Ram charan-Upasana : ದುಬೈನಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಅದ್ಧೂರಿ ಬೇಬಿ ಶವರ್

ತೆಲುಗು ನಟ ರಾಮ್‌ಚರಣ್‌ ತೇಜ್‌ ಹಾಗೂ ಉಪಾಸನಾ ಕೋನಿಡಲ ದಂಪತಿಗಳು (Ram charan-Upasana) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ನಟ ಚಿರಂಜೀವಿ ಸೊಸೆ ಉಪಾಸನಾ ಗರ್ಭಿಣಿಯಾಗಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದೀಗ ನಟ ರಾಮ್‌ಚರಣ್‌ ತೇಜ್‌ ಹಾಗೂ ಉಪಾಸನಾ ವಾರಾಂತ್ಯದಲ್ಲಿ ದುಬೈನಲ್ಲಿ ತಮ್ಮ ಬೇಬಿ ಶವರ್ ಆಚರಿಸಿಕೊಂಡಿದ್ದಾರೆ. ಈ ಆತ್ಮೀಯರ ಕೂಟದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಸಾಕ್ಷಿಯಾಗಿದ್ದರು. ಬೇಬಿ ಶವರಗಾಗಿ ಆಚರಿಸುವ ಸುಲುವಾಗಿ ರಾಮ್‌ಚರಣ್‌ ದಂಪತಿಗಳು ಆಚರಿಸಲು ವಿಶ್ವದಾದ್ಯಂತ ಹಾರಿದ್ದಾರೆ.

ಈ ಸಂತೋಷದ ಕ್ಷಣವನ್ನು ಉಪಾಸನಾ ಅವರ ಸಹೋದರಿಯರಾದ ಅನುಷ್ಪಾಲಾ ಕಾಮಿನೇನಿ ಮತ್ತು ಸಿಂಧೂರಿ ರೆಡ್ಡಿ ಅವರು ಆಯೋಜಿಸಿದ್ದು, ಅವರು ಬೇಬಿ ಶವರ್‌ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದ್ದಾರೆ. ಉಪಾಸನಾ ಅಜ್ಜಿ ತನ್ನ ಸೊಬಗಿನಿಂದ ಮನ ಕದ್ದಳು ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಉಪಾಸನಾ ತಮ್ಮ ಪತಿ ರಾಮ್ ಚರಣ್ ಅವರೊಂದಿಗಿನ ಆಚರಣೆಯ ವಿಶೇಷ ನೆನಪುಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಉಪಾಸನಾ ಹೆರಿಗೆಯನ್ನು ಅಮೇರಿಕಾದಲ್ಲಿ ಮಾಡಿಸುವ ಸುದ್ದಿಯನ್ನು ನಟ ರಾಮ್‌ಚರಣ್‌ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ಹೆರಿಗೆ ಮಾಡಿಸುವ ಡಾಕ್ಟರ್‌ನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಬೇರೆ ಯಾರು ಅಲ್ಲ ಅಮೇರಿಕಾದ ಪ್ರಸಿದ್ಧ ಗೈನಕಾಲಜಿಸ್ಟ್‌ ಜೆನ್ನಿಫರ್‌ ಆಸ್ಟನ್‌ “ಗುಡ್‌ ಮಾರ್ನಿಂಗ್‌ ಅಮೇರಿಕಾ” ಶೋನ ಸಹ ನಿರೂಪಕಿ ಆಗಿದ್ದಾರೆ. ತನ್ನ ಪತ್ನಿ ಅಮೇರಿಕಾಗೆ ಬರುತ್ತಾಳೆ. ಡೆಲಿವರಿಗೆ ನೀವು ಸಿದ್ಧರಿದ್ದರೆ ಚೆನ್ನಾಗಿರುತ್ತದೆ ಎಂದು ಜೆನಿಫರ್‌ ಆಸ್ಟನ್‌ ಬಳಿ ಕೇಳಿದ್ದಾರೆ. ಅದಕ್ಕೆ ಜೆನ್ನಿಫರ್‌ ಓಕೆ ಎಂದಿದ್ದಾರೆ.

ಇದನ್ನೂ ಓದಿ : ಅಭಿಷೇಕ್‌ ಅಂಬರೀಶ್‌ – ಅವಿವಾ ಬಿದ್ದಪ್ಪ ವಿವಾಹ : ಮೊದಲ ಆಮಂತ್ರಣ ಪತ್ರಿಕೆ ಕೊಟ್ಟು ಪ್ರಧಾನಿ ಮೋದಿಯನ್ನು ಮದುವೆಗೆ ಆಹ್ವಾನಿಸಿದ ಸಂಸದೆ ಸುಮಲತಾ

ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ : ಪುಷ್ಪ 2 ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಿನಿತಂಡ

ಆಸ್ಕರ್‌ಗೆ ಮುನ್ನ ‘ಆರ್‌ಆರ್‌ಆರ್‌’ ಸ್ಟಾರ್ ಸಿನಿಮಾದ ಪ್ರಚಾರಕ್ಕೆ ಹೋದಲ್ಲೆಲ್ಲಾ ಉಪಾಸನಾ ಕಾಮಿನೇನಿ ಕೊನಿಡೇಲಾ ರಾಮ್ ಚರಣ್ ಪಕ್ಕದಲ್ಲಿದ್ದರು . ಎಸ್‌ಎಸ್ ರಾಜಮೌಳಿ ನಿರ್ದೇಶನದ ಈ ವರ್ಷದ ಮಾರ್ಚ್‌ನಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಮುಂದಿನ ಸಿನಿಮಾಗಳ ವಿಚಾರಕ್ಕೆ ಬಂದರೆ ನಟ ರಾಮ್‌ಚರಣ್ ಇನ್ನು ಹೆಸರಿಡದ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಬುಚ್ಚಿಬಾಬು ನಿರ್ದೇಶನದ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Ram Charan-Upasana: Ram Charan’s wife Upasana’s grand baby shower in Dubai

Comments are closed.