ಮಂಗಳವಾರ, ಏಪ್ರಿಲ್ 29, 2025
HomeCrime20 Rupees Murder : ಇಪತ್ತು ರೂಪಾಯಿ ವಿಚಾರಕ್ಕೆ ಸ್ನೇಹಿತನ ಕೊಲೆ : ಮೂವರ ಬಂಧನ

20 Rupees Murder : ಇಪತ್ತು ರೂಪಾಯಿ ವಿಚಾರಕ್ಕೆ ಸ್ನೇಹಿತನ ಕೊಲೆ : ಮೂವರ ಬಂಧನ

- Advertisement -

ಬೆಂಗಳೂರು : ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣರ ಆಸೆಗೆ ಕೊಲೆ ನಡೆದಿರೋದನ್ನು ನೋಡಿದ್ದೇವೆ. ಆದ್ರಿಲ್ಲಿ ಕೇವಲ 20 ರೂಪಾಯಿಯ ಆಸೆಗೆ ಗೆಳೆಯನ್ನೇ ಕೊಲೆ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಸಂಜಯ್‌ ಅಲಿಯಾಸ್‌ ಅಸ್ಸಾಮಿ (30 ವರ್ಷ) ಎಂಬಾತನೇ ಕೊಲೆಯಾದ ದುರ್ದೈವಿ. ಪಶ್ಚಿಮ ಬಂಗಾಳದ ದೀಪಕ್‌, ಜಾರ್ಖಂಡ್‌ನ ಹೇಮಂತ್‌, ತಮಿಳುನಾಡಿನ ಮಾದೇಶ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಜೀವನ ನಿರ್ವಹಣೆಗಾಗಿ ಚಿಂದಿ ಆಯುವ ಕೆಲಸವನ್ನು ಮಾಡುತ್ತಿದ್ದರು. ಸಂಜಯ್‌ ಈ ಹಿಂದೆ ಪಡೆದುಕೊಂಡಿದ್ದ 20 ರೂಪಾಯಿ ಸಾಲವನ್ನು ಮರಳಿಸುವಂತೆ ಕೇಳಿಕೊಂಡಿದ್ದಾರೆ.

ಆದರೆ ಸಂಜಯ್‌ ಬಳಿಯಲ್ಲಿ ಆರೋಪಿ ದೀಪಕ್‌ ಹಣ ಕೇಳುತ್ತಲೇ, ಸಂಜಯ್‌ ಜಗಳವಾಡುವುದನ್ನು ಶುರು ಮಾಡಿದ್ದ. ಈ ವೇಳೆಯಲ್ಲಿ ಹೇಮಂತ್‌ ಹಾಗೂ ಮಾದೇಶ್‌ ಇಬ್ಬರು ದೀಪಕ್‌ ಸಹಾಯಕ್ಕೆ ನಿಂತಿದ್ದಾರೆ. ಮೂವರು ಸೇರಿಕೊಂಡು ಮರದ ತುಂಡಿನಿಂದ ಹೊಡೆದ ಹಲ್ಲೆ ಮಾಡಿದ್ದಾರೆ. ಸಂಜಯ್‌ ಕೊಲೆಯಾಗುತ್ತಲೇ ಮೂವರು ಪರಾರಿಯಾಗಿದ್ದಾರೆ.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದ ಬೊಮ್ಮನಹಳ್ಳಿ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಆರೋಪಿಗಳು ಈ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 42 ವರ್ಷದ ಕಾಮುಕ ಅರೆಸ್ಟ್‌

ಇದನ್ನೂ ಓದಿ : ಡಿಬಾಸ್ ಫಾರಂ ಹೌಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ನ್ಯಾಯಾಂಗ ಬಂಧನಕ್ಕೆ

(Man Killed In Bangalore for Only 20 rs Arrested 3 accused )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular