ನಿಮ್ಮ ಮಗು ಸೇಫ್ ಆಗಿದೆಯೇ ? ಬೆಂಗಳೂರಲ್ಲಿ ಕುಡಿದು ಶಾಲಾ ಬಸ್ ಚಲಾಯಿಸಿದ 59 ಡ್ರೈವರ್‌ ಅರೆಸ್ಟ್‌

ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ವಿಶೇಷ 'ಡ್ರಂಕ್ ಆ್ಯಂಡ್ ಡ್ರೈವ್' ಕಾರ್ಯಾಚರಣೆ ನಡೆಸಿದರು. ಈ ವೇಳೆ ಖಾಸಗಿ ಶಾಲಾ ಬಸ್ ಚಾಲಕರ ಬೇಜವಾಬ್ದಾರಿತನ ಕಂಡು ಸ್ವತಃ ಪೊಲೀಸರೇ ಆತಂಕಗೊಂಡಿದ್ದಾರೆ.

ಬೆಂಗಳೂರು : ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುತ್ತಿದ್ದೇವೆ ಎಂಬ ಭರವಸೆಯಲ್ಲಿರುವ ಪೋಷಕರಿಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಭರ್ಜರಿ ಶಾಕ್ ನೀಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಾಲಾ ವಾಹನಗಳ ಚಾಲಕರೇ ಮದ್ಯದ ಅಮಲಿನಲ್ಲಿ ಸ್ಟೀರಿಂಗ್ ಹಿಡಿದು ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಡ್ರಿಂಕ್‌ & ಡ್ರೈವ್‌ ಪೊಲೀಸರಿಂದ’ಸ್ಪೆಷಲ್ ಆಪರೇಷನ್’:

ಶುಕ್ರವಾರ (ಮಾರ್ಚ್ 27) ಮುಂಜಾನೆ ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ವಿಶೇಷ ‘ಡ್ರಂಕ್ ಆ್ಯಂಡ್ ಡ್ರೈವ್’ ಕಾರ್ಯಾಚರಣೆ ನಡೆಸಿದರು. ಈ ವೇಳೆ ಖಾಸಗಿ ಶಾಲಾ ಬಸ್ ಚಾಲಕರ ಬೇಜವಾಬ್ದಾರಿತನ ಕಂಡು ಸ್ವತಃ ಪೊಲೀಸರೇ ಆತಂಕಗೊಂಡಿದ್ದಾರೆ. ಕೇವಲ ಶಾಲಾ ಬಸ್ ಮಾತ್ರವಲ್ಲದೆ, ರಸ್ತೆಯಲ್ಲಿ ಅತೀ ವೇಗವಾಗಿ ಸಂಚರಿಸುವ ನೀರಿನ ಟ್ಯಾಂಕರ್ ಚಾಲಕರೂ ಸಹ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ.

ಪೊಲೀಸ್ ಕಾರ್ಯಾಚರಣೆಯ ಅಂಕಿಅಂಶಗಳು:

  • ಮದ್ಯ ಸೇವಿಸಿದ್ದ ಶಾಲಾ ಬಸ್ ಚಾಲಕರು: 59
  • ಕುಡಿದು ಟ್ಯಾಂಕರ್ ಚಾಲನೆ ಮಾಡುತ್ತಿದ್ದವರು: 14
  • ಒಟ್ಟು ದಾಖಲಾದ ಪ್ರಕರಣಗಳು: 73
  • ಡ್ರಿಂಕ್‌ & ಡ್ರೈವ್‌ : ಡಿಎಲ್ (DL) ರದ್ದು

ಕುಡಿದು ಶಾಲಾ ವಾಹನ ಚಲಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತೀಕ್ ರೆಡ್ಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಒಟ್ಟು 73 ಚಾಲಕರ ವಿರುದ್ಧ ಐಎಂವಿ (IMV) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇವರೆಲ್ಲರ ಚಾಲನಾ ಪರವಾನಗಿಯನ್ನು (Driving License) ಕಾಯಂ ಆಗಿ ಅಮಾನತುಗೊಳಿಸಲು ಆರ್‌ಟಿಒ (RTO) ಕಚೇರಿಗೆ ಶಿಫಾರಸು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Also Read : ಗುಡ್ ನ್ಯೂಸ್: ನಾಳೆ, ನಾಡಿದ್ದು ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಓಪನ್! ಕಂದಾಯ ಇಲಾಖೆ ಮಹತ್ವದ ಆದೇಶ

ಶಾಲಾ ಆಡಳಿತ ಮಂಡಳಿಗಳ ವಿರುದ್ದ ಆಕ್ರೋಶ:

ಲಕ್ಷಾಂತರ ರೂಪಾಯಿ ಫೀಸು ಪಡೆಯುವ ಪ್ರತಿಷ್ಠಿತ ಶಾಲೆಗಳು ಚಾಲಕರ ನೇಮಕಾತಿ ವೇಳೆ ಕನಿಷ್ಠ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮಕ್ಕಳ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಶಾಲೆಗಳು ಇಂತಹ ಘಟನೆಗಳಿಗೆ ನೇರ ಹೊಣೆಯಾಗಬೇಕೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Also Read : ಸೌಜನ್ಯ ಕೇಸ್‌ಗೆ ಬಿಗ್ ಟ್ವಿಸ್ಟ್: ಸುಪ್ರೀಂ ಕೋರ್ಟ್ ಮಹತ್ವದ ಆದೇಶ ?

ರಾಜ್ಯದಾದ್ಯಂತ ಪೊಲೀಸರಿಂದ ಕಾರ್ಯಾಚರಣೆಗೆ ಆಗ್ರಹ

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕುಡಿದು ಶಾಲಾ ವಾಹನ ಚಲಾಯಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿಯೂ ಇಂತಹ ಡ್ರೈವ್‌ ನಡೆಸಬೇಕೆಂದು ಪೋಷಕರು ಆಗ್ರಹಿಸುತ್ತಿದ್ದಾರೆ. ಡ್ರಿಂಕ್‌ ಆಂಡ್‌ ಡ್ರೈವ್‌ ಪ್ರಕರಣಗಳಿಂದಾಗಿಯೇ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಲಕ್ಷಾಂತರ ಮಕ್ಕಳ ಜೀವದ ಜೊತೆಗೆ ಚೆಲ್ಲಾಟ ಆಡುವ ಚಾಲಕರು ಮಾತ್ರವಲ್ಲ, ಇಂತಹ ಘಟನೆಗೆ ಅವಕಾಶ ಕಲ್ಪಿಸುವ ಶಾಲಾ ಆಡಳಿತ ಮಂಡಳಿಯ ವಿರುದ್ದ ಕ್ರಮಕ್ಕೂ ಆಗ್ರಹಿಸಿದ್ದಾರೆ.

Bangalore 59 School Bus Driver Caught Drunk at the Wheel

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories