Bandipur Narendra Modi Visit : ಏ. 9ಕ್ಕೆ ಬಂಡೀಪುರಕ್ಕೆ ಮೋದಿ ಭೇಟಿ: ಇಂದಿನಿಂದ 4 ದಿನ ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

ಚಾಮರಾಜನಗರ : (Bandipur Narendra Modi Visit ) ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚುನಾವಣೆ ಬೆನ್ನಲ್ಲೇ ಕೇಂದ್ರ ನಾಯಕರುಗಳು ರಾಜ್ಯಕ್ಕೆ ಮೇಲಿಂದ ಮೇಲೆ ಪ್ರವಾಸ ಕೈಗೊಳ್ಳುತ್ತಿದ್ದು, ರ್ಯಾಲಿ, ಸಾರ್ವಜನಿಕ ಸಭೆ, ರೋಡ್‌ ಶೋ ಇನ್ನಿತರ ಕಾರ್ಯಕ್ರಮಗಳ ಮೂಲಕ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಚುನಾವಣಾ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯಕ್ಕೆ ಏಳು ಬಾರಿ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಸಫಾರಿ ಸಡೆಸಲಿದ್ದಾರೆ.

ಈಗಾಗಲೇ ಏಳು ಬಾರಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಚುನಾವಣೆ ದಿನಾಂಕ ಹಾಗೂ ನೀತಿ ಸಂಹಿತೆ ಬಿಡುಗಡೆಯಾದ ನಂತರದಲ್ಲಿ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಚುನಾವಣೆ ದೃಷ್ಟಿಯಲ್ಲಿ ಜನರನ್ನು ಮೋದಿ ಮೋಡಿ ಮಾಡಲಿದ್ದಾರೆ. ಏಪ್ರಿಲ್‌ 9 ರಂದು ರಾಷ್ಟ್ರೀಯ ಹುಲಿ ದಿನವಾಗಿದ್ದು, ಹುಲಿ ಯೋಜನೆಗೆ ಐವತ್ತು ವರ್ಷ ತುಂಬಿದ ಹಿನ್ನಲೆಯಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮೂರು ದಿನಗಳ ಕಾಲ ಮೆಗಾ ಕಾರ್ಯಕ್ರಮಕ್ಕೆ ಚಾಲನೆ ಕೂಡ ನೀಡಲಿದ್ದಾರೆ.

ಇದಲ್ಲದೇ ಇತ್ತೀಚಿನ ಹುಲಿ ಗಣತಿ ವರದಿ, ಹುಲಿ ಸಂರಕ್ಷಣೆಗಾಗಿ ಸರಕಾರ ಕೈಗೊಂಡ ಕ್ರಮಗಳ ವರದಿ ಹಾಗೂ ನಾಣ್ಯ ಸ್ಮರಣಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ. ರಾಜ್ಯಕ್ಕೆ ಮೋದಿ ಭೇಟಿ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದಾಗಿ ಏಪ್ರಿಲ್‌ 6 ಅಂದರೆ ಇಂದಿನಿಂದ ಏಪ್ರಿಲ್‌ 9 ರವರೆಗೆ ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌, ಲಾಡ್ಜ್‌ ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಡಿಸಿ ಆದೇಶ ಹೊರಡಿಸಿದ್ದು, ನಾಲ್ಕು ದಿನಗಳ ಕಾಲ ಬಂಡೀಪುರದಲ್ಲಿ ಸಫಾರಿ ಬಂದ್‌ ಇರಲಿದೆ.

ಇದನ್ನೂ ಓದಿ : ತುಪ್ಪ ಬೇಕು ತುಪ್ಪಾ; ರಾಜ್ಯದಲ್ಲಿ ಕೆಎಂಎಫ್‌ ಇದ್ರೂ ತುಪ್ಪಕ್ಕೆ ಬರ, ಹೊಟೇಲ್ – ಬೇಕರಿ ಮಾಲೀಕರ ಪರದಾಟ

ಪ್ರಧಾನಿ ಮೋದಿ ಅವರ ಬಂಡೀಪುರ ಪ್ರವಾಸದ ಸಂಪೂರ್ಣ ವಿವರ :
ಏ. 8 ರಂದು ರಾತ್ರಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಗಮಿಸುವ ಮೋದಿ ಅವರು ಇಲ್ಲಿನ ರ್ಯಾಡಿಸನ್‌ ಬ್ಲೂ ಹೋಟೆಲ್‌ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಿಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಫ್ಟರ್‌ ಮೂಲಕವಾಗಿ ಬಂಡೀಪುರಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ 9:30 ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ತಮಿಳುನಾಡಿನ ನೀಲಗಿರಿಗೆ ಪ್ರಯಾಣ ಬೆಳೆಸಲಿದ್ದು, ಆನೆ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪುನಃ ಮೈಸೂರಿಗೆ ಅಗಮಿಸಲಿರುವ ಮೋದಿ ಕೆಎಸ್‌ಒಯು ನ ಘಟಿಕೋತ್ಸವ ಭವನದಲ್ಲಿ ನಡೆಯುವ ಹುಲಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರದಲ್ಲಿ ದೆಹಲಿಗೆ ವಾಪಾಸ್‌ ತೆರಳಲಿದ್ದಾರೆ.

Bandipur Narendra Modi Visit : A. Modi’s visit to Bandipur at 9: Safari, resort stays closed for tourists in Bandipur for 4 days from today

Comments are closed.