ಭಾನುವಾರ, ಏಪ್ರಿಲ್ 27, 2025
HomekarnatakaDengue Fever : ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆರ್ಭಟ : 15 ದಿನದಲ್ಲಿ 744 ಮಂದಿಗೆ...

Dengue Fever : ಕೊರೊನಾ ಬೆನ್ನಲ್ಲೇ ಡೆಂಗ್ಯೂ ಆರ್ಭಟ : 15 ದಿನದಲ್ಲಿ 744 ಮಂದಿಗೆ ಜ್ವರ

- Advertisement -

ಬೆಂಗಳೂರು : ಈಗಷ್ಟೇ ಕೊರೊನಾ ಮಹಾಮಾರಿಯಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿರುವ ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ‌ ಕಾಡೋ ಡೆಂಘಿ (Dengue Fever) ಸಮಸ್ಯೆ ಸಿಲಿಕಾನ್ ಸಿಟಿಯನ್ನು ಈ ಬಿರು ಬೇಸಿಗೆಯಲ್ಲೇ ಕಾಡಲಾರಂಭಿಸಿದ್ದು, ಬಿಬಿಎಂಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರಲ್ಲಿ ಡೆಂಘಿ ಪ್ರಕರಣಗಳು (Dengue Fever) ವೇಗವಾಗಿ ಹರಡುತ್ತಿವೆ. ಬೆಂಗಳೂರಿನಲ್ಲಿ ಕಳೆದ 15 ದಿನದಲ್ಲಿ186 ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ವರದಿಯಾಗಿದ್ದು, ರಾಜ್ಯಾದ್ಯಂತ 744 ಕೇಸ್ ಗಳು ವರದಿಯಾಗಿದೆ. ಇನ್ನು ಬೆಂಗಳೂರಿನ ವಲಯವಾರು ಡೆಂಘಿ ಕೇಸ್ ಗಳು ಎಷ್ಟಿವೆ ಅನ್ನೋದನ್ನು ನೋಡೋದಾದರೇ,

Bangalore dengue fever After Corona hike in 744 case In just 15 Days
ಬಿಬಿಎಂಪಿ ಕಚೇರಿ

ಬೆಂಗಳೂರಿನಲ್ಲಿ ದಾಖಲಾದ ಡೆಂಗ್ಯೂ (Dengue Fever )ಪ್ರಕರಣಗಳ ವಿವರ :

  • ಪೂರ್ವ ವಲಯ – 69
  • ಪಶ್ಚಿಮ ವಲಯ – 26
  • ದಕ್ಷಿಣ ವಲಯ – 26
  • ಮಹದೇವಪುರ – 33
  • ಯಲಹಂಕ – 16
  • RR ನಗರ- 7
  • ಬೊಮ್ಮನ ಹಳ್ಳಿ -6
  • ದಾಸರಹಳ್ಳಿ -3

ಚಿಕೂನ್ ಗುನ್ಯಾ ಪ್ರಕರಣಗಳ ವಿವರ

  • ದಕ್ಷಿಣ ವಲಯ – 2
  • ಯಲಹಂಕ -1

ಬೆಂಗಳೂರು ನಗರದಲ್ಲಿ ಡೆಂಘಿ ಕೇಸ್ ಗಳು ಹೆಚ್ಚಾಗ್ತಿದ್ದಂತೆ ಅಲರ್ಟ್ ಆದ ನಗರ ಆರೋಗ್ಯ ಇಲಾಖೆ ಎಲ್ಲಿ ಡೆಂಘೀ ಕೇಸ್ ಗಳು ಹೆಚ್ಚಳವಾಗ್ತಿವೆದೆಯೋ ಅಲ್ಲಿ ಸೊಳ್ಳೆಗಳ ನಿರ್ಮೂಲನೆಗೆ ಔಷಧಿ ಸಿಂಪಡನೆ ಕಾರ್ಯ ಆರಂಭಿಸಿದೆ. ಮಾತ್ರವಲ್ಲ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ಸದ್ಯ ಬೇಸಿಗೆ ಆಗಿರೋದ್ರಿಂದ ಹೆಚ್ಚಾಗಿ ಡೆಂಘೀ ಹರಡೋ ಪ್ರಮಾಣ ಹೆಚ್ಚಿಲ್ಲ. ಆದರೂ ಜನರು ನಿರ್ಲಕ್ಷಿಸಬಾರದು ಮುನ್ನೆಚ್ಚರಿಕೆ ವಹಿಸಬೇಕು. ಮನೆಯ ಸುತ್ತಮುತ್ತ ನೀರು ಶೇಖರಣೆಯಾಗಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮನವಿ ಮಾಡಿದ್ದಾರೆ. ಅಲ್ಲದೇ ಡೆಂಘಿ, ಚಿಕನ್ ಗುನ್ಯ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವಂತೆ ಬಿಬಿಎಂಪಿ ಸಾರ್ವಜನಿಕರಿಗೆ ಸೂಚನೆ ನೀಡಿದೆ.

Bangalore dengue fever After Corona hike in 744 case In just 15 Days

ಡೆಂಗ್ಯೂ (Dengue Fever) ಹರಡದಂತೆ ತಡೆಯಲು ಈ ಕ್ರಮ ಅನುಸರಿಸಿ

  • ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಪಯುಕ್ತ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಿ
  • ಮನೆಯಲ್ಲಿ ನೀರು ಸಂಗ್ರಹಿಸುವ ಪಾತ್ರೆ, ಡ್ರಮ್ ಗಳನ್ನು ಕನಿಷ್ಠ ವಾರಕ್ಕೊಂದು ಬಾರಿ ಸ್ವಚ್ಛಗೊಳಿಸಬೇಕು.
  • ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡಬಾರದು.
  • ಮೈ ತುಂಬಾ ಬಟ್ಟೆ ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು.
  • ಊಟಕ್ಕಿಂತ ಮುಂಚೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

ಒಟ್ಟಿನಲ್ಲಿ ಕೊರೋನಾ ಮೂರು ಅಲೆಗಳ ಕಾರಣಕ್ಕೆ ನಗರದಿಂದ ಹಳ್ಳಿಗಳಿಗೆ ಗುಳೇ ಹೋಗಿದ್ದ ಸಿಲಿಕಾನ್ ಸಿಟಿ ನಗರಕ್ಕೆ ಬರುತ್ತಿದ್ದಂತೆ ಡೆಂಘಿ ಕಾಟ ಎದುರಾಗಿದ್ದು ಬಿಬಿಎಂಪಿ ಗೆ ಒಂದಾದ‌‌ ಮೇಲೊಂದು ತಲೆ ನೋವು ಕಾಡಿದಂತಾಗಿದೆ.

ಇದನ್ನೂ ಓದಿ : ಮತ್ತೆ ವಿಶ್ವಕ್ಕೆ ಕೊರೋನಾ ಕಂಟಕ: ಚೀನಾದಲ್ಲಿ ಲಾಕ್ ಡೌನ್ ಜಾರಿ

ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

Bangalore dengue fever After Corona hike in 744 case In just 15 Days

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular