ಭಾನುವಾರ, ಏಪ್ರಿಲ್ 27, 2025
Homekarnatakaಬೆಂಗಳೂರು ಉತ್ತರಕ್ಕೆ ಸದಾನಂದ ಗೌಡರ ಬದಲು ಸಿಟಿ ರವಿಗೆ ಟಿಕೆಟ್‌ ! ಹೈಕಮಾಂಡ್‌ಗೆ ತಲೆನೋವಾದ ಸಿಟಿ...

ಬೆಂಗಳೂರು ಉತ್ತರಕ್ಕೆ ಸದಾನಂದ ಗೌಡರ ಬದಲು ಸಿಟಿ ರವಿಗೆ ಟಿಕೆಟ್‌ ! ಹೈಕಮಾಂಡ್‌ಗೆ ತಲೆನೋವಾದ ಸಿಟಿ ರವಿ – ಶೋಭಾ ಟಿಕೆಟ್‌ ಫೈಟ್‌

- Advertisement -

Bangalore North Lok sabha constituency : ಬಿಜೆಪಿಯಲ್ಲಿ ಗೆಲ್ಲುವ ಕುದುರೆ ಎನ್ನಿಸಿಕೊಂಡಿದ್ದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿ.ಟಿ.ರವಿ (CT Ravi) ತಮ್ಮ ತಾಯ್ನೆಲದಲ್ಲೇ ಸೋತು ಸುಣ್ಣ ವಾಗಿದ್ದು ಈಗ ಹಳೆ ಸುದ್ದಿ. ಆದರೆ ಸೋಲನ್ನು ಗೆಲುವಾಗಿಸಿಕೊಂಡು ಒಂದು ಹೆಜ್ಜೆ ಮುಂದಕ್ಕೆ ಹೋಗಲು ಪ್ರಯತ್ನಿಸ್ತಿರೋ ಸಿ.ಟಿ.ರವಿ ತಮ್ಮ ಸ್ವಕ್ಷೇತ್ರ ಬಿಟ್ಟು ಬೇರೊಂದು ಲೋಕಸಭಾ ಕ್ಷೇತ್ರದ ಕಡೆ ಮುಖ ಮಾಡೋ ಸಿದ್ಧತೆ ನಡೆಸಿದ್ದಾರಂತೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಗೆದ್ದವರು ಹುದ್ದೆ ಉಳಿಸಿಕೊಳ್ಳಲು ಹಾಗೂ ಸೋತವರು ಗೆದ್ದು ಬೀಗಲು ಟಿಕೇಟ್ ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಯೋಗ ಮಾಡಲು ಹೋಗಿ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕೈಸುಟ್ಟುಕೊಂಡಿರೋ ಬಿಜೆಪಿ ಹೈಕಮಾಂಡ್ ಈ ಭಾರಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದೆ.

Bangalore North Lok sabha constituency CT Ravi Vs Shobha Karandlaje MP Ticket fight
Image Credit to Original Source

ಹೀಗಾಗಿ ರಾಜ್ಯದಾದ್ಯಂತ ಎಲ್ಲ ಕಾರ್ಯಕರ್ತರು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿ ನಿರ್ಧಾರಕ್ಕೆ ಬರೋದಾಗಿ ಬಿಜೆಪಿ ಹೇಳಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಉತ್ತರ ಕ್ಷೇತ್ರ ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಮಾಜಿಸಿಎಂ ಹಾಗೂ ಹಿರಿಯ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ರಾಜಕೀಯ ನಿವೃತ್ತಿಯ ಮಾತನ್ನಾಡಿದ್ದಾರೆ.

ಹೀಗಾಗಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಯಾರು ಎಂಬ ಲೆಕ್ಕಾಚಾರ ಆರಂಭವಾಗಿದೆ. ಈಗ ಬರ್ತಿರೋ ಎಕ್ಸಕ್ಲೂಸಿವ್ ಮಾಹಿತಿ ಪ್ರಕಾರ ಈ ಕ್ಷೇತ್ರಕ್ಕೆ ಇಬ್ಬರೂ ಲಿಂಗಾಯತ ನಾಯಕರು ಪೈಪೋಟಿಯಲ್ಲಿದ್ದಾರಂತೆ. ಈಗಾಗಲೇ ರಾಜ್ಯದ ಹಲವಾರು ಜವಾಬ್ದಾರಿ ನಿರ್ವಹಿಸಿ ಗೆದ್ದಿರೋ ಮಾಜಿ ಸಚಿವೆ ಹಾಗೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಉತ್ತರ ಕ್ಷೇತ್ರದ ಟಿಕೇಟ್ ಬಯಸಿದ್ದಾರಂತೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ.ರವಿ ಕೂಡ ತಮ್ಮ ಸೋಲನ್ನು ಗೆಲುವಿನಲ್ಲಿ ಬದಲಾಯಿಸಿಕೊಳ್ಳಲು ಈ ಕ್ಷೇತ್ರದ ಟಿಕೇಟ್ ನೀರಿಕ್ಷೆಯಲ್ಲಿದ್ದಾರಂತೆ.

ಇದನ್ನೂ ಓದಿ : ನಟಿ ರಮ್ಯ Vs ಸಂಸದೆ ಸುಮಲತಾ Vs ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಫೈಟ್ : ಲೋಕಸಭಾ ವಾರ್ ಗೆ ಸಿದ್ಧವಾಗ್ತಿದೆ ಮಂಡ್ಯ

ಬೆಂಗಳೂರಿನ ಎಲ್ಲ ಶಾಸಕರ ನ್ನು ವೈಯಕ್ತಿಕವಾಗಿ ಭೇಟಿ ಮಾಡಿರೋ ಸಿ.ಟಿ.ರವಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ತನ್ನ ಹೆಸರನ್ನು ಪ್ರಸ್ತಾಪಮಾಡಿದಾಗ ಬೆಂಬಲಿಸುವಂತೆ ಕೋರಿದ್ದಾರಂತೆ.ಕೇವಲ ಬೆಂಗಳೂರು ಮಾತ್ರವಲ್ಲ ಇತರ ರಾಜ್ಯಗಳ ಜೊತೆ ತಮಗಿರೋ ಬಾಂಧವ್ಯವನ್ನು ಬಳಸಿಕೊಂಡು ಅವರಿಂದಲೂ ಒತ್ತಡ ಹಾಕಿಸಿ ಬೆಂಗಳೂರು ಉತ್ತರದ ಟಿಕೇಟ್ ಪಡೆಯೋ ನೀರಿಕ್ಷೆಯಲ್ಲಿದ್ದಾರಂತೆ.

Bangalore North Lok sabha constituency CT Ravi Vs Shobha Karandlaje MP Ticket fight
Image Credit to Original Source

ಬೆಂಗಳೂರು ಉತ್ತರವೇ ಬೇಕೆಂದಲ್ಲ, ಒಂದೊಮ್ಮೆ ಚಿಕ್ಕಮಗಳೂರು- ಉಡುಪಿ ಲೋಕಸಭಾ ಕ್ಷೇತ್ರವನ್ನು ತಮಗೆ ಬಿಟ್ಟುಕೊಟ್ಟರೂ ಅಡ್ಡಿ ಇಲ್ಲ. ಆದರೆ ಲೋಕಸಭಾ ಟಿಕೇಟ್ ಮಾತ್ರ ಬೇಕೇ ಬೇಕು ಎಂದು ಸಿ.ಟಿ.ರವಿ ಪಟ್ಟು ಹಿಡಿದಿದ್ದಾರಂತೆ. ವಿಧಾನಸಭಾ ಚುನಾವಣೆಯ ಸೋಲಿಗೆ ಕೇವಲ ನಾನು ಮಾತ್ರ ಕಾರಣವಲ್ಲ. ನಾನು ದೇಶದ ವಿವಿಧ ಭಾಗಗಳಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸದಲ್ಲಿ ನಿರತವಾಗಿದ್ದೇವೆ.

