್ಲ. ಇದರಿಂದಾಗಿ ಈ ಕಾರ್ಡ್‌ದಾರರು ಅನ್ನ ಭಾಗ್ಯ ಯೋಜನೆಯ ಹಣದಿಂದ ವಂಚಿತರಾಗಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಕಳೆದ ತಿಂಗಳು 21 ಲಕ್ಷ ಕಾರ್ಡ್‌ಗಳಿಗೆ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗಿಲ್ಲ. ಈ ಪೈಕಿ 7 ಲಕ್ಷ ಕಾರ್ಡ್‌ಗಳ ತಾಂತ್ರಿಕ ಸಮಸ್ಯೆ ಬಗೆಹರಿದಿದ್ದು, ಉಳಿದ 14 ಲಕ್ಷ ಕಾರ್ಡ್‌ಗಳ ಸಮಸ್ಯೆಗಳ ಬಗ್ಗೆ ತಿಳಿಸಿ ಪರಿಹರಿಸಲು ಮತ್ತು ಖಾತೆಗೆ ಹಣ ಜಮಾ ಮಾಡಲು ಕ್ರಮಕೈಗೊಳ್ಳಲಾಗುವುದು. ಇದನ್ನೂ ಓದಿ : Bangalore Power Cut‌ : ಬೆಂಗಳೂರಿನಲ್ಲಿ ಎರಡು ದಿನ ವಿದ್ಯುತ್ ಕಡಿತ: ಯಾವ ಏರಿಯಾದಲ್ಲಿ ಯಾವ ದಿನ ಕರೆಂಟ್‌ ಇರಲ್ಲ, ಇಲ್ಲಿದೆ ಮಾಹಿತಿ

ಕಳೆದ ತಿಂಗಳು ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಈ ಬಾರಿ ಏಕಕಾಲಕ್ಕೆ ಹಣ ವರ್ಗಾವಣೆಯಾಗಲಿದೆ. 1.27 ಕೋಟಿಗೂ ಅಧಿಕ ಬಿಪಿಎಲ್ ಕಾರ್ಡ್‌ಗಳ ಪೈಕಿ ಸುಮಾರು 8 ಲಕ್ಷ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸಿಗದ ಕಾರಣ ಸೌಲಭ್ಯದಿಂದ ಕೈಬಿಡಲಾಗಿದೆ. ಮೂರು ತಿಂಗಳ ಕಾಲ ಪಡಿತರ ಪಡೆಯದ ಕಾರ್ಡುದಾರರು ಅನ್ನ ಭಾಗ್ಯ ಯೋಜನೆ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರಾಗುತ್ತಾರೆ.

ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಅಂತ್ಯೋದಯ ಕಾರ್ಡ್‌ಗಳನ್ನು ಹೊರಗಿಡಲಾಗಿದೆ. ಮೂರಕ್ಕಿಂತ ಹೆಚ್ಚು ಸದಸ್ಯರಿದ್ದರೆ ಖಾತೆಗೆ ಜಮಾ ಮಾಡಲಾಗುವುದು. ಕೆಲವರಿಗೆ ಖಾತೆ ಇಲ್ಲ, ಕೆಲವರಿಗೆ ನಿಷ್ಕ್ರಿಯ ಖಾತೆ, ಕೆಲವರು ತಪ್ಪು ಆಧಾರ್ ಸಂಖ್ಯೆ ನೀಡಿದ್ದಾರೆ. ಕೆಲವರ ಆಧಾರ್ ಪಡಿತರ ಚೀಟಿಗೆ ಲಿಂಕ್ ಆಗಿಲ್ಲ, ರಾಷ್ಟ್ರೀಯ ಮಾಹಿತಿ ಕೇಂದ್ರದ ಮಾಹಿತಿ ಲಭ್ಯವಾಗದಿರುವುದು ಸೇರಿದಂತೆ ನಾನಾ ಕಾರಣಗಳಿಂದ ಖಾತೆಗೆ ಅನ್ನ ಭಾಗ್ಯ ಹಣ ಪಾವತಿಯಾಗಿಲ್ಲ. ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

Anna Bhagya Scheme : Anna Bhagya Yojana : 14 lakh ration account has not been deposited yet

Comments are closed.