Arms Training Bajrang Dal : ಶಾಲಾ ಆವರಣದಲ್ಲಿ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ : ಮತ್ತೆ ಭುಗಿಲೆದ್ದ ವಿವಾದ

ಕೊಡಗು : ರಾಜ್ಯದಲ್ಲಿ ನಿಧಾನಕ್ಕೆ ಹಿಬಾಜ್ ಹಾಗೂ ಧರ್ಮಸಂಘರ್ಷ ತಣ್ಣಗಾಗುತ್ತಿದೇ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಧರ್ಮ ಸಂಘರ್ಷ ಹಾಗೂ ಕೋಮು ಸೌಹಾರ್ದ ಕದಡುವ ಸುದ್ದಿ ಕೊಡಗಿನಿಂದ ವರದಿಯಾಗಿದ್ದು, ಈ ಭಾರಿ ನಿಯಮ ಉಲ್ಲಂಘಿಸಿದ ಆರೋಪ ಭಜರಂಗದಳದ ವಿರುದ್ಧ ಕೇಳಿಬಂದಿದೆ. ಈಗಾಗಲೇ ಶಾಲಾ ಆವರಣದ ಒಳಗೆ ಹಿಜಬ್ ಗೆ ಅವಕಾಶ ಇಲ್ಲ ಎಂದು ನ್ಯಾಯಾಲಯ ಹಾಗೂ ಸರ್ಕಾರ ಕೂಡ ಆದೇಶಿಸಿದೆ. ಆದರೆ ಈಗ ಸಂಘ ಪರಿವಾರದವರು (Arms Training Bajrang Dal ಶಾಲಾ ಆವರಣದಲ್ಲೇ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಡಗಿನ ಸಾಯಿ ಶಂಕರ ಶಾಲೆಯಲ್ಲಿ ಸಂಘ ಪರಿವಾರದ ತರಬೇತಿ ನಡೆದಿದ್ದು, ಮೇ ಐದರಿಂದ 11 ರವರೆಗೆ ನಡೆದಿದೆ ಎನ್ನಲಾದ ತರಬೇತಿಯಲ್ಲಿ ಸಂಘ ಪರಿವಾರದ ನೂರಾರು ಯುವಕರು ಭಾಗಿಯಾಗಿದ್ದಾರೆ. ಈ ತರಬೇತಿಯಲ್ಲಿ ಯುವಕರಿಗೆ ತ್ರಿಶೂಲ ದೀಕ್ಷೆ ನೀಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಬಂದೂಕು ತರಬೇತಿ (Arms Training Bajrang Dal) ಕೂಡ ನೀಡಲಾಗಿದೆ. ಅಲ್ಲದೇ ಕಾರ್ಯಕ್ರಮದ‌ಕೊನೆಯ ದಿನ‌ನೂರಾರು ಯುವಕರಿಗೆ ತ್ರಿಶೂಲ ದೀಕ್ಷೆ ಸಹ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ತ್ರಿಶೂಲ ದೀಕ್ಷೆ ನೀಡಿರುವ ಫೋಟೋಗಳು ವೈರಲ್ ಆಗಿದೆ.

arms training Bajrang Dal on school premises Dispute in Kodagu

ಇನ್ನೂ ಶಾಲಾ ಆವರಣದಲ್ಲಿ ನಡೆದಿರುವ ಈ ಧರ್ಮಪ್ರಶಿಕ್ಷಣದ ವಿರುದ್ಧ ಎಡಪಂಥಿಯ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ತಮ್ಮ ಟ್ವೀಟ್ ನ್ನು ಸ್ವತಃ ಶಿಕ್ಷಣ ಸಚಿವರಿಗೂ ಟ್ಯಾಗ್ ಮಾಡಿದ್ದಾರೆ. ಕೇವಲ ಶಿಕ್ಷಣ ಸಚಿವರು ಮಾತ್ರವಲ್ಲದೇ, ಕೊಡಗು ಎಸ್ ಪಿ ಸೇರಿದಂತೆ ಪ್ರಮುಖರೆಲ್ಲರಿಗೆ ಟ್ಯಾಗ್ ಮಾಡಿದ್ದಾರೆ.

arms training Bajrang Dal on school premises Dispute in Kodagu

ಹಿಜಾಬ್ ಧಾರ್ಮಿಕವಸ್ತ್ರ ಎಂದು ಅವಕಾಶ ನೀಡದ ಮೇಲೆ ಶಾಲಾ ಆವರಣದಲ್ಲಿ ಧಾರ್ಮಿಕ ಸಂಘಟನೆಯ ಶಸ್ತ್ರಾಸ್ತ್ರ ತರಬೇತಿಗೆ ಹೇಗೆ ಅವಕಾಶ ನೀಡಿದ್ರೀ ಎಂಬ ಪ್ರಶ್ನೆ ಎಲ್ಲ ವಲಯದಿಂದ ಕೇಳಿಬಂದಿದೆ. ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಳ್ಳುವುದಾಗಿ ಸ್ಥಳೀಯ ಶಿಕ್ಷಣಾಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಈ ಪ್ರಶಿಕ್ಷಣ ಶಿಬಿರದಲ್ಲಿ ಬಿಜೆಪಿ ನಾಯಕರಾದ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ಸುಜಾ‌ ಕುಶಾಲಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ಎನ್ನಲಾಗಿದೆ.

arms training Bajrang Dal on school premises Dispute in Kodagu

ಈ ಕಾರ್ಯಾಗಾರದಲ್ಲಿ ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಕಾರ್ಯಕರ್ತರು ತರಬೇತಿ ಪಡೆದುಕೊಂಡಿದ್ದಾರೆ ಎಂಬ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ : ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ಫಿಕ್ಸ್‌ : ಸಿಎಂ ಸ್ಥಾನ ಕೊಟ್ಟು ಸಚಿವ ಸ್ಥಾನ ಪಡೆದ ಯಡಿಯೂರಪ್ಪ

ಇದನ್ನೂ ಓದಿ : ಐಐಎಂನ 28 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ : 58 ವಿದ್ಯಾರ್ಥಿಗಳು ಹೋಮ್ ಐಸೋಲೇಶನ್‌

arms training Bajrang Dal on school premises Dispute in Kodagu

Comments are closed.