ಇದನ್ನೂ ಓದಿ : ಅಂದು ಸಾಮಾನ್ಯ ಪತ್ರಕರ್ತ. ಇಂದು ಫೈಯರ್‌ ಬ್ರ್ಯಾಂಡ್‌ ಶಾಸಕ : ಆರ್‌ಎಸ್‌ಎಸ್‌, ಬಿಜೆಪಿ ಮನಗೆದ್ದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್‌

ಆದರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಪ್ರಶ್ನೆ ಬಂದಾಗ ನನ್ನ ನೆರವಿಗೆ ಯಾರೂ ಬರಲಿಲ್ಲ. ಹೀಗಾಗಿ ನಾನು ಸೋಲುವಂತಾಯಿತು.‌ಇದಕ್ಕಾಗಿ‌ ನನಗೆ ಚಿಕ್ಕಮಗಳೂರು ಹಾಗೂ ಉಡುಪಿ ಕ್ಷೇತ್ರದ ಲೋಕಸಭಾ ಟಿಕೇಟ್ ನೀಡಬೇಕು. ಒಂದೊಮ್ಮೆ ಈ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಸ್ಪರ್ಧಿಸುವುದಾದರೇ ಬೆಂಗಳೂರು ಉತ್ತರದಿಂದ ನನಗೆ ಟಿಕೇಟ್ ನೀಡಿ ಎಂದು ಹೈಕಮಾಂಡ್ ಗೆ ಸಿ.ಟಿ.ರವಿ ಒತ್ತಾಯಿಸಿದ್ದಾರಂತೆ.

ಮೂಲಗಳ ಮಾಹಿತಿ ಪ್ರಕಾರ ಸದ್ಯ ರಾಜ್ಯ ಬಿಜೆಪಿಗೆ ಸಿ.ಟಿ.ರವಿ ಅನಿವಾರ್ಯ. ಯಾವುದೇ ವಿಚಾರ ಬಂದ್ರೂ ಪಕ್ಷವನ್ನು ಕಾಂಗ್ರೆಸ್ ವಾಗ್ದಾಳಿಯಿಂದ ರಕ್ಷಿಸೋದು ಸಿ.ಟಿ.ರವಿ. ಹೀಗಾಗಿ ಸಿ.ಟಿ.ರವಿಗೆ ಖಡಾಖಂಡಿತವಾಗಿ ಟಿಕೆಟ್ ನಿರಾಕರಿಸೋದು ಬಿಜೆಪಿ ಹೈಕಮಾಂಡ್ ಗೂ ಸುಲಭವಲ್ಲ. ಹೀಗಾಗಿ ಬಹುತೇಕ ಚಿಕ್ಕಮಗಳೂರು ಅಥವಾ ಬೆಂಗಳೂರು ಉತ್ತರದಲ್ಲಿ ಒಂದು ಸ್ಥಾನದ ಟಿಕೇಟ್ ರವಿ ಪಾಲಾಗೋದು ಬಹುತೇಕ ಖಚಿತ ಎನ್ನಲಾಗಿದೆ.

ಇದನ್ನೂ ಓದಿ : ಬಿಜೆಪಿ ಅಸಮಾಧಾನಕ್ಕೆ ಸೈಲೆಂಟ್‌ ಆಗಿಯೇ ಮದ್ದೆರೆದ ರಾಜ್ಯಾಧ್ಯಕ್ಷ : ಬಿಎಸ್‌ ಯಡಿಯೂರಪ್ಪ ಹಾದಿಯಲ್ಲೇ ಪುತ್ರ ಬಿವೈ ವಿಜಯೇಂದ್ರ

Bangalore North Lok sabha constituency CT Ravi Vs Shobha Karandlaje MP Ticket fight

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular